ಪ್ರಧಾನ ಮಂತ್ರಿಯವರ ಕಛೇರಿ

ಒಂಟಿ ಕೊಂಬಿನ ಖಡ್ಗಮೃಗಗಳ ಸಂರಕ್ಷಣೆ ಮತ್ತು ಯೋಗಕ್ಷೇಮಕ್ಕಾಗಿ ಅಸ್ಸಾಂ ತಂಡ ನಡೆಸುತ್ತಿರುವ ಪ್ರಯತ್ನಗಳಿಗೆ ಪ್ರಧಾನ ಮಂತ್ರಿ ಶ್ಲಾಘನೆ


Posted On: 23 SEP 2021 4:22PM by PIB Bengaluru

ಒಂಟಿ ಕೊಂಬಿನ ಖಡ್ಗಮೃಗ ಸಂತತಿಯನ್ನು ಉಳಿಸಿ, ಅವುಗಳ ಯೋಗಕ್ಷೇಮ ಕಾಪಾಡಲು ಸಕಲ ಪ್ರಯತ್ನಗಳನ್ನು ಹಾಕುತ್ತಿರುವ ಅಸ್ಸಾಂ ತಂಡ (ಟೀಂ ಅಸ್ಸಾಂ)ವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಒಂಟಿ ಕೊಂಬಿನ ಖಡ್ಗಮೃಗ ಭಾರತದ ಹೆಮ್ಮೆ. ಅದರ ಯೋಗಕ್ಷೇಮಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿ ತಿಳಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ; "ಟೀಮ್ ಅಸ್ಸಾಂನ ಪ್ರಯತ್ನ ಕಾರ್ಯ ಶ್ಲಾಘನೀಯವಾಗಿದೆ. ಭಾರತದ ಹೆಮ್ಮೆ ಎನಿಸಿರುವ ಒಂಟಿ ಕೊಂಬಿನ ಖಡ್ಗಮೃಗ ಸಂತತಿಯ ಸಂರಕ್ಷಣೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ."

***



(Release ID: 1757493) Visitor Counter : 190