ಪ್ರಧಾನ ಮಂತ್ರಿಯವರ ಕಛೇರಿ
ಲೋಕಸಭೆಯಲ್ಲಿ ಹೊಸ ಮಂತ್ರಿಗಳನ್ನು ಪರಿಚಯಿಸುವಾಗ ಪ್ರಧಾನಮಂತ್ರಿಯವರ ಆರಂಭಿಕ ಹೇಳಿಕೆಯ ಅನುವಾದ
Posted On:
19 JUL 2021 12:29PM by PIB Bengaluru
ಹಲವಾರು ಮಹಿಳೆಯರು, ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಸೇರಿದ ಹಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತರುತ್ತದೆ. ಹಲವಾರು ಹೊಸ ಸಚಿವರು ರೈತರ ಮಕ್ಕಳು ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರು: ಪ್ರಧಾನಮಂತ್ರಿ
ಹೆಚ್ಚಿನ ಮಹಿಳೆಯರು, ಎಸ್.ಸಿ, ಎಸ್.ಟಿ ಮತ್ತು ಒಬಿಸಿ ಸಮುದಾಯಕ್ಕೆ ಸೇರಿದವರು ಮಂತ್ರಿಗಳಾಗುತ್ತಿದ್ದಾರೆ ಎಂದು ಕೆಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತೋರುತ್ತಿದೆ: ಪ್ರಧಾನಮಂತ್ರಿ
ಗೌರವಾನ್ವಿತ ಸಭಾಧ್ಯಕ್ಷರೇ
ಹೆಚ್ಚಿನ ಪ್ರಮಾಣದ ಮಹಿಳಾ ಸಂಸದರು ಸಚಿವರಾಗಿರುವ ಹಿನ್ನೆಲೆಯಲ್ಲಿ ಸದನದಲ್ಲಿ ಉತ್ಸಾಹದ ವಾತಾವರಣ ಇರಲಿದೆ ಎಂದು ನಾನು ಭಾವಿಸಿದ್ದೇ. ಅದಿಕ ಸಂಖ್ಯೆಯ ನಮ್ಮ ದಲಿತ ಸಹೋದರರು ಮತ್ತು ಪರಿಶಿಷ್ಟ ಪಂಗಡದ ಸ್ನೇಹಿತರು ಹೆಚ್ಚಾಗಿ ಸಚಿವರಾಗಿರುವುದು ತಮಗೆ ಸಂತಸ ತಂದಿದೆ. ಇದರಿಂದ ಪ್ರತಿಯೊಬ್ಬರಿಗೂ ಸಂತೋಷವಾಗಬೇಕು.
ಗೌರವಾನ್ವಿತ ಸಭಾಧ್ಯಕ್ಷರೇ
ನಮ್ಮ ಸಹ ಸಂಸದರನ್ನು ಸದನದಲ್ಲಿ ಪರಿಚಯಿಸುವುದು ಸಂತೋಷದ ಸಂಗತಿಯಾಗಿದ್ದು, ಇವರು ಕೃ಼ಷಿ ಮತ್ತು ಗ್ರಾಮೀಣ ಹಿನ್ನೆಲೆಯವರು, ಸಾಮಾಜಿಕ – ಆರ್ಥಿಕವಾಗಿ ಹಿಂದುಳಿದವರು. ಓಬಿಸಿ ಸಮುದಾಯದವರು ಮತ್ತು ದೊಡ್ಡ ಸಂಖ್ಯೆಯಲ್ಲಿ ಇವರಿಗೆ ಮಂತ್ರಿಪರಿಷತ್ ನಲ್ಲಿ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬರೂ ಮೇಜುಕುಟ್ಟಿ ಇವರನ್ನು ಸ್ವಾಗತಿಸಬೇಕಾಗಿತ್ತು, ಆದರೆ ಹೆಚ್ಚು ದಲಿತರು, ಮಹಿಳೆಯರು, ಒಬಿಸಿಗಳು, ರೈತರ ಮಕ್ಕಳು ಸಚಿವರಾಗಿರುವುದನ್ನು ಕೆಲವು ಜನರಿಗೆ ಬಹುಶಃ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಮತ್ತು ಅವರು ನೂತನ ಸಚಿವರನ್ನು ಪರಿಚಯಿಸಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಗೌರವಾನ್ವಿತ ಸಭಾಧ್ಯಕ್ಷರೇ ಸಂಪುಟಕ್ಕೆ ಹೊಸದಾಗಿ ನೇಮಕಗೊಂಡಿರುವ ಸಚಿವರನ್ನು ಲೋಕಸಭೆಗೆ ಪರಿಚಯಿಸಲಾಗಿದೆ ಎಂದು ಪರಿಗಣಿಸಬೇಕು.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1738975)
Visitor Counter : 240
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam