ಪ್ರಧಾನ ಮಂತ್ರಿಯವರ ಕಛೇರಿ

ಕಾಕತೀಯ ರಾಮಪ್ಪ ದೇವಸ್ಥಾನವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ

प्रविष्टि तिथि: 25 JUL 2021 6:24PM by PIB Bengaluru

ಕಾಕತೀಯ ರಾಮಪ್ಪ ದೇವಸ್ಥಾನವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಜನತೆ ಭವ್ಯ ದೇವಸ್ಥಾನ ಸಂಕಿರ್ಣಕ್ಕೆ ಭೇಟಿ ನೀಡಬೇಕು ಮತ್ತು ಅಲ್ಲಿನ ವೈಭವದ ಬಗ್ಗೆ ಮೊದಲ ಅನುಭವ ಪಡೆಯಬೇಕು ಎಂದು ಹೇಳಿದ್ದಾರೆ.

ಯುನೆಸ್ಕೋಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು, “ ಇದು ಅತ್ಯುತ್ತಮ, ಎಲ್ಲರಿಗೂ, ವಿಶೇಷವಾಗಿ ತೆಲಂಗಾಣದ ಜನರಿಗೆ ಅಭಿನಂದನೆಗಳುಎಂದು ಹೇಳಿದ್ದಾರೆ.

ಅಪ್ರತಿಮ ರಾಮಪ್ಪ ದೇವಾಲಯ ಕಾಕತೀಯ ರಾಜವಂಶದ ಅತ್ಯುತ್ತಮ ಕರಕುಶಲತೆಯ ಪ್ರತೀಕವಾಗಿದೆ. ಇಂತಹ ಭವ್ಯ ದೇವಸ್ಥಾನದ ಸಂಕಿರ್ಣಕ್ಕೆ ಜನತೆ ಭೇಟಿ ನೀಡಬೇಕು ಮತ್ತು ಅಲ್ಲಿನ ವೈಭವದ ಬಗ್ಗೆ ಮೊದಲ ಅನುಭವ ಪಡೆಯಬೇಕು ಎಂದು ಸಲಹೆ ಮಾಡಿದ್ದಾರೆ.

***


(रिलीज़ आईडी: 1738922) आगंतुक पटल : 331
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Manipuri , Punjabi , Gujarati , Odia , Tamil , Telugu , Malayalam