ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪೋಲೆಂಡ್‌ನಲ್ಲಿ ನಡೆದ ʻಐಎಸ್‌ಎಸ್‌ಎಫ್ ಅಧ್ಯಕ್ಷರ ಕಪ್‌ʼ ಪಂದ್ಯಾವಳಿಯಲ್ಲಿ ಪದಕ ಗೆದ್ದ ಮನು ಭಾಕರ್, ರಾಹಿ ಸರ್ನೋಬತ್, ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ ಅವರನ್ನು ಅಭಿನಂದಿಸಿದ ಪ್ರಧಾನಿ

प्रविष्टि तिथि: 10 NOV 2021 2:42PM by PIB Bengaluru

ಪೋಲೆಂಡ್‌ನಲ್ಲಿ ನಡೆದ ʻಐಎಸ್‌ಎಸ್‌ಎಫ್ ಅಧ್ಯಕ್ಷರ ಕಪ್‌ʼ ಶೂಟಿಂಗ್‌ ಪಂದ್ಯಾವಳಿಯಲ್ಲಿ ಪದಕ ಗೆದ್ದ ಭಾರತದ ಮನು ಭಾಕರ್, ರಾಹಿ ಸರ್ನೋಬತ್, ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಪೋಲೆಂಡ್‌ನಲ್ಲಿ ನಡೆದ ʻಐಎಸ್‌ಎಸ್‌ಎಫ್‌ ಅಧ್ಯಕ್ಷರ ಕಪ್ʼ ಶೂಟಿಂಗ್‌ ಪಂದ್ಯಾವಳಿಯಲ್ಲಿ @ISSF_Shooting ಪದಕ ಗೆದ್ದ ಮನು ಭಾಕರ್‌@realmanubhaker, ರಾಹಿ ಸರ್ನೋಬತ್ @SarnobatRahi, ಸೌರಭ್ ಚೌಧರಿ @SChaudhary2002 ಮತ್ತು ಅಭಿಷೇಕ್ ವರ್ಮಾ @abhishek_70007 ಅವರಿಗೆ ಅಭಿನಂದನೆಗಳು. ಕ್ರೀಡಾಪಟುಗಳ ಅದ್ಭುತ ಪ್ರದರ್ಶನದ ಬಗ್ಗೆ ಭಾರತದ ಜನತೆ ಹೆಮ್ಮೆ ಪಡುತ್ತಾರೆ. ಕ್ರೀಡಾಪಟುಗಳ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು," ಎಂದಿದ್ದಾರೆ.

***


(रिलीज़ आईडी: 1770599) आगंतुक पटल : 222
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam