ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಮನೀಶ್ ನರ್ವಾಲ್ ಅವರನ್ನು ಅಭಿನಂದಿಸಿದ ಪ್ರಧಾನ ಮಂತ್ರಿ

ಪ್ರಕಟಣಾ ದಿನಾಂಕ: 04 SEP 2021 10:01AM by PIB Bengaluru

ಟೋಕಿಯಾದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ ಶೂಟರ್ ಮನೀಶ್ ನರ್ವಾಲ್ ಅವರನ್ನು ಪ್ರಧಾನ ಮತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ಟೋಕಿಯೊ ಪ್ಯಾರಾಲಿಂಪಿಕ್ಸ್|ನಲ್ಲಿ ದೇಶದ ಕ್ರೀಡಾ ವೈಭವ ಮುಂದುವರಿದಿದೆ. ನಮ್ಮ ಯುವ ಮತ್ತು ಅದ್ಭುತ ಪ್ರತಿಭಾವಂತ ಕ್ರೀಡಾಪಟು ಮನೀಶ್ ನರ್ವಾಲ್ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಅವರು ಚಿನ್ನ ಗೆದ್ದಿರುವುದು ಭಾರತದ ಕ್ರೀಡೆಯ ಪಾಲಿಗೆ ಅದ್ಭುತ ಮತ್ತು ಅವಿಸ್ಮರಣೀಯ ಕ್ಷಣ. ಮನೀಶ್ ನರ್ವಾಲ್ ಅವರಿಗೆ ಅಭಿನಂದನೆಗಳು. ಅವರ ಕ್ರೀಡಾ ಭವಿಷ್ಯಕ್ಕೆ ಶುಭವಾಗಲಿ.” ಎಂದಿದ್ದಾರೆ.

***


(ಪ್ರಕಟಣೆ ಐ.ಡಿ.: 1751998) ವಿಸಿಟರ್ ಕೌಂಟರ್ : 337