ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ‘ಸ್ಮಾರಕ ಸಪ್ತಾಹ’ಕ್ಕೆ ಚಾಲನೆ ನೀಡಲಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್


ಮೈಕ್ರೋಸೈಟ್, ಇ-ಪುಸ್ತಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:ಜನರ ಪಾಲ್ಗೊಳ್ಳುವಿಕೆಯ ಉತ್ಸಾಹಕ್ಕೆ ಪ್ರಾಧಾನ್ಯ

ಡಿಡಿ ನೆಟ್ ವರ್ಕ್ ನಲ್ಲಿ ಪ್ರಸಾರವಾಗಲಿದೆ “ನವ ಭಾರತದ ಹೊಸ ಪಯಣ” ಸಾಕ್ಷ್ಯಚಿತ್ರ ಮತ್ತು ಪ್ರದರ್ಶನ

ಅತ್ಯುತ್ತಮ ದೇಶಭಕ್ತಿ/ಶಾಸ್ತ್ರೀಯ ಸಿನಿಮಾಗಳನ್ನು ಪ್ರದರ್ಶಿಸಲು ಚಲನಚಿತ್ರೋತ್ಸವ

ಯುವ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಸಂವಾದನಾತ್ಮಕ ಚಟುವಟಿಕೆ, ರಸಪ್ರಶ್ನೆ ಮತ್ತು ಸ್ಪರ್ಧೆಗಳು

Posted On: 22 AUG 2021 5:28PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ತನ್ನ ಅಪ್ರತಿಮ ಸಪ್ತಾಹ (ಐಕಾನಿಕ್ ವೀಕ್) ಆಚರಣೆಯ ಅಡಿಯಲ್ಲಿ 2021ರ ಆಗಸ್ಟ್ 23 ರಿಂದ 29 ರವರೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ಹಲವಾರು ಚಟುವಟಿಕೆಗಳನ್ನು ಪ್ರಾರಂಭಿಸಲು ಅಣಿಯಾಗಿದೆ. ಮಾನ್ಯ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು "ಜನರ ಪಾಲ್ಗೊಳ್ಳುವಿಕೆ ಮತ್ತು ಜನಾಂದೋಲನ"ದ ಒಟ್ಟಾರೆ ಉತ್ಸಾಹದ ಅಡಿಯಲ್ಲಿ ದೇಶಾದ್ಯಂತದ ಜನರನ್ನು ಆಕರ್ಷಿಸುವ ಭವ್ಯ ಆಚರಣೆಗೆ ಚಾಲನೆ ನೀಡಲಿದ್ದಾರೆ. ನವ ಭಾರತದ ಪ್ರಯಾಣವನ್ನು ಪ್ರದರ್ಶಿಸುವುದು ಮತ್ತು ಸ್ವಾತಂತ್ರ್ಯ ಹೋರಾಟದ 'ಎಲೆ ಮರೆಯ ಕಾಯಿಯಂತಹ ನಾಯಕರು' ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯ ಬಗ್ಗೆ ವ್ಯಾಪಕ ಪ್ರಚಾರ ಚಟುವಟಿಕೆಗಳ ಮೂಲಕ ಆಚರಿಸುವುದು ಇದರ ಉದ್ದೇಶವಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು, ನುಕ್ಕಡ್ ನಾಟಕ ಮತ್ತು ಟಿವಿ ಕಾರ್ಯಕ್ರಮಗಳು ಮತ್ತು ಡಿಜಿಟಲ್ /ಸಾಮಾಜಿಕ ಮಾಧ್ಯಮದ ನವೀನ ವಿಧಾನಗಳಂತಹ ಸಾಂಪ್ರದಾಯಿಕ ವಿಧಾನಗಳ ಮೂಲಕ 360 ಡಿಗ್ರಿ ಜನಸಂಪರ್ಕ ಎಂಬುದು ಸಂಯೋಜಿತ ಆಚರಣೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ವಿವಿಧ ರಾಜ್ಯಗಳ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ಮತ್ತು ಸಚಿವಾಲಯದ ಪ್ರಾದೇಶಿಕ ಕಚೇರಿಗಳ ಸಹಯೋಗದ ಪ್ರಯತ್ನಗಳ ಮೂಲಕ ಆಕಾಶವಾಣಿ ದೈನಂದಿನ ಕಿರು ಕಾರ್ಯಕ್ರಮ "ಸ್ವಾತಂತ್ರ್ಯದ ಪಯಣ, ಆಕಾಶವಾಣಿಯ ಜೊತೆಗೆ" (ಆಜಾದಿ ಕ ಸಫರ್, ಆಕಾಶವಾಣೀ ಕಿ ಸಾಥ್) ಭಾರತದಾದ್ಯಂತ ಶಾಲಾ ಕಾಲೇಜುಗಳನ್ನು ತಲುಪಲಿದೆ. ಆಕಾಶವಾಣಿ ಜಾಲದಲ್ಲಿ ಆರಂಭವಾಗಲಿರುವ ವಿಶೇಷ ಕಾರ್ಯಕ್ರಮಗಳ ಸರಣಿಯಲ್ಲಿ ಧರೋಹರ್ (ಸ್ವಾತಂತ್ರ್ಯ ಸಂಗ್ರಾಮದ ನಾಯಕರ ಭಾಷಣಗಳು) ಮತ್ತು ನಿಶಾನ್ (75 ಹೆಗ್ಗುರುತಿನ ತಾಣಗಳ ಪರಿಚಯ), ಅಪರಾಜಿತಾ (ಮಹಿಳಾ ನಾಯಕರು) ಸೇರಿವೆ. ಡಿಡಿ ಜಾಲದಲ್ಲಿ " ನವ ಭಾರತದ ಹೊಸ ಪಯಣ "(ನಯೀ ಭಾರತ್ ಕಾ ನಯಾ ಸಫರ್) ಮತ್ತು "ಭಾರತದ ಪಯಣ (ಜರ್ನಿ ಆಫ್ ನ್ಯೂ ಇಂಡಿಯಾ)" ಅಡಿಯಲ್ಲಿ ವಲಯವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ, ಇದು ರಾಜತಾಂತ್ರಿಕತೆ, ಡಿಜಿಟಲ್ ಇಂಡಿಯಾ, ಶಾಸಕಾಂಗ ಸುಧಾರಣೆಗಳು ಮುಂತಾದ ವಿಷಯಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಎಲೆಮರೆಯ ಕಾಯಿಯಂತಹ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ನಡೆಯುತ್ತಿರುವ ದೈನಂದಿನ ವಿಶೇಷ ಸುದ್ದಿ ಕಿರುಚಿತ್ರಗಳನ್ನು ಒಳಗೊಂಡಿರುತ್ತದೆ.

ಅಪ್ರತಿಮ ಚಿತ್ರಗಳ ಪ್ರದರ್ಶನವು ಅಪ್ರತಿಮ ಸಪ್ತಾಹ ಆಚರಣೆಯ ವಿಶೇಷ ವೈಶಿಷ್ಟ್ಯವಾಗಿರುತ್ತದೆ. ಡಿಡಿ ಜಾಲದಲ್ಲಿ "ನೇತಾಜಿ", "ರಾಜಪ್ರಭುತ್ವ ಸಂಸ್ಥಾನಗಳ ಏಕೀಕರಣ" ಮುಂತಾದ ಸಾಕ್ಷ್ಯಚಿತ್ರಗಳ ಸರಣಿಯನ್ನು ಪ್ರದರ್ಶಿಸಲಿದೆ. "ರಜಿ" ಯಂತಹ ಜನಪ್ರಿಯ ಭಾರತೀಯ ಚಲನಚಿತ್ರಗಳು ಸಹ ಪ್ರಸಾರವಾಗಲಿದೆ. ಎನ್.ಎಫ್.ಡಿ.ಸಿ ತನ್ನ ಒಟಿಟಿ ವೇದಿಕೆಯಲ್ಲಿ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ www.cinemasofindia.com "ಐಲ್ಯಾಂಡ್ ಸಿಟಿ", "ಕ್ರಾಸಿಂಗ್ ಬ್ರಿಡ್ಜಸ್" ಮುಂತಾದ ಚಲನಚಿತ್ರಗಳು ವಿಶೇಷವಾಗಿ ಪ್ರದರ್ಶಿತವಾಗುತ್ತಿವೆ. ಎನ್.ಎಫ್.ಡಿ.ಸಿಯಿಂದ ಚಲನಚಿತ್ರ ವಿದ್ಯಾರ್ಥಿಗಳು ಮತ್ತು ಉತ್ಸಾಹಿಗಳಿಗಾಗಿ ಆನ್ ಲೈನ್ ಸಂವಾದನಾತ್ಮಕ ಅಧಿವೇಶನ ಮತ್ತು ಚಲನಚಿತ್ರ ವಿಭಾಗದ "ಚಲನಚಿತ್ರ ನಿರ್ಮಾಣದಲ್ಲಿ ತಾಂತ್ರಿಕ ಪ್ರಗತಿಗಳು" ಕುರಿತ ವೆಬಿನಾರ್ ಗಳು ಇತರ ವಿಶೇಷಗಳಲ್ಲಿ ಸೇರಿವೆ.

ಉತ್ಸಾಹವನ್ನು ಹೆಚ್ಚಿಸಲು, "India@75: ವಾಯೇಜ್ ಆಫ್ ಪ್ರೋಗ್ರೆಸ್" ಮತ್ತು "India@75: ಐಕಾನ್ಸ್ ಆಫ್ ಇಂಡಿಯಾ" ನಂತಹ ಇತರ ಆನ್ ಲೈನ್ ಚಲನಚಿತ್ರೋತ್ಸವಗಳ ಸರಣಿಯು ಚಲನಚಿತ್ರ ವಿಭಾಗದಿಂದ ಕ್ರಮವಾಗಿ ಆಗಸ್ಟ್ 23 ರಿಂದ 25 ರವರೆಗೆ ಮತ್ತು ಆಗಸ್ಟ್ 26 ರಿಂದ 28 ರವರೆಗೆ ನಡೆಯಲಿದೆ. ಚಲನಚಿತ್ರೋತ್ಸವಗಳ ನಿರ್ದೇಶನಾಲಯವು (ಡಿಎಫ್.ಎಫ್) ಭಾರತದ ಇತರ ದೇಶಗಳ ವಿವಿಧ ರಾಯಭಾರ ಕಚೇರಿಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಹಯೋಗ ಹೊಂದಿದೆ. 2021ರ ಆಗಸ್ಟ್ 23 ರಿಂದ 29, ರವರೆಗೆ ಎನ್.ಎಫ್.ಎ.ಐ ವೆಬ್ ಸೈಟ್ ನಲ್ಲಿ ನಡೆಯಲಿರುವ ಮೇರು (ಕ್ಲಾಸಿಕ್) ಸಿನೆಮಾ ಕುರಿತ ನೇರ ವರ್ಚುವಲ್ ಫಿಲ್ಮ್ ಪೋಸ್ಟರ್ ಪ್ರದರ್ಶನದ ಮೂಲಕ ಎನ್.ಎಫ್.ಎ.ಐ ಪ್ರಾಯೋಜಕರನ್ನು ಮಂತ್ರಮುಗ್ಧಗೊಳಿಸಲಿದೆ.

ಸಂವಹನ ಮತ್ತು ಜನಸಂಪರ್ಕ ಶಾಖೆ ಕೂಡ ಆರ್.ಒ.ಬಿಗಳ 50ಕ್ಕೂ ಹೆಚ್ಚು ಸಮಗ್ರ ಸಂವಹನ ಮತ್ತು ಜನಸಂಪರ್ಕ ಕಾರ್ಯಕ್ರಮಗಳು ಮತ್ತು ಮತ್ತು ದೇಶಾದ್ಯಂತದ ಸಂಗೀತ ಮತ್ತು ನಾಟಕ ವಿಭಾಗದ 1000ಕ್ಕೂ ಹೆಚ್ಚು ಪಿ.ಆರ್.ಟಿಗಳ ಮೂಲಕ ಮೂಲಕ ನುಕ್ಕಡ್ ನಾಟಕಗಳು, ಕಿರು ನಾಟಕಗಳು, ಯಕ್ಷಣಿ ಪ್ರದರ್ಶನಗಳು, ಬೊಂಬೆಯಾಟ, ಜಾನಪದ ಗಾಯನಗಳೊಂದಿಗೆ ಜನರನ್ನು ತಲುಪಲಿದೆ. ಜೊತೆಗೆ, ಬಿಒಸಿ ತನ್ನ ವೆಬ್ ಸೈಟ್ ನಲ್ಲಿ ಲಭ್ಯವಿರುವ 'ಸಂವಿಧಾನದ ರಚನೆ' ಕುರಿತ ಇ-ಬುಕ್ ಅನ್ನು ಬಿಡುಗಡೆ ಮಾಡಲಿದೆ. ಉತ್ಸಾಹಿ ಓದುಗರು ಭಾರತದಾದ್ಯಂತ ಪ್ರಕಾಶನ ವಿಭಾಗದ ಪುಸ್ತಕ ಗ್ಯಾಲರಿಗಳಲ್ಲಿ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿಯುಕ್ತ ಮತ್ತು ರೋಮಾಂಚಕ ಪುಸ್ತಕಗಳನ್ನು ಸಹ ನೋಡಬಹುದು.

ಯುವ ಉತ್ಸಾಹಿಗಳು, ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂವಾದಾತ್ಮಕ ಚಟುವಟಿಕೆಗಳು, ರಸಪ್ರಶ್ನೆಗಳು ಮತ್ತು ಸ್ಪರ್ಧೆಗಳನ್ನು ಸಹ ಆನಂದಿಸಬಹುದು, ಜೊತೆಗೆ ಸ್ವಾತಂತ್ರ್ಯ ಹೋರಾಟ ಮತ್ತು ನವ ಭಾರತದ ವೈಭವದ ವಾಕ್ ಶ್ರವಣ ಪ್ರದರ್ಶನಗಳನ್ನು ಸಹ ಆನಂದಿಸಬಹುದು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಪ್ರತಿಮ ಸಪ್ತಾಹದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಭವ್ಯ ಆಚರಣೆಯಾಗಿದ್ದು, ಇದು ಯುವ, ನವ ಮತ್ತು ಅಪ್ರತಿಮ ಭಾರತದ ಆಕಾಂಕ್ಷೆಗಳು ಮತ್ತು ಕನಸುಗಳೊಂದಿಗೆ ಹಿಂದಿನ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು ಮತ್ತು ವೈಭವಗಳ ಮಿಶ್ರಣವನ್ನು ಪ್ರದರ್ಶಿಸುತ್ತದೆ.

***


(Release ID: 1748099) Visitor Counter : 457