ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಡಿಮೆ ಲಸಿಕೆ ಚುಚ್ಚಿಸಿದ ಜಿಲ್ಲೆಗಳೊಂದಿಗೆ ನವೆಂಬರ್ 3 ರಂದು ಪ್ರಧಾನಮಂತ್ರಿಯವರಿಂದ ಪರಿಶೀಲನಾ ಸಭೆ

प्रविष्टि तिथि: 31 OCT 2021 1:38PM by PIB Bengaluru

ಜಿ-20 ಶೃಂಗಸಭೆ ಮತ್ತು ಸಿಒಪ-26 ನಲ್ಲಿ ಭಾಗವಹಿಸಿ ದೇಶಕ್ಕೆ ಹಿಂದಿರುಗಿದ ತಕ್ಷಣ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 03,2021 ರಂದು ಮಧ್ಯಾಹ್ನ 12 ಗಂಟೆಗೆ ವಿಡಿಯೊ ಸಮಾವೇಶ ಮೂಲಕ ಲಸಿಕೆ ಚುಚ್ಚಿಸುವಿಕೆ ಕಡಿಮೆ ಗಾತ್ರದಲ್ಲಿ ನಡೆದ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.

ಮೊದಲ ಪ್ರಮಾಣದ 50% ಕ್ಕಿಂತ ಕಡಿಮೆ ಲಸಿಕೆ ಚುಚ್ಚಿಸುವಿಕೆ ಹೊಂದಿರುವ ಜಿಲ್ಲೆಗಳು ಮತ್ತು ಕೋವಿಡ್ ಲಸಿಕೆಯ ಎರಡನೇ ಪ್ರಮಾಣ ಕಡಿಮೆ ಹೊಂದಿರುವ ಜಿಲ್ಲೆಗಳು ಸಭೆಯಲ್ಲಿ ಒಳಗೊಂಡಿರುತ್ತದೆ. ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಇತರ ರಾಜ್ಯಗಳ ಲಸಿಕೆ ಚುಚ್ಚಿಸುವಿಕೆ ಕಡಿಮೆ ಗಾತ್ರದಲ್ಲಿ ನಡೆದ ಜಿಲ್ಲೆಗಳನ್ನು ಸೇರಿದಂತೆ ಒಟ್ಟು 40 ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾನ್ಯಾಯಾಧೀಶ(ಜಿಲ್ಲಾಧಿಕಾರಿ)ಗಳೊಂದಿಗೆ ಪ್ರಧಾನ ಮಂತ್ರಿ ಅವರು ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಈ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

***


(रिलीज़ आईडी: 1768213) आगंतुक पटल : 227
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Manipuri , Punjabi , Gujarati , Odia , Tamil , Telugu , Malayalam