ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಐಟಿಬಿಪಿ ರೈಸಿಂಗ್ ಡೇ ದಿನದ ಅಂಗವಾಗಿ ಸಿಬ್ಬಂದಿಗೆ ಪ್ರಧಾನಿ ಶುಭಾಶಯ

प्रविष्टि तिथि: 24 OCT 2021 10:03AM by PIB Bengaluru

ಐಟಿಬಿಪಿಯ  ರೈಸಿಂಗ್ ಡೇ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐಟಿಬಿಪಿಯ ಎಲ್ಲ ಸಿಬ್ಬಂದಿಗೆ ಶುಭ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಅರುಣಾಚಲ ಪ್ರದೇಶದ ದಟ್ಟ ಅರಣ್ಯದಿಂದ ಹಿಮಾಲಯದ ಎತ್ತರದ ಶಿಖರಗಳವರೆಗೆ, ನಮ್ಮ ಐಟಿಬಿಪಿ @ITBP_official ʻಹಿಮವೀರರುʼ ರಾಷ್ಟ್ರದ ಕರೆಗೆ ಓಗೊಟ್ಟು ಅತ್ಯಂತ ಸಮರ್ಪಣೆಯಿಂದ ಸೇವೆ ಸಲ್ಲಿಸಿದ್ದಾರೆ. ವಿಪತ್ತುಗಳ ಸಮಯದಲ್ಲಿ ಅವರ ಮಾನವೀಯ ಕಾರ್ಯವು ಗಮನಾರ್ಹವಾಗಿದೆ. ಎಲ್ಲಾ ಐಟಿಬಿಪಿ ಸಿಬ್ಬಂದಿಗೆ ರೈಸಿಂಗ್ ಡೇ ಅಂಗವಾಗಿ ಶುಭಾಶಯಗಳು,ʼʼ ಎಂದಿದ್ದಾರೆ.

***


(रिलीज़ आईडी: 1766204) आगंतुक पटल : 221
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam