ಪ್ರಧಾನ ಮಂತ್ರಿಯವರ ಕಛೇರಿ

ʻಟೋಕಿಯೊ ಒಲಿಂಪಿಕ್ಸ್ 2020ʼ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಭಾರತೀಯ ತಂಡವನ್ನು ಅಭಿನಂದಿಸಿದ ಪ್ರಧಾನಿ


ತಳಮಟ್ಟದಲ್ಲಿ ಕ್ರೀಡೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ಮೂಲಕ ಹೊಸ ಪ್ರತಿಭೆಗಳು ಹೊರಹೊಮ್ಮಲು ಅವಕಾಶ ಮಾಡಿಕೊಡುವಂತೆ ಕರೆ ನೀಡಿದ ಪ್ರಧಾನಿ

ಸುವ್ಯವಸ್ಥಿತವಾಗಿ ಕ್ರೀಡಾಕೂಟ ನಡೆಸಿಕೊಟ್ಟ ಜಪಾನ್ ಸರಕಾರ ಮತ್ತು ಜನತೆಗೆ ಧನ್ಯವಾದ ಅರ್ಪಿಸಿದ ಪ್ರಧಾನಿ

Posted On: 08 AUG 2021 6:18PM by PIB Bengaluru

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ತಂಡವನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಟೋಕಿಯೊ 2020 ಕ್ರೀಡಾ ಕೂಟದ ವರ್ಣರಂಜಿತ ಸಮಾರೋಪದ ಸಂದರ್ಭದಲ್ಲಿ, ಭಾರತವನ್ನು ಪ್ರತಿನಿಧಿಸಿದ ಪ್ರತಿಯೊಬ್ಬ ಕ್ರೀಡಾಪಟುವೂ ಚಾಂಪಿಯನ್ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಭಾರತ ಗೆದ್ದಿರುವ ಪದಕಗಳು ಖಂಡಿತವಾಗಿಯೂ ನಮ್ಮ ದೇಶಕ್ಕೆ ಹೆಮ್ಮೆ ಮತ್ತು ಶ್ರೇಷ್ಠತೆಯ ಭಾವ ತಂದಿವೆ ಎಂದು ಅವರು ಹೇಳಿದ್ದಾರೆ. 

ಇದೇ ವೇಳೆ, ತಳಮಟ್ಟದಲ್ಲಿ ಕ್ರೀಡೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲು ಇದು ಸಕಾಲವಾಗಿದೆ. ಆ ಮೂಲಕ ಹೊಸ ಪ್ರತಿಭೆಗಳು ಹೊರಹೊಮ್ಮಿ, ಮುಂದಿನ ದಿನಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ ಎಂದು ಅವರು ಕರೆ ನೀಡಿದ್ದಾರೆ.

ಸುವ್ಯವಸ್ಥಿತವಾಗಿ ಕ್ರೀಡಾಕೂಟವನ್ನು ನಡೆಸಿಕೊಟ್ಟ ಜಪಾನ್‌ನ ಸರಕಾರ ಮತ್ತು ಜನರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. "ಇಂತಹ ಸಮಯದಲ್ಲಿ ಯಶಸ್ವಿಯಾಗಿ ಕ್ರೀಡಾಕೂಟದ ಆತಿಥ್ಯ ವಹಿಸುವ ಮೂಲಕ ದಿಟ್ಟತನದ ಸಂದೇಶ ರವಾನಿಸಿದಂತಾಗಿದೆ. ಜತೆಗೆ ಕ್ರೀಡೆಯ ಒಗ್ಗೂಡಿಸುವಿಕೆಯ ಶಕ್ತಿಯೂ ಇದರಿಂದ ಸಾಬೀತಾಗಿದೆ,ʼʼ ಎಂದು ಪ್ರಧಾನಿ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ಗಳಲ್ಲಿ, ಪ್ರಧಾನಿಯವರು: 

"ಟೋಕಿಯೊ ಒಲಿಂಪಿಕ್ಸ್ ಗೆ #Tokyo2020 ತೆರೆ ಬೀಳುತ್ತಿರುವ ಈ ಸಂದರ್ಭದಲ್ಲಿ, ಕ್ರೀಡೆಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತೀಯ ತಂಡವನ್ನು ನಾನು ಅಭಿನಂದಿಸುತ್ತೇನೆ. ಅತ್ಯುತ್ತಮ ಕೌಶಲ್ಯ, ತಂಡದ ಸ್ಫೂರ್ತಿ ಮತ್ತು ಸಮರ್ಪಣೆ ಭಾವವನ್ನು ಆಟಗಾರರು ಮೂರ್ತೀಕರಿಸಿದ್ದಾರೆ. ಭಾರತವನ್ನು ಪ್ರತಿನಿಧಿಸಿದ ಪ್ರತಿಯೊಬ್ಬ ಕ್ರೀಡಾಪಟುವೂ ಚಾಂಪಿಯನ್.”

“ಭಾರತ ಗೆದ್ದಿರುವ ಪದಕಗಳು ಖಂಡಿತವಾಗಿಯೂ ನಮ್ಮ ದೇಶಕ್ಕೆ ಹೆಮ್ಮೆ ಮತ್ತು ಶ್ರೇಷ್ಠತೆಯ ಭಾವ ತಂದಿವೆ. 

“ಇದೇ ವೇಳೆ, ತಳಮಟ್ಟದಲ್ಲಿ ಕ್ರೀಡೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲು ಇದು ಸಕಾಲವಾಗಿದೆ. ಇದರಿಂದ ಹೊಸ ಪ್ರತಿಭೆಗಳು ಹೊರಹೊಮ್ಮಿ ಮುಂದಿನ ದಿನಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ. #Tokyo2020”

“ಸುವ್ಯವಸ್ಥಿತವಾಗಿ ಆಟಗಳನ್ನು ಆಯೋಜಿಸಿದ್ದಕ್ಕಾಗಿ ಜಪಾನ್‌ ಸರಕಾರ ಮತ್ತು ದೇಶದ ಜನರಿಗೆ ವಿಶೇಷವಾಗಿ ನನ್ನ ಧನ್ಯವಾದಗಳು.”

“ಇಂತಹ ಸಮಯದಲ್ಲಿ ಯಶಸ್ವಿಯಾಗಿ ಕ್ರೀಡಾಕೂಟದ ಆತಿಥ್ಯ ವಹಿಸುವುದು ದಿಟ್ಟತನದ ಬಲವಾದ ಸಂದೇಶವನ್ನು ನೀಡುತ್ತದೆ. ಕ್ರೀಡೆಗಳ ಒಗ್ಗೂಡಿಸುವಿಕೆ ಶಕ್ತಿಯೂ ಇದರಿಂದ ಸಾಬೀತಾಗಿದೆ. #ಟೋಕಿಯೋ 2020" ಎಂದಿದ್ದಾರೆ.

***


(Release ID: 1743887) Visitor Counter : 235