ಹಣಕಾಸು ಸಚಿವಾಲಯ

ಯಶಸ್ವಿಯಾಗಿ ಅನುಷ್ಠಾನಗೊಂಡ ಪ್ರಧಾನಮಂತ್ರಿ ಜನ್ – ಧನ್ ಯೋಜನೆ[ಪಿ.ಎಂ.ಜೆ.ಡಿ.ವೈ] – ರಾಷ್ಟ್ರೀಯ ಹಣಕಾಸು ಸೇವೆಗಳ ಸೇರ್ಪಡೆ ಅಭಿಯಾನಕ್ಕೆ 7 ವರ್ಷ


ಪಿ.ಎಂ.ಜೆ.ಡಿ.ವೈ ಯೋಜನೆ ಜಾರಿಯಾದ ನಂತರ 43.04 ಕೋಟಿಗೂ ಹೆಚ್ಚು ಫಲಾನುಭವಿಗಳು, ಬ್ಯಾಂಕ್ ಖಾತೆಯಲ್ಲಿ 146,231  ಕೋಟಿ ರೂ 

7 ವರ್ಷಗಳ ಅಲ್ಪಾವಧಿಯಲ್ಲಿ ಪಿ.ಎಂ.ಜೆ.ಡಿ.ವೈ ಯೋಜನೆಯಡಿ ಕೈಗೊಂಡ ಉಪಕ್ರಮಗಳು ಪರಿಣಾಮಕಾರಿ: ಪರಿವರ್ತನೆ ಮತ್ತು ದಿಕ್ಸೂಚಿಯ ಎರಡೂ ವಲಯಗಳಲ್ಲಿ ಬದಲಾವಣೆ ಸಾಧ್ಯವಾಗಿದೆ: ಇದರಿಂದ ಹಣಕಾಸು ಒಳಗೊಳ್ಳುವಿಕೆ ಪರಿಸರ ವ್ಯವಸ್ಥೆಯಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿ, ಕಡು ಬಡವರಿಗೆ ಆರ್ಥಿಕ ಸೇವೆಗಳನ್ನು ತಲುಪಿಸುವ ಸಾಮರ್ಥ್ಯ ಸೃಷ್ಟಿಯಾಗಿದೆ: ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ 

ಹಣಕಾಸು ಒಳಗೊಳ್ಳುವಿಕೆ ಸರ್ಕಾರದ ಉನ್ನತ ಆದ್ಯತೆಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಎಲ್ಲರನ್ನೊಳಗೊಂಡ ಬೆಳವಣಿಗೆಗೆ ಸಹಕಾರಿ: ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗ್ವತ್ ಕರದ್

ಪಿ.ಎಂ.ಜೆ.ಡಿ.ವೈ ಖಾತೆಗಳಲ್ಲಿ ಮೂರು ಪಟ್ಟು ಏರಿಕೆ: 15 ರ ಮಾರ್ಚ್ ನಲ್ಲಿ 14.72 ಕೋಟಿಯಿಂದ 18-08-2021 ರಲ್ಲಿ 43.04 ಕೋಟಿಗೆ ಏರಿಕೆ

ಮಹಿಳೆಯರು 55% ರಷ್ಟು ಖಾತೆ ಮತ್ತು 67% ರಷ್ಟು ಖಾತೆ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿವೆ

ಒಟ್ಟು 43.04 ಕೋಟಿ ಪಿ.ಎಂ.ಜೆ.ಡಿ.ವೈ ಖಾತೆಗಳಲ್ಲಿ 36.86 ಕೋಟಿ (86%) ಖಾತೆಗಳು ಚಾಲ್ತಿಯಲ್ಲಿ

ಪಿ.ಎಂ.ಜೆ.ಡಿ.ವೈ ನಡಿ ಒಟ್ಟು 31.23 ಕೋಟಿ ರುಪೆ ಕಾರ್ಡ್ ಗಳ ವಿತರಣೆ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಒಟ್ಟು 

Posted On: 28 AUG 2021 7:30AM by PIB Bengaluru

ಸಮಾಜದ ಅಂಚಿನಲ್ಲಿರುವ ಮತ್ತು ಇಲ್ಲಿಯವರೆಗೆ ಸಮಾಜಿಕ – ಆರ್ಥಿಕ ವಲಯದಲ್ಲಿ ನಿರ್ಲಕ್ಷಿತ ವರ್ಗಗಳಿಗೆ ಆರ್ಥಿಕ ಸೇವೆಗಳ ನೆರವು ಮತ್ತು ಬೆಂಬಲ ಒದಗಿಸಲು ಹಣಕಾಸು ಸಚಿವಾಲಯ ಬದ್ಧವಾಗಿದೆ. ಹಣಕಾಸು ಸೇವೆಗಳ ಸೇರ್ಪಡೆ ಸರ್ಕಾರದ ರಾಷ್ಟ್ರೀಯ ಆದ್ಯತೆಯಾಗಿದೆ. ಏಕೆಂದರೆ ಇದು ಎಲ್ಲರನ್ನೊಳಗೊಂಡ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಬಡವರಿಗೆ ಅವರ ಉಳಿತಾಯವನ್ನು ಔಪಚಾರಿಕ ಹಣಕಾಸು ವ್ಯವಸ್ಥೆಗೆ ತರಲು ಇದು ಒಂದು ಮಾರ್ಗವನ್ನು ಒದಗಿಸುತ್ತದೆ, ಇದು ಹಳ್ಳಿಗಳಲ್ಲಿನ ಅವರ ಕುಟುಂಬಗಳಿಗೆ ಹಣ ಕಳುಹಿಸಲು ಒಂದು ವಿಧಾನವಾಗಿದೆ. ಜೊತೆಗೆ ಅವರನ್ನು ಸಾಲಗಾರರ ಹಿಡಿತದಿಂದ ಹೊರತರಲು ಸಹಕಾರಿಯಾಗಿದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆ [ಪಿ.ಎಂ.ಜೆ.ಡಿ.ವೈ] ಸರ್ಕಾರದ ಬದ್ಧತೆಯ ಪ್ರಮುಖ ಕ್ರಮವಾಗಿದ್ದು, ಇದು ವಿಶ್ವದ ಅತಿ ದೊಡ್ಡ ಹಣಕಾಸು ಸೇವೆಗಳ ಸೇರ್ಪಡೆ ಕಾರ್ಯಕ್ರಮವಾಗಿದೆ.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014 ರ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪಿ.ಎಂ.ಜೆ.ಡಿ.ವೈ ಅನ್ನು ಪ್ರಕಟಿಸಿದ್ದರು. ಬಳಿಕ ಆಗಸ್ಟ್ 28 ರಂದು ಈ ಕಾರ್ಯಕ್ರಮ ಜಾರಿಗೊಳಿಸುವಾಗ ಪ್ರಧಾನಮಂತ್ರಿ ಅವರು, ಒಂದು ವಿಷ ವರ್ತುಲದಿಂದ ಬಡವರ ವಿಮೋಚನೆಯನ್ನು ಆಚರಿಸುವ ಹಬ್ಬ ಎಂದು ವಿವರಿಸಿದ್ದರು.

ಪಿ.ಎಂ.ಜೆ.ಡಿ.ವೈ ನ 7 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಈ ಕಾರ್ಯಕ್ರಮದ ಮಹತ್ವವನ್ನು ಪುನುರುಚ್ಚರಿಸಿದ್ದಾರೆ “ 7 ವರ್ಷಗಳ ಅಲ್ಪಾವಧಿಯಲ್ಲಿ ಪಿ.ಎಂ.ಜೆ.ಡಿ.ವೈ ಯೋಜನೆಯಡಿ ಕೈಗೊಂಡ ಉಪಕ್ರಮಗಳು ಪರಿಣಾಮಕಾರಿ: ಪರಿವರ್ತನೆ ಮತ್ತು ದಿಕ್ಸೂಚಿಯಲ್ಲಿ ಬದಲಾವಣೆ ತರಲು ಸಾಧ್ಯವಾಗಿದೆ: ಇದರಿಂದ ಹಣಕಾಸು ಸೇವೆಗಳ ಸೌಲಭ್ಯ ದೊರೆತು  ವ್ಯವಸ್ಥೆಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿ, ಕಡು ಬಡವರಿಗೆ ಆರ್ಥಿಕ ಸೇವೆಗಳನ್ನು ತಲುಪಿಸುವ ಸಾಮರ್ಥ್ಯ ಸೃಷ್ಟಿಯಾಗಿದೆ.  ಪಿ.ಎಂ.ಜೆ.ಡಿ.ವೈ ಕಾರ್ಯಕ್ರಮದಡಿ ಬ್ಯಾಂಕಿಂಗ್ ಸೌಲಭ್ಯ ಹೊಂದಿಲ್ಲದವರಿಗೆ ಬ್ಯಾಂಕಿಂಗ್ ಸೌಕರ್ಯ,  ಸುರಕ್ಷಿತರಲ್ಲದವರಿಗೆ ಭದ್ರತೆ, ಆರ್ಥಿಕ ನೆರವು ಇಲ್ಲದವರಿಗೆ ಧನ ಸಹಾಯ, ಬಹುಪಾಲುದಾರರ ಸಹಯೋಗದ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡಿದೆ. ಹಾಗೆಯೇ ಸುರಕ್ಷಿತ ಮತ್ತು ಕಡಿಮೆ ಪ್ರದೇಶಗಳಿಗೆ ಸೇವೆ ಸಲ್ಲಿಸಲು ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ “ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗ್ವತ್ ಕರದ್ ಅವರು  ಸಹ ಪಿ.ಎಂ.ಜೆ.ಡಿ.ವೈ ಯೋಜನೆ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. “ ಪ್ರಧಾನಮಂತ್ರಿ  ಜನ್ ಧನ್ ಯೋಜನೆ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಲ್ಲಿ ಹಣಕಾಸು ಸೇವೆಗಳ ಸೇರ್ಪಡೆ ವಲಯದಲ್ಲಿ ಅತ್ಯಂತ ದೂರಗಾಮಿ ಉಪಕ್ರಮಗಳಲ್ಲಿ ಒಂದಾಗಿದೆ. ಹಣಕಾಸು ಸೇವೆಗಳ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಇದು ಎಲ್ಲರನ್ನೂ ಒಳಗೊಳ್ಳುತ್ತದೆ. ಬಡವರಿಗೆ ಅವರ ಹಣ ಉಳಿತಾಯ ಮಾಡಲು, ಔಪಚಾರಿಕ ಹಣಕಾಸು ವ್ಯವಸ್ಥೆಗೆ ತರಲು ಮಾರ್ಗವನ್ನು ಇದು ಒದಗಿಸುತ್ತದೆ.  ಜತೆಗೆ ಅವರನ್ನು ಸುಸ್ತಿದಾರರ ಹಿಡಿತದಿಂದ ಹೊರ ತರಲು ಸಹಕಾರಿಯಾಗಿದೆ” ಎಂದು ಹೇಳಿದ್ದಾರೆ.

ನಾವೀಗ ಈ ಯೋಜನೆಯ 7 ವರ್ಷಗಳನ್ನು ಪೂರೈಸಿದ್ದೇವೆ. ಈ ಯೋಜನೆಯ ಈವರೆಗಿನ ಪ್ರಮುಖ ಅಂಶಗಳು ಮತ್ತು ಸಾಧನೆಯನ್ನು ನೋಡೋಣ

ಹಿನ್ನೆಲೆ

ಪ್ರಧಾನಮಂತ್ರಿ ಜನ್ ಧನ್ ಯೋಜನೆ [ಪಿ.ಎಂ.ಜೆ.ಡಿ.ವೈ] ಹಣಕಾಸು ಒಳಗೊಳ್ಳುವಿಕೆಯಲ್ಲಿ ಪ್ರಮುಖ ಹಣಕಾಸು ಸೇವೆಗಳ ಅಭಿಯಾನವಾಗಿದೆ. ಕೈಗೆಟುಕುವ ರೀತಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ, ಉಳಿತಾಯ ಮತ್ತು ಠೇವಣಿ ಖಾತೆಗಳು, ಸ್ವೀಕೃತಿ, ಸಾಲ, ವಿಮೆ, ಪಿಂಚಣಿ ಸೌಲಭ್ಯಗಳನ್ನು ದೊರೆಕಿಸುವುದು ಇದರ ಉದ್ದೇಶವಾಗಿದೆ.

1.  ಉದ್ದೇಶಗಳು

  • ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳು ಕೈಗೆಟುಕುವ ರೀತಿಯಲ್ಲಿ ದೊರೆಯುವುದನ್ನು ಖಚಿತಪಡಿಸುವುದು
  • ಹೆಚ್ಚಿನ ರೀತಿಯಲ್ಲಿ ತಲುಪುವ ಮತ್ತು ಕಡಿಮೆ ದರದಲ್ಲಿ ತಂತ್ರಜ್ಞಾನ ಬಳಕೆ

2.  ಯೋಜನೆಯ ಮೂಲ ತತ್ವಗಳು

  • ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದವರಿಗೆ ಬ್ಯಾಂಕಿಂಗ್ ಸೌಲಭ್ಯ: ಕಡಿಮೆ ಕಾಗದ ಕೆಲಸದ ಮೂಲಕ ಮೂಲ ಉಳಿತಾಯ ಖಾತೆ [ಬಿ.ಎಸ್.ಬಿ.ಡಿ] ತೆರೆಯುವುದು, ಕೈವೈಸಿ, ಇ-ಕೆವೈಸಿಯಿಂದ ವಿನಾಯಿತಿ, ಖಾತೆ ತೆರೆಯಲು ಶಿಬಿರಗಳ ಆಯೋಜನೆ, ಶೂನ್ಯ ಠೇವಣಿ ಮತ್ತು ಶೂನ್ಯ ಶುಲ್ಕಗಳೊಂದಿಗೆ ಬ್ಯಾಂಕ್ ಖಾತೆ ತೆರೆಯುವುದು.  
  • ಸುರಕ್ಷಿತೆ ಇಲ್ಲದವರಿಗೆ ಭದ್ರತೆ – ಹಣ ವಾಪಸ್ ಪಡೆಯಲು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಡೆಬಿಟ್ ಕಾರ್ಡ್ ಗಳ ವಿತರಣೆ ಮತ್ತು ವ್ಯಾಪಾರಸ್ಥರು ಇರುವ ಸ್ಥಳಗಳಲ್ಲಿಯೇ ಹಣ ಪಾವತಿ ಜತೆಗೆ ಎರಡು ಲಕ್ಷ ರೂಪಾಯಿ ಅಪಘಾತ ವಿಮಾ ಸೌಲಭ್ಯ
  • ಬಂಡವಾಳ ಇಲ್ಲದವರಿಗೆ ಬಂಡವಾಳ – ಇತರೆ ಹಣಕಾಸು ಉತ್ಪನ್ನಗಳಾದ ಸೂಕ್ಷ್ಮ ವಿಮಾ ಸೌಲಭ್ಯ, ಬಳಕೆಗಾಗಿ ಓವರ್ ಡ್ರಾಪ್ಟ್, ಕಿರು ಪಿಂಚಣಿ ಮತ್ತು ಕಿರು ಸಾಲ ಸೌಲಭ್ಯಗಳು

3.  ಆರಂಭಿಕ ವೈಶಿಷ್ಟ್ಯಗಳು

ಯೋಜನೆಯನ್ನು ಈ ಕೆಳಕಂಡ 6 ಆಧಾರ ಸ್ಥಂಭಗಳ ಆಧಾರದ ಮೇಲೆ ಜಾರಿಗೊಳಿಸಲಾಗಿದೆ.

  • ಬ್ಯಾಂಕಿಂಗ್ ಸೇವೆಗಳಿಗೆ ಶಾಖೆ – ಬಿಸಿಗಳು ಸೇರಿ ಸಾರ್ವತ್ರಿಕವಾಗಿ ಅವಕಾಶ.
  • ಮೂಲ ಉಳಿತಾಯ ಬ್ಯಾಂಕ್ ಖಾತೆ ಜತೆಗೆ ಪ್ರತಿಯೊಬ್ಬ ವಯಸ್ಕ ಖಾತೆದಾರರಿಗೆ 10,000/- ರೂ ಓವರ್ ಡ್ರಾಪ್ಟ್ ಸೌಲಭ್ಯ 
  • ಹಣಕಾಸು ಸಾಕ್ಷರತೆ ಕಾರ್ಯಕ್ರಮ: ಉಳಿತಾಯ ಮಾಡುವುದನ್ನು ಉತ್ತೇಜಿಸುವುದು, ಎಟಿಎಂಗಳ ಬಳಕೆ, ಸಾಲ ಪಡೆಯಲು ಸಜ್ಜುಗೊಳಿಸುವುದು, ವಿಮೆ, ಪಿಂಚಣಿ, ಬ್ಯಾಂಕಿಂಗ್ ಸೇವೆಗಳಿಗಾಗಿ ಮೂಲ ಮೊಬೈಲ್ ಸೆಟ್ ಅನ್ನು ಹೊಂದುವಂತೆ ಮಾಡುವುದು.
  • ಸಾಲ ಖಾತರಿ ನಿಧಿ ಸೃಷ್ಟಿ – ಡಿಫಾಲ್ಟರ್ ಗಳ ವಿರುದ್ಧ ಬ್ಯಾಂಕುಗಳಿಗೆ ಕೆಲವು ಖಾತರಿ ಒದಗಿಸುವುದು
  • ವಿಮೆ – 2014 ರ ಆಗಸ್ಟ್ ನಿಂದ 2015 ರ ಜನವರಿ ಒಳಗೆ ಖಾತೆ ತೆರೆದಿರುವುವವರಿಗೆ 1,00,00 ರೂ ಅಪಘಾತ ಮತ್ತು 30,000 ರೂ ಜೀವ ವಿಮೆ ಸೌಲಭ್ಯ 
  • ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಕಾರ್ಯಕ್ರಮ

4.  ಹಿಂದಿನ ಅನುಭವದ ಆಧಾರದ ಮೇಲೆ ಪಿ.ಎಂ.ಜೆ.ಡಿ.ವೈ ನಲ್ಲಿ ಅಳವಡಿಸಿಕೊಂಡ ಪ್ರಮುಖ ವಿಧಾನ

  • ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೆರೆಯಲಾದ ಖಾತೆಗಳು, ಆನ್ ಲೈನ್ ಖಾತೆಗಳು, ಆಫ್ ಲೈನ್ ಖಾತೆಗಳ ಹಿಂದಿನ ವಿಧಾನಗಳ ಬದಲು ಲಾಕ್ ಇನ್ ತಂತ್ರಜ್ಞಾನ ಅಳವಡಿಸಿಕೊಳ್ಳುವುದು
  • ರುಪೇ ಡೆಬಿಟ್ ಕಾರ್ಡ್ ಅಥವಾ ಆಧಾರ್ ಆಧರಿತ ಪಾವತಿ ವ್ಯವಸ್ಥೆ [ಎ.ಇ.ಪಿ.ಎಸ್] ಮೂಲಕ ಆಂತರಿಕ ಕಾರ್ಯಾಚರಣೆ
  • ನಿರ್ದಿಷ್ಟ ಕೇಂದ್ರಗಳಲ್ಲಿ ವ್ಯಾಪಾರ ಬಾತ್ಮೀದಾರರ ವ್ಯವಸ್ಥೆ, ತೊಡಕಾಗಿರುವ ಕೆವೈಸಿ  ಬದಲಿಗೆ ಸರಳೀಕೃತ ಕೆವೈಸಿ/ಇ-ಕೆವೈಸಿ 

5.  ಹೊಸ ವೈಶಿಷ್ಟ್ಯಗಳೊಂದಿಗೆ ಪಿ.ಎಂ.ಜೆ.ಡಿ.ವೈ ವಿಸ್ತರಣೆ – ಕೆಲವು ಮಾರ್ಪಾಡುಗಳೊಂದಿಗೆ ಸಮಗ್ರ ಪಿ.ಎಂ.ಜೆ.ಡಿ.ವೈ ಯೋಜನೆಯನ್ನು 28.8.2018 ರ ನಂತರ ವಿಸ್ತರಣೆ ಮಾಡಲು ಸರ್ಕಾರದ ನಿರ್ಧಾರ

  • ಬ್ಯಾಂಕಿಂಗ್ ಸೌಲಭ್ಯ ಹೊಂದಿಲ್ಲದ ಪ್ರತಿ ವಯಸ್ಕರ ಬದಲಿಗೆ “ಪ್ರತಿಯೊಂದು ಮನೆ”ಯ ಕೇಂದ್ರೀಕರಣ
  • ರುಪೇ ಕಾರ್ಡ್ ವಿಮೆ – 28.8.2018 ರ ನಂತರ ಪಿ.ಎಂ.ಜೆ.ಡಿ.ವೈ ಖಾತೆ ತೆರೆದು ರುಪೇ ಕಾರ್ಡ್ ಹೊಂದಿರುವವರಿಗೆ ಉಚಿತ ಅಪಘಾತ ವಿಮಾ ಸೌಲಭ್ಯವನ್ನು 1 ಲಕ್ಷ ರೂ ನಿಂದ 2 ಲಕ್ಷ ರೂಗೆ ಏರಿಕೆ 
  • ಓವರ್ ಡ್ರಾಫ್ಟ್ ಸೌಲಭ್ಯ ವಿಸ್ತರಣೆ – ಓಡಿ ಸೌಲಭ್ಯ 5,000/ ದಿಂದ 10,000/- ರೂ ಗೆ ಏರಿಕೆ : 2,000/ ರೂವರೆಗೆ [ಯಾವುದೇ ಷರತ್ತಿಲ್ಲದೇ] ವಿತರಣೆ
  • ಓಡಿ ಪಡೆಯಲು ಗರಿಷ್ಠ ವಯೋಮಿತಿಯನ್ನು 60 ರಿಂದ 65 ವರ್ಷಕ್ಕೆ ಏರಿಕೆ

6.  ಪಿ.ಎಂ.ಜೆ.ಡಿ.ವೈ ನ  ಪರಿಣಾಮ

ಜನಕೇಂದ್ರಿತ ಆರ್ಥಿಕ ಚಟುವಟಿಕೆ ವಲಯದಲ್ಲಿ ಪಿ.ಎಂ.ಜೆ.ಡಿ.ವೈ ಪ್ರಮುಖ ಆಧಾರ ಸ್ಥಂಭವಾಗಿದೆ. ಇದು ನೇರ ಸೌಲಭ್ಯ ವರ್ಗಾವಣೆ ಇರಬಹುದು, ಕೋವಿಡ್ – 19 ಹಣಕಾಸು ನೆರವು ಸೌಲಭ್ಯ, ಪಿ.ಎಂ. ಕಿಸಾನ್, ಎಂ.ಜಿ.ಎನ್.ಆರ್.ಇ.ಜಿ.ಎ ಅಡಿ ವೇತನ ಹೆಚ್ಚಳ, ಜೀವ ಮತ್ತು ಆರೋಗ್ಯ ವಿಮಾ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ವಯಸ್ಕ ಖಾತೆದಾರರಿಗೆ ದೊರೆಯುತ್ತದೆ. ಇಂತಹ ಸೌಲಭ್ಯಗಳಿಂದ ಪಿ.ಎಂ.ಜೆ.ಡಿ.ವೈ ಬಹುತೇಕ ಪೂರ್ಣಗೊಳ್ಳುತ್ತದೆ.  

14 ರ ಮಾರ್ಚ್ ನಿಂದ 20ರ ಮಾರ್ಚ್ ಅವಧಿಯಲ್ಲಿ ತೆರೆಯಲಾದ 2 ಖಾತೆಗಳಲ್ಲಿ 1 ಖಾತೆ ಪಿ.ಎಂ.ಜೆ.ಡಿ.ವೈ ಖಾತೆಯಾಗಿರುವುದು ವಿಶೇಷ. ರಾಷ್ಟ್ರವ್ಯಾಪಿ ಲಾಕ್ ಡೌನ್ ಇದ್ದ ಸಂದರ್ಭದಲ್ಲಿ ಹತ್ತು ದಿನಗಳ ಒಳಗಾಗಿ ಪಿ.ಎಂ.ಜೆ.ಡಿ.ವೈ ಖಾತೆದಾರರಿಗೆ ಪರಿಹಾರ ವಿತರಣೆ ಮಾಡಲಾಗಿದೆ. 

ಜನ್  ಧನ್ ಬಡವರಿಗೆ ತಮ್ಮ ಉಳಿತಾಯವನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ತರಲು ಮಾರ್ಗವೊಂದನ್ನು ಒದಗಿಸುತ್ತದೆ. ಹಳ್ಳಿಗಳಲ್ಲಿನ ಅವರ ಕುಟುಂಬಗಳಿಗೆ ಹಣ ರವಾನಿಸುವ ಮಾರ್ಗವಾಗಿದೆ. ಜೊತೆಗೆ ಅವರನ್ನು ಸಾಲಗಾರರ ಹಿಡಿತದಿಂದ ಮುಕ್ತಗೊಳಿಸಲು ಸಹಕಾರಿಯಾಗಿದೆ. ಪಿ.ಎಂ.ಜೆ.ಡಿ.ವೈ ಬ್ಯಾಂಕಿಂಗ್ ಸೌಲಭ್ಯ ಹೊಂದಿಲ್ಲದವರಿಗೆ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುತ್ತದೆ. ಭಾರತದಲ್ಲಿ ಹಣಕಾಸು ವ್ಯವಸ್ಥೆಯ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಪ್ರತಿಯೊಬ್ಬ ವಯಸ್ಕರನ್ನು ಹಣಕಾಸು ಒಳಗೊಳ್ಳುವಿಕೆ ಸುಪರ್ದಿಗೆ ತರುವ ಗುರಿ ಹೊಂದಲಾಗಿದೆ.

ಇಂದಿನ ಕೋವಿಡ್ – 19 ಪರಿಸ್ಥಿತಿಯಲ್ಲಿ ನೇರ ಸೌಲಭ್ಯ ವರ್ಗಾವಣೆ [ಡಿ.ಬಿ.ಟಿ] ಸಮಾಜದ ದುರ್ಬಲ ವರ್ಗಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿದೆ. ಡಿಬಿಟಿಯ ಪ್ರಮುಖ ಆಯಾಮವನ್ನು ನೋಡುವುದಾದರೆ ಪ್ರಧಾನಮಂತ್ರಿ ಜನ್ ಧನ್ ಖಾತೆಗಳ ಮೂಲಕ ಪ್ರತಿ ರೂಪಾಯಿ ತನ್ನ ಉದ್ದೇಶಿತ ಫಲಾನುಭವಿಗಳಿಗೆ ತಲುಪುವುದನ್ನು ಮತ್ತು ವ್ಯವಸ್ಥಿತವಾಗಿ ಸೋರಿಕೆಯನ್ನು ತಡೆಗಟ್ಟುವುದನ್ನು ಖಾತ್ರಿಪಡಿಸಿದೆ. 

7. 21 ರ ಆಗಸ್ಟ್ 18 ರಂತೆ ಪಿ.ಎಂ.ಜೆ.ಡಿ.ವೈ ನಡಿ ಸಾಧನೆಗಳು

a. ಪಿ.ಎಂ.ಜೆ.ಡಿ.ವೈ ಖಾತೆಗಳು

  • 21 ರ ಆಗಸ್ಟ್ 18ರ ಮಾಹಿತಿಯಂತೆ ಪಿ.ಎಂ.ಜೆ.ಡಿ.ವೈ ನಡಿ ಖಾತೆಗಳು;

43.04 ಕೋಟಿ: 55.47% (23.87 ಕೋಟಿ) ಮಹಿಳಾ ಜನ್ ಧನ್ ಖಾತೆಗಳು ಮತ್ತು 66.69% (28.70 ಕೋಟಿ) ಜನ್ ಧನ್ ಖಾತೆಗಳು ಗ್ರಾಮೀಣ, ಅರೆ ನಗರ ಪ್ರದೇಶಗಳಲ್ಲಿವೆ

  • ಯೋಜನೆಯ ಮೊದಲ ವರ್ಷದಲ್ಲಿ 17.90 ಕೋಟಿ ಪಿ.ಎಂ.ಜೆ.ಡಿ.ವೈ ಖಾತೆಗಳನ್ನು ತೆರೆಯಲಾಗಿತ್ತು.
  • ಪಿ.ಎಂ.ಜೆ.ಡಿ.ವೈ ನಡಿ ನಿರಂತರವಾಗಿ ಖಾತೆಗಳ ಸಂಖ್ಯೆಯಲ್ಲಿ ಏರಿಕೆ
  • ಪಿ.ಎಂ.ಜೆ.ಡಿ.ವೈ ಖಾತೆದಾರರ ಸಂಖ್ಯೆಯಲ್ಲಿ ಮೂರು ಪಟ್ಟು ಏರಿಕೆ.  ಮಾರ್ಚ್ 15 ರಿಂದ 18.8.2021 ರ ನಡುವೆ 14.72 ಕೋಟಿಯಿಂದ 43.04 ಕೋಟಿಗೆ ಖಾತೆಗಳ ಸಂಖ್ಯೆ ಏರಿಕೆ

ಹಣಕಾಸು ಒಳಗೊಳ್ಳುವಿಕೆ ಯಾನದಲ್ಲಿ ಯಾವುದೇ ಸಂದೇಹವಿಲ್ಲದೇ ಗಮನಾರ್ಹ ಸಾಧನೆ

b.  ಚಾಲ್ತಿಯಲ್ಲಿರುವ ಪಿ.ಎಂ.ಜೆ.ಡಿ.ವೈ ಖಾತೆಗಳು -

  • ಈಗಿರುವ ಆರ್.ಬಿ.ಐ ಮಾರ್ಗಸೂಚಿ ಪ್ರಕಾರ ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಗ್ರಾಹಕ ಪ್ರೇರಿತ ವಹಿವಾಟು ನಡೆಸದಿದ್ದರೆ ಪಿ.ಎಂ.ಜೆ.ಡಿ.ವೈ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ.
  • 21 ರ ಆಗಸ್ಟ್ ನ ಮಾಹಿತಿಯಂತೆ ಒಟ್ಟು 43.04 ಕೋಟಿ ಪಿ.ಎಂ.ಜೆ.ಡಿ.ವೈ ಖಾತೆಗಳಿವೆ, 36.86 ಕೋಟಿ (85.6%) ಖಾತೆಗಳು ಚಾಲ್ತಿಯಲ್ಲಿವೆ.
  • ಚಾಲ್ತಿಯಲ್ಲಿರುವ ಖಾತೆಗಳ ಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಗ್ರಾಹಕರು ಬ್ಯಾಂಕಿಂಗ್ ಸೇವೆಯನ್ನು ನಿರಂತರವಾಗಿ ಬಳಸುತ್ತಿರುವುದರ ಸೂಚನೆಯಾಗಿದೆ.
  • 8.2% ಪಿ.ಎಂ.ಜೆ.ಡಿ.ವೈ ಖಾತೆಗಳು ಶೂನ್ಯ ಬ್ಯಾಲೆನ್ಸ್ ಖಾತೆಗಳಾಗಿವೆ.

c.  ಪಿ.ಎಂ.ಜೆ.ಡಿ.ವೈ ಖಾತೆಗಳಲ್ಲಿ ಠೇವಣಿಗಳು -

  • ಪಿ.ಎಂ.ಜೆ.ಡಿ.ವೈ ಖಾತೆಗಳಲ್ಲಿ ಒಟ್ಟು ಠೇವಣಿ ಮೊತ್ತ 1,46,230  ಕೋಟಿ ರೂ
  • ಖಾತೆಗಳಲ್ಲಿ 2.4 ರಷ್ಟು ಹೆಚ್ಚಳವಾಗಿದ್ದು, ಠೇವಣಿಯಲ್ಲಿ ಸುಮಾರು 6.38 ರಷ್ಟು ಹೆಚ್ಚಳವಾಗಿದೆ. [15ರ ಆಗಸ್ಟ್ /21 ರ ಆಗಸ್ಟ್ ನಡುವೆ]

d.  ಪಿ.ಎಂ.ಜೆ.ಡಿ.ವೈ ಖಾತೆಗಳಲ್ಲಿ ಸರಾಸರಿ ಠೇವಣಿ -

  • ಖಾತೆಗಳಲ್ಲಿ ಸರಾಸರಿ ಠೇವಣಿ ಮೊತ್ತ 3,398 ರೂ
  • 15 ರ ಆಗಸ್ಟ್ ನಂತರ ಖಾತೆಗಳಲ್ಲಿ ಸರಾಸರಿ 2.7 ಪಟ್ಟು ಠೇವಣಿ ಹೆಚ್ಚಾಗಿದೆ.
  • ಠೇವಣಿಯಲ್ಲಿ ಸರಾಸರಿ ಹೆಚ್ಚಳವು ಖಾತೆಗಳ ಬಳಕೆ ಹೆಚ್ಚಾದ ಮತ್ತು ಖಾತೆದಾರರಲ್ಲಿ ಉಳಿತಾಯದ ಅಭ್ಯಾಸವನ್ನು ಅಳವಡಿಸುವ ಇನ್ನೊಂದು ಸೂಚನೆಯಾಗಿದೆ.

e.  ಪಿ.ಎಂ.ಜೆ.ಡಿ.ವೈ ಖಾತೆದಾರರಿಗೆ ವಿತರಿಸಿರುವ ರುಪೇ ಕಾರ್ಡ್ ಗಳ ಸಂಖ್ಯೆ

  • ಪಿ.ಎಂ.ಜೆ.ಡಿ.ವೈ  ಖಾತೆದಾರರಿಗೆ 31.23 ಕೋಟಿ ರುಪೇ ಕಾರ್ಡ್ ಗಳ ವಿತರಣೆ
  • ಕಾಲಾನಂತರದಲ್ಲಿ ರುಪೇ ಕಾರ್ಡ್ ಗಳ ಸಂಖ್ಯೆ ಮತ್ತು ಬಳಕೆ ಹೆಚ್ಚಾಗಿದೆ

8.  ಜನ್ ಧನ್ ದರ್ಶಕ್ ಆಪ್

ದೇಶದಲ್ಲಿ ಬ್ಯಾಂಕುಗಳ ಶಾಖೆಗಳು, ಎ.ಟಿ.ಎಂ.ಗಳು, ಬ್ಯಾಂಕ್ ಮಿತ್ರರು, ಅಂಚೆ ಕಚೇರಿಗಳು ಮತ್ತಿತರ ಕೇಂದ್ರಗಳನ್ನು ಸುಲಭವಾಗಿ ತಲುಪಲು ನಾಗರೀಕ ಕೇಂದ್ರಿತ ವೇದಿಕೆಯನ್ನು ಒದಗಿಸುವ ಮೊಬೈಲ್ ಅಪ್ಲಿಕೇಶನ್ ಹೊರತರಲಾಗಿದೆ. ಜಿ.ಐ.ಎಸ್. ಆಪ್ ನಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಕೇಂದ್ರಗಳನ್ನು ಗುರುತಿಲಾಗಿದೆ. ಜನ ಸಾಮಾನ್ಯರ ಅನುಕೂಲಕ್ಕೆ ಮತ್ತು ಅವರಿಗೆ ಅಗತ್ಯವಾಗಿರುವುದನ್ನು ಒದಗಿಸಲು ಜನ್ ಧನ್ ದರ್ಶಕ್ ಆಪ್ ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವೆಬ್ ಆವೃತ್ತಿಯ ಈ ಅಪ್ಲಿಕೇಶನ್ ನಲ್ಲಿ ಸೂಕ್ತ ರೀತಿಯಲ್ಲಿ ಸಂಪರ್ಕ ಪಡೆಯಬಹುದಾಗಿದೆ ; http://findmybank.gov.in.

ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬ್ಯಾಂಕಿಂಗ್ ಟಚ್ ಪಾಯಿಂಟ್ ಗಳ ಸೇವೆ ಇಲ್ಲದ ಹಳ್ಳಿಗಳನ್ನು ಗುರುತಿಸಲು ಈ ಆಪ್ ಬಳಸಬಹುದಾಗಿದೆ. ಹೀಗೆ ಗುರುತಿಸಲಾದ ಸ್ಥಳಗಳಲ್ಲಿ ಬ್ಯಾಂಕಿಂಗ್ ಔಟ್ ಲೆಟ್ ಗಳನ್ನು ತೆರೆಯಲು ರಾಜ್ಯಮಟ್ಟದ ಬ್ಯಾಂಕಿಂಗ್ ಸಮಿತಿ – ಎಸ್.ಎಲ್.ಬಿ.ಸಿಗಳಿಗೆ ಸಹಕಾರಿಯಾಗಲಿದೆ. ಇಂತಹ ಪ್ರಯತ್ನಗಳಿಂದ ಬ್ಯಾಂಕಿಂಗ್ ಸೌಲಭ್ಯವಿಲ್ಲದ ಹಳ್ಳಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಕಾರಿಯಾಗಿದೆ.

9.  ಪಿ.ಎಂ.ಜೆ.ಡಿ.ವೈ ಮಹಿಳಾ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ [ಪಿ.ಎಂ.ಜಿ.ಕೆ.ಪಿ]

26.3.2020 ರಂದು ಗೌರವಾನ್ವಿತ ಹಣಕಾಸು ಸಚಿವರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮೂರು ತಿಂಗಳ ಕಾಲ ತಲಾ 500/- ರೂ ನಂತೆ [20ರ ಏಪ್ರಿಲ್ ನಿಂದ 20ರ ಜೂನ್ ವರೆಗೆ] ಘೋಷಿಸಿದ್ದು, ಈ ಮೊತ್ತವನ್ನು ಪ್ರಧಾನಮಂತ್ರಿ ಜನ್ ಧನ್ ಯೋಜನೆಯ [ಪಿ.ಎಂ.ಜೆ.ಡಿ.ವೈ] ಮಹಿಳಾ ಖಾತೆದಾರರಿಗೆ ವರ್ಗಾವಣೆ ಮಾಡಲಾಗಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಒಟ್ಟು 30,945 ಕೋಟಿ ರೂಪಾಯಿ ಪಿ.ಎಂ.ಜೆ.ಡಿ.ವೈ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು.

10.  ಸುಗಮವಾಗಿ ಡಿಬಿಟಿ ವಹಿವಾಟುಗಳನ್ನು ಖಾತರಿಪಡಿಸುವತ್ತ

ಸುಮಾರು 5 ಕೋಟಿ ಪಿ.ಎಂ.ಜೆ.ಡಿ.ವೈ ಖಾತೆದಾರರು ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ನೇರ ನಗದು ಸೌಲಭ್ಯ [ಡಿಬಿಟಿ] ಪಡೆದುಕೊಂಡಿದ್ದಾರೆ ಎಂದು ಬ್ಯಾಂಕ್ ಗಳು ಮಾಹಿತಿ ನೀಡಿವೆ. ಅರ್ಹ ಫಲಾನುಭವಿಗಳು ಸೂಕ್ತ ಸಮಯದಲ್ಲಿ ಡಿಬಿಟಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದು, ಡಿಬಿಟಿ ವೈಫಲ್ಯಗಳನ್ನು ತಡೆಗಟ್ಟಲು ಸರ್ಕಾರ ಡಿಬಿಟಿ ಮಿಷನ್, ಎನ್.ಪಿ.ಸಿ.ಐ, ಬ್ಯಾಂಕ್ ಗಳು ಮತ್ತು ಇತರೆ ಹಲವು ಸಚಿವಾಲಯಗಳ  ಜತೆ ನಿರಂತರವಾಗಿ ಸಂಪರ್ಕದಲ್ಲಿದೆ.  ಡಿಬಿಟಿ ವಿಫಲತೆ ಕುರಿತು ನಿರಂತರವಾಗಿ ಬ್ಯಾಂಕ್ ಗಳು ಮತ್ತು ಎನ್.ಪಿ.ಸಿ.ಐ ಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಗಳನ್ನು ನಡೆಸುತ್ತಾ ನಿರಂತರ ನಿಗಾವಹಿಸುತ್ತಿರುವ ಪರಿಣಾಮ ಡಿಬಿಟಿ ವಿಫಲತೆ 13.5% [19-20 ಹಣಕಾಸು ವರ್ಷ] ದಿಂದ [20-21 ರ ಹಣಕಾಸು ವರ್ಷ] ದಲ್ಲಿ 5.7% ರಷ್ಟು ಇಳಿಕೆಯಾಗಿದೆ.

11. ಮುಂದಿನ ಹಾದಿ

  1. ಕಿರಿ ವಿಮಾ ಯೋಜನೆಗಳಡಿ ಪಿ.ಎಂ.ಜೆ.ಡಿ.ವೈ ಖಾತೆದಾರರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳುವುದು, ಅರ್ಹ ಪಿ.ಎಂ.ಜೆ.ಡಿ.ವೈ ಖಾತೆದಾರರನ್ನು ಪಿ.ಎಂ.ಜೆ.ಜೆ.ಬಿ.ವೈ ಮತ್ತು ಪಿ.ಎಂ.ಎಸ್.ಬಿ.ವೈ ವ್ಯಾಪ್ತಿಗೆ ಒಳಪಡಿಸಲಾಗುವುದು.  ಬ್ಯಾಂಕುಗಳಿಗೆ ಈಗಾಗಲೇ ಈ ವಿಷಯವನ್ನು ತಿಳಿಸಲಾಗಿದೆ.
  2. ಪಿ.ಎಂ.ಜೆ.ಡಿ.ವೈ ಖಾತೆದಾರರು ರುಪೇ ಕಾರ್ಡ್ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಜತೆಗೆ ಭಾರತದಾದ್ಯಂತ ಈ ವ್ಯವಸ್ಥೆಯನ್ನು ಸ್ವೀಕರಿಸುವ ಮೂಲ ಸೌಕರ್ಯ ವೃದ್ದಿಸಲು ಕ್ರಮ
  3. ಪಿ.ಎಂ.ಜೆ.ಡಿ.ವೈ ಖಾತೆದಾರರ ಕಿರು ಸಾಲ ಮತ್ತು ಫ್ಲೆಕ್ಸಿ ರಿಕರಿಂಗ್ ಠೇವಣಿ ಮತ್ತಿತರ ವಲಯಲ್ಲಿ ಕಿರು ಹೂಡಿಕೆಯ ಅವಕಾಶವನ್ನು ಸುಧಾರಿಸುವ ಉದ್ದೇಶ ಹೊಂದಲಾಗಿದೆ.

***



(Release ID: 1750010) Visitor Counter : 435