ಹಣಕಾಸು ಸಚಿವಾಲಯ

ಒತ್ತಡಕ್ಕೆ ಸಿಲುಕಿದ ಸಾಲದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಾಗ “ರಾಷ್ಟ್ರೀಯ ಸ್ವತ್ತು ಮರುನಿರ್ಮಾಣ ಕಂಪನಿ ಲಿಮಿಟೆಡ್” ಹೊರಡಿಸುವ ಭದ್ರತಾ ರಸೀದಿ(ಜಮಾ ಮೊತ್ತ ಸ್ವೀಕೃತಿ)ಗಳಿಗೆ ಕೇಂದ್ರ ಸರ್ಕಾರ ನೀಡುವ ಖಾತರಿ ಕುರಿತು ಪದೇಪದೆ ಕೇಳಲಾಗುವ ಪ್ರಶ್ನಾವಳಿಗಳು

Posted On: 16 SEP 2021 5:12PM by PIB Bengaluru

ಒತ್ತಡಕ್ಕೆ ಸಿಲುಕಿರುವ ಬ್ಯಾಂಕ್ ಗಳ ಸಾಲ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು ಭದ್ರತಾ ರಸೀದಿ (ಭದ್ರತಾ ಸ್ವೀಕ್ರತಿ- ಸೆಕ್ಯೂರಿಟೀಸ್) ನೀಡುವ ರಾಷ್ಟ್ರೀಯ  ಸ್ವತ್ತು ಮರುನಿರ್ಮಾಣ ಕಂಪನಿ ಲಿಮಿಟೆಡ್ ಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಒದಗಿಸುವ 30,600 ಕೋಟಿ ರೂ. ಖಾತರಿಗೆ ಕೇಂದ್ರ ಸಚಿವ ಸಂಪುಟ ಸಭೆ ನಿನ್ನೆ ಅನುಮೋದನೆ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಕ ಕ್ರಮಗಳಡಿ, ಎನ್ಎಆರ್ ಸಿಎಲ್ ಕಂಪನಿಯು ಹಂತ ಹಂತವಾಗಿ ಬ್ಯಾಂಕ್ ಗಳ ಸುಮಾರು 2 ಲಕ್ಷ ಕೋಟಿ ರೂಪಾಯಿ ಮೊತ್ತದ ಒತ್ತಡದಲ್ಲಿರುವ ಸಾಲ ಸ್ವತ್ತನ್ನು ಸ್ವಾಧೀನಕ್ಕೆ ಪಡೆದು, ಪರಿಹಾರ ಒದಗಿಸಲು ಉದ್ದೇಶಿಸಿದೆ.  ಒತ್ತಡದಲ್ಲಿರುವ ಸಾಲ ಸ್ವತ್ತುಗಳನ್ನು ಎನ್ ಎಆರ್ ಸಿಎಲ್ ಕಂಪನಿ 15% ನಗದು ಮತ್ತು 85% ಭದ್ರತಾ ಸ್ವೀಕ್ರತಿ(ಸೆಕ್ಯೂರಿಟೀಸ್) ಮೂಲಕ ಸ್ವಾಧೀನಕ್ಕೆ ಪಡೆಯಲು ಉದ್ದೇಶಿಸಿದೆ.
ಈ ಕೆಳಗಿನ ಪದೇಪದೆ ಕೇಳಲಾಗುವ ಪ್ರಶ್ನೆಗಳು ಎನ್ಎಆರ್ ಸಿಎಲ್ ಕಂಪನಿಯ ಧ್ಯೇಯೋದ್ದೇಶಗಳು, ಕಾರ್ಯತಂತ್ರಗಳು, ಕೇಂದ್ರ ಸರ್ಕಾರದ ಖಾತರಿ ಬೆಂಬಲ ಸೇರಿದಂತೆ ಅನುತ್ಪಾದಕ ಆಸ್ತಿಯ ಸಮರ್ಥ ನಿರ್ವಹಣೆಯ ಹಲವಾರು ಅಂಶಗಳ ಕುರಿತು ವಿವರ ನೀಡುತ್ತದೆ
.

ರಾಷ್ಟ್ರೀಯ ಸ್ವತ್ತು ಮರುನಿರ್ಮಾಣ ಕಂಪನಿ ಲಿಮಿಟೆಡ್-ಎನ್ಎಆರ್ ಸಿಎಲ್ಏನಿದು? ಯಾರು ಇದನ್ನು ಸ್ಥಾಪಿಸಿದರು?

ಕಂಪನಿ ಕಾಯಿದೆ ಅಡಿ ಎನ್ಎಆರ್|ಸಿಎಲ್ ಸಂಸ್ಥೆ ಸ್ಥಾಪಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಪರವಾನಗಿ ಪಡೆದು ಸ್ವತ್ತು ಮರುನಿರ್ಮಾಣ ಕಂಪನಿಯಾಗಿ ಇದನ್ನು ಸ್ಥಾಪಿಸಲಾಗಿದೆ. ಒತ್ತಡಕ್ಕೆ ಸಿಲುಕಿದ ಸಾಲದ ಸ್ವತ್ತುಗಳನ್ನು ಒಂದೆಡೆ ಸೇರಿಸಿ, ಕ್ರೋಡೀಕರಿಸಿ, ನಂತರ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಬ್ಯಾಂಕ್ ಗಳು ಒಟ್ಟುಗೂಡಿ  ಎನ್ಎಆರ್|ಸಿಎಲ್ ಸ್ಥಾಪಿಸಿಕೊಂಡಿವೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳು ಎನ್ಎಆರ್|ಸಿಎಲ್ ನಲ್ಲಿ 51%  ಮಾಲಿಕತ್ವ ನಿರ್ವಹಿಸಲಿವೆ.

ಇಂಡಿಯಾ ಡೆಟ್ ರೆಸಲ್ಯೂಷನ್ ಕಂಪನಿ ಲಿಮಿಟೆಡ್ (ಐಡಿಆರ್|ಸಿಎಲ್) ಏನಿದು? ಯಾರು ಇದನ್ನು ಸ್ಥಾಪಿಸಿದರು?

ಐಡಿಆರ್|ಸಿಎಲ್ ಒಂದು ಸೇವಾ ಕಂಪನಿ. ಮಾರುಕಟ್ಟೆ ವೃತ್ತಿಪರರು ಮತ್ತು ಹಣಕಾಸು ತಜ್ಞರನ್ನು ಒಳಗೊಂಡ ಸ್ವತ್ತು ನಿರ್ವಹಿಸುವ ಕಾರ್ಯಾಚರಣೆ ಘಟಕ ಇದಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಈ ಸೇವಾ ಕಂಪನಿಯಲ್ಲಿ ಗರಿಷ್ಠ 49% ಪಾಲು ಹೊಂದಿದ್ದರೆ, ಇನ್ನುಳಿದ ಪಾಲನ್ನು ಖಾಸಗಿ ವಲಯದ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಹೊಂದಿರುತ್ತವೆ.

ಈಗಾಗಲೇ 28 ಸ್ವತ್ತು ಮರುನಿರ್ಮಾಣ ಕಂಪನಿಗಳು ಇರುವಾಗ ಎನ್ಎಆರ್ ಸಿಎಲ್ಐಡಿಆರ್ ಸಿಎಲ್ ಸ್ವರೂಪದ ಕಂಪನಿಗಳ ಅಗತ್ಯವೇನಿದೆ?

ಒತ್ತಡದಲ್ಲಿ ಸಿಲುಕಿರುವ ಸ್ವತ್ತುಗಳಿಗೆ ಪರಿಹಾರ ಒದಗಿಸಲು ಅದರಲ್ಲೂ ವಿಶೇಷವಾಗಿ ಒತ್ತಡಕ್ಕೆ ಸಿಲುಕಿರುವ ಸಣ್ಣ ಮೊತ್ತದ ಸಾಲಗಳಿಗೆ ಪರಿಹಾರ ಒದಗಿಸಲು ಸ್ವತ್ತು ಮರುನಿರ್ಮಾಣ ಕಂಪನಿಗಳು ಸಹಾಯಕವಾಗಿವೆ. ಐಬಿಸಿ ಸೇರಿದಂತೆ ಈಗ ಲಭ್ಯವಿರುವ ಹಲವಾರು ಪರಿಹಾರ ವ್ಯವಸ್ಥೆಗಳು ಉಪಯುಕ್ತ ಎಂಬುದನ್ನು ಸಾಬೀತು ಮಾಡಿವೆ. ಆದಾಗ್ಯೂ, ವಸೂಲಾಗದ ಬೃಹತ್ ಪ್ರಮಾಣದ ಸಾಲಗಳನ್ನು(ಅನುತ್ಪಾದಕ ಆಸ್ತಿ) ಪರಿಗಣಿಸಿದರೆ, ಹೆಚ್ಚುವರಿ ಆಯ್ಕೆ/ಪರ್ಯಾಯ ವ್ಯವಸ್ಥೆಗಳು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎನ್ಎಆರ್|ಸಿಎಲ್-ಐಆರ್|ಡಿಸಿಎಲ್ ಸ್ವರೂಪದ ಸಂಸ್ಥೆಗಳ ಸ್ಥಾಪನೆಯು ಬಜೆಟ್ ಉಪಕ್ರಮವಾಗಿದೆ.

ಕೇಂದ್ರ ಸರ್ಕಾರದ ಖಾತರಿಯ ಅಗತ್ಯವೇನಿದೆ?

ಒತ್ತಡಕ್ಕೆ ಸಿಲುಕಿದ ಸಾಲ ಸ್ವತ್ತುಗಳಿಗೆ, ಅನುತ್ಪಾದಕ ಆಸ್ತಿಗಳಿಗೆ ಪರಿಹಾರ ಒದಗಿಸುವ ಈ ರೀತಿಯ ವ್ಯವಸ್ಥೆಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಅಗತ್ಯವಿದೆ. ಇದು ವಿಶ್ವಾಸಾರ್ಹತೆ ಹೆಚ್ಚಿಸುವ ಜತೆಗೆ, ಅನಿರೀಕ್ಷಿತ ಹಾನಿಯನ್ನು ತಡೆಯುತ್ತದೆ. ಒತ್ತಡದಲ್ಲಿ ಸಿಲುಕಿದ ಸಾಲದ ಸ್ವತ್ತುಗಳಿಗೆ ಎನ್ಎಆರ್|ಸಿಎಲ್ ನೀಡುವ ಭದ್ರತಾ ರಸೀದಿ(ಸಾಲದ ಜಮಾ ಮೊತ್ತ-ಸ್ವೀಕೃತಿ)ಗಳಿಗೆ ಕೇಂದ್ರ ಸರ್ಕಾರ 30,600 ಕೋಟಿ ರೂ.ವರೆಗೆ ಖಾತರಿ ಬೆಂಬಲ ಒದಗಿಸುತ್ತದೆ. ಈ ಖಾತರಿಯು 5 ವರ್ಷಗಳ ತನಕ ಇರುತ್ತದೆ. ಸರ್ಕಾರದ ಖಾತರಿಯು ಭದ್ರತಾ ರಸೀದಿ(ಜಮಾ ಮೊತ್ತ)ಯ ಮುಖಬೆಲೆ ಮತ್ತು ವಾಸ್ತವ ಸಾಲ ಮೊತ್ತದ ನಡುವಿನ ಕೊರತೆಗೆ ರಕ್ಷಣೆ ನೀಡುತ್ತದೆ. ಅಲ್ಲದೆ, ಭಾರತ ಸರ್ಕಾರದ ಖಾತರಿಯು ಜಮಾ ಮೊತ್ತದ ದ್ರವ್ಯತೆ (ನಗದು ಲಭ್ಯತೆ)ಯನ್ನು ಹೆಚ್ಚಿಸುತ್ತದೆ.

ಎನ್ಎಆರ್ ಸಿಎಲ್ ಮತ್ತು ಐಡಿಆರ್ ಸಿಎಲ್ ಹೇಗೆ ಕೆಲಸ ಮಾಡುತ್ತವೆ?

ಎನ್ಎಆರ್|ಸಿಎಲ್ ಕಂಪನಿಯು ಲೀಡ್ ಬ್ಯಾಂಕ್|ಗೆ ಅವಕಾಶ ನೀಡುವ ಮೂಲಕ ಒತ್ತಡದಲ್ಲಿರುವ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಒಮ್ಮೆ ಎನ್ಎಆರ್|ಸಿಎಲ್|ನ ಆಫರ್ ಒಪ್ಪಿಕೊಂಡ ನಂತರ ಆಡಿಆರ್|ಸಿಎಲ್ ಸ್ವತ್ತಿನ ನಿರ್ವಹಣೆ ಮತ್ತು ಮೌಲವರ್ಧನೆಯಲ್ಲಿ ನಿರತವಾಗುತ್ತದೆ.

ಹೊಸ ಸ್ವರೂಪದ ವ್ಯವಸ್ಥೆಯಿಂದ ಬ್ಯಾಂಕ್ ಗಳಿಗೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ?

ಒತ್ತಡದಲ್ಲಿ ಸಿಲುಕುವ ಸ್ವತ್ತುಗಳಿಗೆ ತ್ವರಿತ ಕ್ರಮಗಳ ಮೂಲಕ ಶೀಘ್ರ ಪರಿಹಾರ ಒದಗಿಸಲು ಇದು ಉತ್ತೇಜನ ನೀಡುತ್ತದೆ. ಸ್ವತ್ತುಗಳ ವಾಸ್ತವ ಮೌಲ್ಯವನ್ನು ಉತ್ತಮವಾಗಿ ನಿರ್ವಹಿಸಲು ಇದು ಸಹಾಯಕವಾಗಿದೆ. ಬ್ಯಾಂಕ್ ವ್ಯವಹಾರ ಹೆಚ್ಚಿಸಲು ಮತ್ತು ಸಾಲ ನೀಡಿಕೆ ಪ್ರಮಾಣವನ್ನು ಮತ್ತಷ್ಟು ವೃದ್ಧಿಸಲು ಬ್ಯಾಂಕ್ ಸಿಬ್ಬಂದಿಯನ್ನು ಇದು ಮುಕ್ತಗೊಳಿಸುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ ಬ್ಯಾಂಕ್|ಗಳ ಮೌಲ್ಯಮಾಪನ ಸುಧಾರಣೆಗೆ ಹೊಸ ಪರಿಹಾರ ವ್ಯವಸ್ಥೆ ಅನುವು ಮಾಡಿಕೊಡುತ್ತದೆ. ಮಾರುಕಟ್ಟೆ ಬಂಡವಾಳ ಹೆಚ್ಚಿಸಲು ಬ್ಯಾಂಕ್ ಸಿಬ್ಬಂದಿಗೆ ಅವಕಾಶ ನೀಡುತ್ತದೆ.

ಇದನ್ನು ಏಕೆ ಈಗ ಸ್ಥಾಪಿಸಲಾಗುತ್ತಿದೆ?

ದಿವಾಳಿತನ ಮತ್ತು ಋಣಭಾರ ಸಂಕೇತ ಕಾಯಿದೆ ತಿದ್ದುಪಡಿಯು  ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಇದು ಒತ್ತಡಕ್ಕೆ ಸಿಲುಕಿದ ಹಣಕಾಸು ಸ್ವತ್ತುಗಳ ಮರುನಿರ್ಮಾಣ ವ್ಯವಸ್ಥೆ ಮತ್ತು ಸಾಲ ವಸೂಲಾತಿ ನ್ಯಾಯಾಧಿಕರಣವನ್ನು ಬಲಪಡಿಸಿದೆ. ಅಲ್ಲದೆ, ಬ್ಯಾಂಕ್|ಗಳಲ್ಲಿ ಒತ್ತಡಕ್ಕೆ ಸಿಲುಕಿದ ಸಾಲ ಸ್ವತ್ತುಗಳ ನಿರ್ವಹಣೆಯ ಸಮರ್ಪಿತ ಸಂಸ್ಥೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿದೆ. ವಸೂಲಾಗದ ಬೃಹತ್ ಪ್ರಮಾಣದ ಸಾಲಗಳ ವಸೂಲಾತಿಗೆ ಆದ್ಯತೆಯ ಗಮನ ನೀಡಲು ವೇದಿಕೆ ಸೃಷ್ಟಿಸಿದೆ. ಆದರೂ ಇವೆಲ್ಲಾ ಪ್ರಯತ್ನಗಳ ನಡುವೆಯೂ, ಅನುತ್ಪಾದಕ ಆಸ್ತಿ ಬೃಹತ್  ಪ್ರಮಾಣದಲ್ಲೇ ಮುಂದುವರಿದಿದೆ. 

ಕೇಂದ್ರ ಸರ್ಕಾರದ ಖಾತರಿಯು ಯಾವುದಕ್ಕೆ ರಕ್ಷಣೆ ನೀಡುತ್ತದೆ?

ಒತ್ತಡದಲ್ಲಿ ಸಿಲುಕಿದ ಸಾಲದ ಸ್ವತ್ತುಗಳಿಗೆ ಎನ್ಎಆರ್|ಸಿಎಲ್ ನೀಡುವ ಭದ್ರತಾ ರಸೀದಿ(ಸಾಲದ ಜಮಾ ಮೊತ್ತ-ಸ್ವೀಕೃತಿ)ಗಳಿಗೆ ಕೇಂದ್ರ ಸರ್ಕಾರ 30,600 ಕೋಟಿ ರೂ.ವರೆಗೆ ಖಾತರಿ ಬೆಂಬಲ ಒದಗಿಸುತ್ತದೆ. ಈ ಖಾತರಿಯು 5 ವರ್ಷಗಳ ತನಕ ಇರುತ್ತದೆ. ಸರ್ಕಾರದ ಖಾತರಿಯು ಭದ್ರತಾ ರಸೀದಿ(ಜಮಾ ಮೊತ್ತ)ಯ ಮುಖಬೆಲೆ ಮತ್ತು ವಾಸ್ತವ ಸಾಲ ಮೊತ್ತದ ನಡುವಿನ ಕೊರತೆಗೆ ರಕ್ಷಣೆ ನೀಡುತ್ತದೆ.

ಕೇಂದ್ರ ಸರ್ಕಾರ ಹೇಗೆ ತ್ವರಿತ ಮತ್ತು ಸಕಾಲಿಕ ಪರಿಹಾರ ಖಾತ್ರಿಪಡಿಸುತ್ತದೆ?

ಭಾರತ ಸರ್ಕಾರದ ಖಾತರಿಯು 5 ವರ್ಷಗಳ ತನಕ ಮಾನ್ಯವಾಗಿರುತ್ತದೆ. ಈ ಖಾತರಿಯು ಇದು ಒತ್ತಡಕ್ಕೆ ಸಿಲುಕಿದ ಸಾಲ ಸ್ವತ್ತುಗಳಿಗೆ ಷರತ್ತು ಪೂರ್ವ ಪರಿಹಾರ ಅಥವಾ ಫೈಸಲಾತಿ ಸ್ವರೂಪದ್ದಾಗಿರುತ್ತದೆ. ಪರಿಹಾರ ವಿಳಂಬಗಳನ್ನು ನಿರುತ್ತೇಜನಗೊಳಿಸುವ ಉದ್ದೇಶದಿಂದ, ಎನ್ಎಆರ್|ಸಿಎಲ್|ಗೆ ಖಾತರಿ ಶುಲ್ಕ ಪಾವತಿಸುವ ವ್ಯವಸ್ಥೆ ರೂಪಿಸಲಾಗಿದೆ.

ಎನ್ಎಆರ್|ಸಿಎಲ್ ಬಂಡವಾಳ ಸ್ವರೂಪ ಎಂಥದ್ದು ಮತ್ತು ಕೇಂದ್ರ ಸರ್ಕಾರದ ಕೊಡುಗೆ ಎಷ್ಟು?

ಬ್ಯಾಂಕ್ ಗಳ ಈಕ್ವಿಟಿ ಮತ್ತು ಬ್ಯಾಂಕಿಂಗ್|ಯೇತರ ಹಣಕಾಸು ಕಂಪನಿಗಳ ಈಕ್ವಿಟಿ ಮೂಲಕ ಎನ್ಎಆರ್|ಸಿಎಲ್ ಬಂಡವಾಳ ಕ್ರೋಡೀಕರಿಸಲಾಗುತ್ತದೆ. ಅಗತ್ಯ ಬಿದ್ದಾಗ ಅದು ಸಾಲ ಪಡೆಯುತ್ತದೆ. ಕೇಂದ್ರ ಸರ್ಕಾರದ ಖಾತರಿಯು ಬಂಡವಾಳ ಕ್ರೋಡೀಕರಣ ಅಗತ್ಯಕ್ಕೆ ಎದುರಾಗುವ ಅಡೆತಡೆಗಳನ್ನು ನಿವಾರಿಸುತ್ತದೆ.

ಒತ್ತಡದ ಸ್ವತ್ತುಗಳ ಪರಿಹಾರಕ್ಕೆ ಎನ್ಎಆರ್|ಸಿಎಲ್ ಕಾರ್ಯತಂತ್ರವೇನು?

500 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಒತ್ತಡಕ್ಕೆ ಸಿಲುಕಿದ ಸಾಲ ಸ್ವತ್ತುಗಳಿಗೆ ಪರಿಹಾರ ಒದಗಿಸುವ ಉದ್ದೇಶವನ್ನು ಎನ್ಎಆರ್|ಸಿಎಲ್ ಹೊಂದಿದೆ. ಈ ರೀತಿಯ ಒಟ್ಟು 2 ಲಕ್ಷ ಕೋಟಿ ರೂ. ಮೊತ್ತದ ಸ್ವತ್ತುಗಳಿಗೆ ಪರಿಹಾರ ಒದಗಿಸುವುದು ಇದರ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಸುಮಾರು 90,000 ಕೋಟಿ ರೂ. ಮೊತ್ತದ ಸ್ವತ್ತುಗಳನ್ನು ಎನ್ಎಆರ್|ಸಿಎಲ್ಗೆ ವರ್ಗಾಯಿಸುವ ನಿರೀಕ್ಷೆ ಇದೆ. 2ನೇ ಹಂತದಲ್ಲಿ ಇನ್ನುಳಿದ ಸ್ವತ್ತುಗಳನ್ನು ವರ್ಗಾಯಿಸಲಾಗುತ್ತದೆ.

***(Release ID: 1755494) Visitor Counter : 479