ಪ್ರಧಾನ ಮಂತ್ರಿಯವರ ಕಛೇರಿ
ಯು.ಪಿ.ಎಸ್.ಸಿ. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದವರಿಗೆ ಪ್ರಧಾನಮಂತ್ರಿಯವರಿಂದ ಅಭಿನಂದಿನೆ
Posted On:
25 SEP 2021 4:42AM by PIB Bengaluru
ಯು.ಪಿ.ಎಸ್.ಸಿ. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಸರಣಿ ಟ್ವೀಟ್ ಸಂದೇಶಗಳಲ್ಲಿ, ಪ್ರಧಾನಮಂತ್ರಿ ಅವರು ಈ ರೀತಿ ಹೇಳಿದ್ದಾರೆ;
" ಯು.ಪಿ.ಎಸ್.ಸಿ. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದವರಿಗೆ ಅಭಿನಂದನೆಗಳು. ಸಾರ್ವಜನಿಕ ಸೇವೆಯಲ್ಲಿ ಅತ್ಯಾಕರ್ಷಕ ಮತ್ತು ತೃಪ್ತಿಕರ ವೃತ್ತಿ ನಿಮಗಾಗಿ ಕಾಯುತ್ತಿದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದವರು ನಮ್ಮ ರಾಷ್ಟ್ರದ ಅಭಿವೃದ್ಧಿಯ ಪ್ರಯಾಣದ ಪ್ರಮುಖ ಅವಧಿಯಲ್ಲಿ ಪ್ರಮುಖ ಆಡಳಿತಾತ್ಮಕ ಪಾತ್ರಗಳನ್ನು ನಿರ್ವಹಿಸುತ್ತಾರೆ.
ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಯುವ ಸ್ನೇಹಿತರಿಗೆ, ನಾನು ಹೇಳಲು ಬಯಸುತ್ತೇನೆ- ನೀವು ತುಂಬಾ ಪ್ರತಿಭಾವಂತ ವ್ಯಕ್ತಿಗಳು. ಇನ್ನೂ ಹೆಚ್ಚಿನ ಪ್ರಯತ್ನಗಳು ನಿಮಗಾಗಿ ಕಾಯುತ್ತಿವೆ.
ಇದೇ ಸಂದರ್ಭದಲ್ಲಿ, ಭಾರತವು ವೈವಿಧ್ಯಮಯ ಅವಕಾಶಗಳಿಂದ ಕೂಡಿದೆ ಮತ್ತು ಅದನ್ನು ಅನ್ವೇಷಿಸಲು ಕಾಯುತ್ತಿದೆ. ನೀವು ಏನೇ ಮಾಡಲು ನಿರ್ಧರಿಸಿದರೂ ನಿಮಗೆ ಶುಭಾಶಯಗಳು. "
***
(Release ID: 1758087)
Visitor Counter : 258
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam