ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯಸಭೆಯಲ್ಲಿ ಶ್ರೀ ಹರ್ದಿಪ್ ಸಿಂಗ್ ಪುರಿ ಅವರ ಭಾಷಣ ಮತ್ತು ಸಾಂಕ್ರಾಮಿಕದ ಬಗ್ಗೆ ಆರೋಗ್ಯ ಸಚಿವರು ಚರ್ಚೆಗೆ ನೀಡಿದ ಉತ್ತರವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
20 JUL 2021 9:31PM by PIB Bengaluru
ಕೋವಿಡ್-19 ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಹರ್ದಿಪ್ ಸಿಂಗ್ ಪುರಿ ಅವರು ಮಾಡಿದ ಭಾಷಣವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು. ಈ ಭಾಷಣ “ ಜಾಗತಿಕ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವ್ಯಾಪಕವಾದ ವಿಷಯಗಳನ್ನು ವಿವರಿಸುತ್ತದೆ “ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯ ಅವರ ವ್ಯಾಪಕವಾದ ಭಾಷಣದ ಸಂಪರ್ಕವನ್ನು ಸಹ ಟ್ವೀಟ್ ಮೂಲಕ ಪ್ರಧಾನಮಂತ್ರಿ ಅವರು ಹಂಚಿಕೊಂಡಿದ್ದಾರೆ. ಈ ಭಾಷಣ “ ಕೋವಿಡ್ – 19 ಕುರಿತ ಹಲವಾರು ಆಯಾಮಗಳ ಒಳನೋಟ ಮತ್ತು ಸೂಕ್ಷ್ಮ ವಿಷಯಗಳನ್ನು ಹೊಂದಿದೆ. ಅವರ ಗಮನಾರ್ಹ ವಿಷಯಗಳನ್ನು ನೀವೆಲ್ಲರೂ ಆಲಿಸಬೇಕೆಂದು ಮನವಿ ಮಾಡುತ್ತಿದ್ದೇನೆ” ಎಂದು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
***
(Release ID: 1737496)
Visitor Counter : 174
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam