ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದಾಖಲೆ ಪ್ರಮಾಣದಲ್ಲಿ ಕೋವಿಡ್-19 ಲಸಿಕೆ ನೀಡಿಕೆಗೆ ಪ್ರಧಾನ ಮಂತ್ರಿ ಶ್ಲಾಘನೆ

Posted On: 27 AUG 2021 10:41PM by PIB Bengaluru

ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್-19 ಲಸಿಕೆ ನೀಡಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಒಂದೇ ದಿನದಲ್ಲಿ 1 ಕೋಟಿಗಿಂತ ಹೆಚ್ಚಿನ ಜನರಿಗೆ ಲಸಿಕೆ ಹಾಕಿರುವುದು ಮಹತ್ವದ ಸಾಧನೆ ಎಂದು ಅವರು ಬಣ್ಣಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು,

“ದಾಖಲೆ ಸಂಖ್ಯೆಯಲ್ಲಿ ಇಂದು ಲಸಿಕೆ ಹಾಕಲಾಗಿದೆ!

ಒಂದೇ ದಿನದಲ್ಲಿ 1 ಕೋಟಿ ಮಟ್ಟ ದಾಟಿ ಲಸಿಕೆ ನೀಡಿರುವುದು ಮಹತ್ವದ ಸಾಧನೆ. ಲಸಿಕೆ ಪಡೆದ ಫಲಾನುಭವಿಗಳು ಮತ್ತು ಲಸಿಕೆ ಆಂದೋಲನ ಯಶಸ್ಸಿಗೆ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು.” ಎಂದು ಹೇಳಿದ್ದಾರೆ.

***


(Release ID: 1749855) Visitor Counter : 200