ಪ್ರಧಾನ ಮಂತ್ರಿಯವರ ಕಛೇರಿ

ಮೈ ಗೌಗೆ 7 ವರ್ಷ ತುಂಬಿದ ಸಂದರ್ಭದಲ್ಲಿ ಮೈ ಗೌನ ಎಲ್ಲ ಸ್ವಯಂ ಸೇವಕರಿಗೆ ಮತ್ತು ಕೊಡುಗೆ ನೀಡಿದವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 26 JUL 2021 6:30PM by PIB Bengaluru

ಮೈ ಗೌ ವೇದಿಕೆಯನ್ನು ತಮ್ಮ ಕೊಡುಗೆಯ ಮೂಲಕ ಶ್ರೀಮಂತಗೊಳಿಸಿದ ಎಲ್ಲ ಸ್ವಯಂಸೇವಕರು ಮತ್ತು ಕೊಡುಗೆ ನೀಡಿದವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಮೈಗೌ ಇಂಡಿಯಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಯವರು;

"ಮೈ ಗೌ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಗೆ ಸಮರ್ಥ ಉದಾಹರಣೆಯಾಗಿ ಉನ್ನತವಾಗಿ ನಿಲ್ಲುತ್ತದೆ ಮತ್ತು ನಮ್ಮ ಯುವ ಶಕ್ತಿಗೆ ಧ್ವನಿ ನೀಡಿದೆ.

ಇಂದು ನಾವು #7YearsOfMyGov, ಮೈ ಗೌ 7ನೇ ವರ್ಷ ಪೂರೈಸಿರುವಾಗ, ನಾನು ತಮ್ಮ ಕೊಡುಗೆಯಿಂದ ವೇದಿಕೆಯನ್ನು ಶ್ರೀಮಂತಗೊಳಿಸಿದ ಎಲ್ಲರನ್ನೂ ಶ್ಲಾಘಿಸುತ್ತೇನೆ.." ಎಂದು ತಿಳಿಸಿದ್ದಾರೆ.

***


(रिलीज़ आईडी: 1739325) आगंतुक पटल : 223
इस विज्ञप्ति को इन भाषाओं में पढ़ें: Assamese , Telugu , English , Urdu , हिन्दी , Marathi , Bengali , Manipuri , Punjabi , Gujarati , Odia , Tamil , Malayalam