ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೆ.ಜೆ. ಅಲ್ಫೋನ್ಸ್ ಅವರು ತಮ್ಮ 'ಭಾರತದ ವೇಗವರ್ಧನೆ: ಮೋದಿ ಸರಕಾರದ 7 ವರ್ಷಗಳು' ಪುಸ್ತಕವನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು

ಪ್ರಕಟಣಾ ದಿನಾಂಕ: 26 AUG 2021 1:24PM by PIB Bengaluru

ಮಾಜಿ ಕೇಂದ್ರ ಸಚಿವ ಶ್ರೀ ಕೆ.ಜೆ. ಅಲ್ಫೋನ್ಸ್ ಅವರು ತಮ್ಮ 'ಭಾರತದ ವೇಗವರ್ಧನೆ: 7 ವರ್ಷಗಳ ಮೋದಿ ಸರಕಾರ' ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೊಡುಗೆಯಾಗಿ ನೀಡಿದರು. ಅಲ್ಫೋನ್ಸ್‌ ಅವರು ತಮ್ಮ ʻಭಾರತದ ವೇಗವರ್ಧನೆʼ ಕೃತಿಯಲ್ಲಿ ಭಾರತದ ಸುಧಾರಣಾ ಪಯಣದ ಆಯಾಮಗಳನ್ನು ಸೆರೆಹಿಡಿಯಲು ಪ್ರಶಂಸನೀಯ ಪ್ರಯತ್ನ ಮಾಡಿರುವುದಾಗಿ ಪ್ರಧಾನಿ ಹೇಳಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ನನ್ನ ಗೌರವಾನ್ವಿತ ಸಹೋದ್ಯೋಗಿ ಶ್ರೀ ಅಲ್ಫೋನ್ಸ್ @alphonstourism ಅವರು ತಮ್ಮ 'ಭಾರತದ ವೇಗವರ್ಧನೆ' ಎಂಬ ಕೃತಿಯಲ್ಲಿ ಭಾರತದ ಸುಧಾರಣಾ ಪ್ರಯಾಣದ ವಿವಿಧ ಆಯಾಮಗಳನ್ನು ಸೆರೆಹಿಡಿಯುವಲ್ಲಿ ಪ್ರಶಂಸನೀಯ ಪ್ರಯತ್ನ ಮಾಡಿದ್ದಾರೆ. ಅವರಿಂದ ಪುಸ್ತಕದ ಪ್ರತಿಯನ್ನು ಸ್ವೀಕರಿಸಲು ಸಂತೋಷವಾಯಿತು," ಎಂದಿದ್ದಾರೆ.

***


(ಪ್ರಕಟಣೆ ಐ.ಡಿ.: 1749271) ವಿಸಿಟರ್ ಕೌಂಟರ್ : 317