ಪ್ರಧಾನ ಮಂತ್ರಿಯವರ ಕಛೇರಿ

ಜಪಾನ್ ನ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಸುಗಾ ಯೋಶಿಹಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಡುವಿನ ಭೇಟಿ, ಸಮಾಲೋಚನೆ

Posted On: 24 SEP 2021 5:15AM by PIB Bengaluru

ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ ವೇಳೆ 2021 ಸೆಪ್ಟಂಬರ್ 23ರಂದು ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಸುಗಾ ಯೋಶಿಹಿದೆ ಅವರನ್ನು ಭೇಟಿ ಮಾಡಿದ್ದರು

ಸಾಂಕ್ರಾಮಿಕ ನಂತರದ ಕಾಲದಲ್ಲಿ ಉಭಯ ನಾಯಕರು ನಡೆಸಿದ ಮೊದಲ ಮುಖಾಮುಖಿ ಭೇಟಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅವರು ಜಪಾನ್ ಪ್ರಧಾನಿಯಾಗಿ ಶ್ರೀ ಸುಗಾ ಅವರು ಅಧಿಕಾರ ಸ್ವೀಕರಿಸಿದ 2020 ಸೆಪ್ಟಂಬರ್ ನಂತರ ಈವರೆಗೆ ನಡೆಸಿದ ಮೂರು ದೂರವಾಣಿ ಸಮಾಲೋಚನೆಗಳನ್ನು ಸ್ಮರಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೆಳದ ಕೆಲವು ವರ್ಷಗಳಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುವಲ್ಲಿ ಪ್ರಧಾನಮಂತ್ರಿಯಾಗಿ ಮತ್ತು ಮೊದಲು ಮುಖ್ಯ ಸಂಪುಟ ಕಾರ್ಯದರ್ಶಿಯಾಗಿ ಜಪಾನ್ ಪ್ರಧಾನಿ ಮಂತ್ರಿ ಸುಗಾ ಅವರ ವೈಯಕ್ತಕಿ ಬದ್ಧತೆ ಮತ್ತು ನಾಯಕತ್ವಕ್ಕೆ ಶ್ರೀ ನರೇಂದ್ರ ಮೋದಿ ಧನ್ಯವಾದಗಳನ್ನು ಹೇಳಿದರು. ಜಾಗತಿಕ ಸಾಂಕ್ರಾಮಿಕದ ಮಧ್ಯೆಯೇ ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ ಅನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಪ್ರಧಾನಿ ಸುಗಾ ಅವರನ್ನು ಅಭಿನಂದಿಸಿದರು.

ಉಭಯ ಪ್ರಧಾನಮಂತ್ರಿಗಳು ಎರಡೂ ದೇಶಗಳ ನಡುವಿನ ಆಯಾಮದ ಸಂಬಂಧಗಳನ್ನು ಪರಿಶೀಲಿಸಿದರು ಮತ್ತು ಆಫ್ಘಾನಿಸ್ತಾನ ಸೇರಿದಂತೆ ಇತ್ತೀಚಿನ ಜಾಗತಿಕ ತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ವಿಚಾರ ವಿನಿಮಯ ನಡೆಸಿದರು. ಅವರು ಮುಕ್ತ, ಸ್ವತಂತ್ರ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅವರು ರಕ್ಷಣಾ ಉಪಕರಣ, ತಂತ್ರಜ್ಞಾನ ಸೇರಿದಂತೆ ದ್ವಿಪಕ್ಷೀಯ ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡರು

ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಆರ್ಥಿಕ ಸಹಭಾಗಿತ್ವವನ್ನು ಇಬ್ಬರೂ ಪ್ರಧಾನಿಗಳು ಸ್ವಾಗತಿಸಿದರು. ಸ್ಥಿತಿಸ್ಥಾಪಕ, ವಿಭಿನ್ನ ಮತ್ತು ವಿಶ್ವಾಸಾರ್ಹ ಪೂರೈಕೆ ಸರಣಿ ಸ್ಥಾಪನೆ ಕಾರ್ಯತಂತ್ರ ಸಹಭಾಗಿತ್ವ ಸಾಧಿಸಲು ವರ್ಷದ ಆರಂಭದಲ್ಲಿ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವೆ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ (ಎಸ್ ಸಿಆರ್ ) ಆರಂಭಿಸಿದ್ದನ್ನು ನಾಯಕರು ಸ್ವಾಗತಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ಪಾದನೆ, ಎಂಎಸ್ ಎಂಇ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ದ್ವಿಪಕ್ಷೀಯ ಪಾಲುದಾರಿಗೆ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಪ್ರಧಾನಮಂತ್ರಿ ಸುಗಾ ಅವರು ವರ್ಷದ ಆರಂಭದಲ್ಲಿ ಸಹಿ ಹಾಕಲಾದ ನಿರ್ದಿಷ್ಠ ಕೌಶಲ್ಯ ಹೊಂದಿದ ಕಾರ್ಮಿಕರ (ಎಸ್ ಎಸ್ ಡಬ್ಲೂ) ಒಪ್ಪಂದವನ್ನು ಕಾರ್ಯಾಚರಣೆಗೊಳಿಸಲು ಜಪಾನ್ ಕಡೆಯಿಂದ  2022 ಆರಂಭದಲ್ಲಿ ಭಾರತದಲ್ಲಿ ಕೌಶಲ್ಯ ಮತ್ತು ಭಾಷಾ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಇಬ್ಬರೂ ಪ್ರಧಾನಮಂತ್ರಿಗಳು ಕೋವಿಡ್-19 ಸಾಂಕ್ರಾಮಿಕ ,ಮತ್ತು ಅದನ್ನು ನಿಯಂತ್ರಿಸಲು ಕೈಗೊಂಡಿರುವ ಪ್ರಯತ್ನಗಳ ಕುರಿತು ಚರ್ಚೆ ನಡೆಸಿದರು. ಉಭಯ ನಾಯಕರು ಡಿಜಿಟಲ್ ತಂತ್ರಜ್ಞಾನಕ್ಕೆ ಪ್ರಾಮುಖ್ಯ ಹೆಚ್ಚಾಗುತ್ತಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ನಿಟ್ಟಿನಲ್ಲಿ ವಿಶೇಷವಾಗಿ ನವೋದ್ಯಮ  ಸೇರಿದಂತೆ ಭಾರತ-ಜಪಾನ್ ಡಿಜಿಟಲ್ ಪಾಲುದಾರಿಕೆ ಪ್ರಗತಿಯನ್ನು ಪರಾಮರ್ಶಿಸಿದರುಅಲ್ಲದೆ, ಅವರು ಹಲವು ಉದ್ಯೋನ್ಮುಖ ತಂತ್ರಜ್ಞಾನಗಳ ಕುರಿತು ಇನ್ನಷ್ಟು ಸಹಭಾಗಿತ್ವದ ಕುರಿತು ವಿಚಾರ ವಿನಿಮಯ ನಡೆಸಿದರು. ಹವಾಮಾನ ವೈಪರೀತ್ಯ ವಿಷಯಗಳು ಮತ್ತು ಹಸಿರು ಇಂಧನ ಪರಿವರ್ತನೆ ಹಾಗೂ ಭಾರತದ ರಾಷ್ಟ್ರೀಯ ಹೈಡ್ರೋಜನ್ ಎನರ್ಜಿ ಮಿಷನ್ ನಲ್ಲಿ ಜಪಾನ್ ಸಂಭಾವ್ಯ ಪಾಲುದಾರಿಕೆ ಮತ್ತು ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು

ಮುಂಬೈ-ಅಹಮದಾಬಾದ್ ನಡುವಿನ ಹೈಸ್ಪೀಡ್ ರೈಲು ಯೋಜನೆ (ಎಂಎಎಚ್ ಎಸ್ ಆರ್ ) ಅನ್ನು ಸಕಾಲದಲ್ಲಿ ಮತ್ತು ಸಗುಮರೀತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು.

ಉಭಯ ನಾಯಕರು, ಭಾರತ-ಜಪಾನ್ ಪೂರ್ವ ಕ್ರಿಯಾ ವೇದಿಕೆಯಡಿ ಭಾರತದ ಈಶಾನ್ಯ ಭಾಗದ ಅಭಿವೃದ್ಧಿಗಾಗಿ ಕೈಗೊಂಡಿರುವ ದ್ವಿಪಕ್ಷೀಯ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಸ್ವಾಗತಿಸಿದರು ಮತ್ತು ಅಂತಹ ಸಹಕಾರವನ್ನು ಮತ್ತಷ್ಟು ವೃದ್ಧಿಸುವ ಸಾಧ್ಯತೆಗಳ ಬಗ್ಗೆ ಗಮನಿಸಿದರು.

ಕಳೆದ ಕೆಲವು ವರ್ಷಗಳಲ್ಲಿನ ಭಾರತ-ಜಪಾನ್ ಪಾಲುದಾರಿಕೆಗೆ ಬಲಿಷ್ಠ ವೇಗ ದೊರಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಸುಗಾ ಅವರು, ಜಪಾನ್ ನಲ್ಲಿ ಹೊಸ ಆಡಳಿತದಲ್ಲೂ ಅದು ಮುಂದುವರಿಯಲಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದಲ್ಲಿ ನಡೆಯಲಿರುವ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗೆ ಮುಂದಿನ ಜಪಾನ್ ಪ್ರಧಾನಮಂತ್ರಿಯನ್ನು ಆಹ್ವಾನಿಸಲು ಎದುರು ನೋಡುತ್ತಿರುವುದಾಗಿ ಹೇಳಿದರು.

***



(Release ID: 1757645) Visitor Counter : 255