ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಲ್.ಕೆ. ಅಡ್ವಾಣಿ ಅವರ ಜನ್ಮ ದಿನದಂದು ಅವರಿಗೆ ಶುಭ ಕೋರಿದ ಪ್ರಧಾನಮಂತ್ರಿ

Posted On: 08 NOV 2021 10:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್.ಕೆ. ಅಡ್ವಾಣಿ ಅವರ ಜನ್ಮ ದಿನದಂದು ಅವರಿಗೆ ಶುಭ ಕೋರಿದರು.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಗೌರವಾನ್ವಿತ ಅಡ್ವಾಣಿ ಅವರಿಗೆ ಜನ್ಮ ದಿನದ ಶುಭಾಶಯಗಳು. ಅವರ ದೀರ್ಘ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಪ್ರಾರ್ಥಿಸುತ್ತೇನೆ. ಜನರನ್ನು ಸಬಲೀಕರಣಗೊಳಿಸುವ ಮತ್ತು ನಮ್ಮ ಸಾಂಸ್ಕೃತಿಕ ಹೆಮ್ಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರ ಹಲವಾರು ಪ್ರಯತ್ನಗಳಿಗಾಗಿ ರಾಷ್ಟ್ರವು ಅವರಿಗೆ ಋಣಿಯಾಗಿದೆ. ಅವರು ತಮ್ಮ ಪಾಂಡಿತ್ಯ ಪೂರ್ಣ ಅನ್ವೇಷಣೆಗಳು ಮತ್ತು ಶ್ರೀಮಂತ ಭೌದ್ಧಿಕತೆಯಿಂದ ವ್ಯಾಪಕವಾಗಿ ಗೌರವಿತರಾಗಿದ್ದಾರೆ.." ಎಂದು ತಿಳಿಸಿದ್ದಾರೆ.

***(Release ID: 1770257) Visitor Counter : 74