ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ಕೈಗಾರಿಕೆಗಳ ಒಕ್ಕೂಟದ ವಾರ್ಷಿಕ ಮಹಾಸಭೆ ಉದ್ದೇಶಿಸಿ ನಾಳೆ ಪ್ರಧಾನ ಮಂತ್ರಿ ಅವರಿಂದ ಭಾಷಣ

प्रविष्टि तिथि: 09 AUG 2021 10:07PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಆಯೋಜಿತವಾಗಿರುವ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ವಾರ್ಷಿಕ ಮಹಾಸಭೆ – 2021 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಳೆ ಸಂಜೆ 4.30ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. “ಭಾರತ@75: ಆತ್ಮನಿರ್ಭರ್ ಭಾರತ ಕಟ್ಟಲು ಸರ್ಕಾರ ಮತ್ತು ಉದ್ಯಮ ರಂಗ ಜತೆಗೂಡಿ ಕೆಲಸ ಮಾಡಲಿವೆಎಂಬ ಘೋಷವಾಕ್ಯದಡಿ ಸಾಲಿನ ವಾರ್ಷಿಕ ಮಹಾಸಭೆ ಜರುಗಲಿದೆ.

ಸಿಐಐ ವಾರ್ಷಿಕ ಮಹಾಸಭೆ 2021 ಕುರಿತು

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ವಾರ್ಷಿಕ ಮಹಾಸಭೆ ಆಗಸ್ಟ್ 11 ಮತ್ತು 12ರಂದು 2 ದಿನಗಳ ಕಾಲ ನಡೆಯಲಿದೆ. ಸಿಂಗಾಪುರದ ಉಪಪ್ರಧಾನ ಮಂತ್ರಿ ಮತ್ತು ಆರ್ಥಿಕ ನೀತಿಗಳ ಸಮನ್ವಯ ಸಚಿವ ಶ್ರೀಯತ ಹೆಂಗ್ ಸ್ವೀ ಕೀಟ್ ಅವರು ವಿಶೇಷ ಅಂತಾರಾಷ್ಟ್ರೀಯ ಅತಿಥಿ ಭಾಷಣಕಾರರಾಗಿ ಮಹಾಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಹಾಸಭೆಯಲ್ಲಿ ಹಲವು ಸಚಿವರು, ಉನ್ನತಾಧಿಕಾರಿಗಳು, ಭಾರತದ ಶೈಕ್ಷಣಿಕ ಮತ್ತು ಕೈಗಾರಿಕಾ ರಂಗದ ಹಲವು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

***


(रिलीज़ आईडी: 1744380) आगंतुक पटल : 238
इस विज्ञप्ति को इन भाषाओं में पढ़ें: हिन्दी , Malayalam , English , Urdu , Marathi , Manipuri , Bengali , Punjabi , Gujarati , Odia , Tamil , Telugu