ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಸೆಣಬಿನ ಪ್ಯಾಕೇಜಿಂಗ್‌ಗೆ ಸಚಿವ ಸಂಪುಟವು ಸೆಣಬು ವರ್ಷ 2021–22ರ ಜೆಪಿಎಂ ಮಸೂದೆ 1987ರ ಅಡಿ ಮೀಸಲು ಪ್ರಕಟಿಸಿದೆ


ಶೇ.100ರಷ್ಟು ದವಸಧಾನ್ಯಗಳನ್ನು, ಶೇ 20ರಷ್ಟು  ಸಕ್ಕರೆಯ ಸರಕುಗಳನ್ನು ಸೆಣಬಿನ ಚೀಲಗಳಲ್ಲಿ ಪ್ಯಾಕ್‌ ಮಾಡತಕ್ಕದ್ದು

Posted On: 10 NOV 2021 3:43PM by PIB Bengaluru

ಹಣಕಾಸು ವಿದ್ಯಮಾನಗಳ ಸಮಿತಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೆಣಬು ವರ್ಷ 2021–22ರಿಂದ (ಜುಲೈ 1–2021ರಿಂದ ಜೂನ್‌ 30, 2022ರವರೆಗೆ) ಸೆಣಬಿನ ಪ್ಯಾಕೇಜಿಂಗ್‌ಗೆ ಹಲವು ನೀತಿ ನಿಯಮಗಳನ್ನು ರೂಪಿಸಿದ್ದು, ದವಸಧಾನ್ಯಗಳನ್ನೆಲ್ಲ ಸಂಪೂರ್ಣವಾಗಿ ಶೇ 100ರಷ್ಟು ಸೆಣಬಿನ ಚೀಲದಲ್ಲಿಯೇ ಪ್ಯಾಕ್‌ ಮಾಡಬೇಕು. ಶೇ.20ರಷ್ಟು ಸಕ್ಕರೆಯ ಚೀಲಗಳೂ ಸೆಣಬಿನಿಂದಲೇ ತಯಾರಾಗಿರಬೇಕು ಎಂಬುದನ್ನು ಕಡ್ಡಾಯಗೊಳಿಸಿ ಮಸೂದೆಗೆ ಸಚಿವ ಸಂಪುಟವು ಅನುಮೋದನೆ ತೋರಿದೆ

ಸದ್ಯದ ಪ್ರಸ್ತಾವನೆಯಲ್ಲಿರುವ ನಿಯಮಗಳು, ಸೆಣಬಿನ ಕಚ್ಚಾ ಉತ್ಪಾದಕರಿಗೆ ಹಾಗೂ ಸೆಣಬಿನ ವಸ್ತುಗಳನ್ನು ಸಿದ್ಧಪಡಿಸುವವರ ಹಿತಾಸಕ್ತಿಯನ್ನು ಕಾಯುವಂತಿದೆ. ಸೆಣಬಿನ ಪ್ಯಾಕೇಜಿಂಗ್‌ ಉದ್ಯಮಕ್ಕೆ ಉತ್ತೇಜನ ನೀಡುವುದಲ್ಲದೆ ಆತ್ಮನಿರ್ಭರ್‌ ಭಾರತದ ಅಡಿಯಲ್ಲಿ ಸೆಣಬು ಉತ್ಪಾದನೆಯ ಶೇ 66.57ರಷ್ಟು ಭಾಗವನ್ನು ಪ್ಯಾಕೇಜಿಂಗ್‌ ಚೀಲಗಳಿಗೆ ಬಳಸಿಕೊಳ್ಳಲಾಗುತ್ತದೆ.

ಜೆಪಿಎಂ ಮಸೂದೆಯ ಅಡಿಯಲ್ಲಿ ತರುವ ಮೂಲಕ 0.37 ದಶಲಕ್ಷ ಜನರಿಗೆ ಸೆಣಬಿನ ಮಿಲ್‌ಗಳಲ್ಲಿ ಉದ್ಯೋಗಾವಕಾಶಗಳು ಹುಟ್ಟುತ್ತವೆ. ಜೊತೆಗೆ 4.0 ದಶಲಕ್ಷ ರೈತ ಕುಟುಂಬರಿಗೆ ಇದರಿಂದ ಅನುಕೂಲವಾಗಲಿದೆಸೆಣಬಿನ ಬಳಕೆಯಿಂದಾಗಿ ಪರಿಸರಕ್ಕೂ ಸಹಾಯವಾಗಲಿದೆ. ಇದು ಸಾವಯವ ಉತ್ಪನ್ನ ಆಗಿರುವುದರಿಂದ ಸಹಜವಾಗಿಯೇ ಪರಿಸರದಲ್ಲಿಯೂ ಕ್ಷೀಣಿಸುತ್ತದೆ. ಪುನರ್‌ಬಳಕೆ ಮಾಡಬಹುದು, ಸೆಣಬಿನ ಎಳೆಗಳನ್ನು ಮತ್ತೆ ಮತ್ತೆ ಬಳಸಬಹುದಾಗಿದೆ. ಸುಸ್ಥಿರ ಪರಿಸರಕ್ಕೆ ಪೂರಕವಾಗಿದೆ.  

ಸೆಣಬಿನ ಕೈಗಾರಿಕೆಯು ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ಹಾಗೂ ವಿಶೇಷವಾಗಿ ಪೂರ್ವ ಭಾರತದಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಪಶ್ಚಿಮ ಬಂಗಾಳ, ಬಿಹಾರ, ಓಡಿಶಾ, ಆಸ್ಸಾಮ್‌, ತ್ರಿಪುರಾ, ಮೇಘಾಲಯ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಣಬಿನ ಕೈಗಾರಿಕೆಗಳು ಸದೃಢವಾಗಿವೆಪೂರ್ವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ಸೆಣಬು ಮಹತ್ವದ ಬೆಳೆ ಹಾಗೂ ಕೈಗಾರಿಕೋದ್ಯಮವಾಗಿದೆ

ಜೆಪಿಎಂ ಆ್ಯಕ್ಟ್‌ ಪ್ರಕಾರ ಮೂರವರೆ ಲಕ್ಷಕ್ಕೂ ಮೀರಿದ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುತ್ತದೆ. ಸೆಣಬನ್ನು ಬೆಳೆಯುವ ನಲ್ವತ್ತು ಲಕ್ಷ ರೈತರಿಗೆ ಅನುಕೂಲವಾಗುತ್ತದೆ. ಜೆಪಿಎಂ ಮಸೂದೆ 1987 ಪ್ರಕಾರ ಸೆಣಬು ಬೆಳೆಗಾರರ ಹಿತಾಸಕ್ತಿ ಕಾಯ್ಉತ್ತದೆ. ಸೆಣಬು ಬೆಳೆಗಾರರು, ಕೆಲಸಗಾರರು, ಕ್ಷೇತ್ರದಲ್ಲಿ ಸೆಣಬಿನ ಉತ್ಪನ್ನಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವಂತಾಗುತ್ತದೆ. ಸೆಣಬಿನ ಬೆಳೆಯಲ್ಲಿ ಶೇ 75ರಷ್ಟು ಬೆಳೆಯನ್ನು ಸೆಣಬಿನ ಉತ್ಪನ್ನಗಳಿಗೆ ಬಳಸಲಾಗುತ್ತದೆ. ಇದರಲ್ಲಿ ಶೇ 90ರಷ್ಟು ಉತ್ಪನ್ನಗಳು ಸೆಣಬಿನ ಚೀಲಗಳಿಗಾಗಿಯೇ ಬಳಸಲಾಗುತ್ತದೆ. ಇದರಲ್ಲಿ ಬಹುಪಾಲು ಚೀಲಗಳನ್ನು ಫೂಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾಗೆ ಪೂರೈಸುತ್ತದೆ. ಸ್ಟೇಟ್‌ ಪ್ರೊಕ್ಯುರ್ಮೆಂಟ್‌ ಏಜೆನ್ಸಿಗಳಿಗೆ ಮಾರಾಟ ಮಾಡಲಾಗುತ್ತದೆ. ಉಳಿದದ್ದನ್ನು ರಫ್ತು ಮಾಡಲಾಗುತ್ತದೆ. ಇಲ್ಲವೇ ನೇರವಾಗಿ ಮಾರಾಟ ಮಾಡಲಾಗುತ್ತದೆ.

ಭಾರತ ಸರ್ಕಾರವು ದವಸಧಾನ್ಯಗಳನ್ನು ಪ್ಯಾಕೇಜ್‌ ಮಾಡಲು ಪ್ರತಿ ವರ್ಷವೂ 8ಸಾವಿರ ಕೋಟಿ ರೂಪಾಯಿಗಳಷ್ಟು ಸೆಣಬಿನ ಚೀಲಗಳನ್ನು ಖರೀದಿಸುತ್ತದೆ. ಹಾಗಾಗಿ ಸೆಣಬು ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಬೇಡಿಕೆಯಂತೂ ಇದ್ದೇ ಇದೆ

ಸೆಣಬಿನ ಚೀಲಗಳ ಉತ್ಪಾದನೆಯಲ್ಲಿ ಸರಾಸರಿ 30 ಲಕ್ಷ ಬೇಲ್‌ಗಳನ್ನು ಖರೀದಿಸಲಾಗುತ್ತದೆ. ಸೆಣಬಿನ ಬೆಳೆಗಾರರು ಹಾಗೂ ಉತ್ಪಾದಕರ ಸಂಪೂರ್ಣ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸೆಣಬಿನ ಚೀಲಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಖರೀದಿಸಲಾಗುವುದು.

***(Release ID: 1770643) Visitor Counter : 364