ಪ್ರಧಾನ ಮಂತ್ರಿಯವರ ಕಛೇರಿ

ಶಿವಗಿರಿ ಮಠದ ಹಿಂದಿನ ಮುಖ್ಯಸ್ಥ ಸ್ವಾಮಿ ಪ್ರಕಾಶಾನಂದಜೀ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

ಪ್ರಕಟಣಾ ದಿನಾಂಕ: 07 JUL 2021 3:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶಿವಗಿರಿ ಮಠದ ಹಿಂದಿನ ಮುಖ್ಯಸ್ಥರಾದ ಸ್ವಾಮಿ ಪ್ರಕಾಶಾನಂದಜೀ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು,  "ಸ್ವಾಮಿ ಪ್ರಕಾಶಾನಂದಜೀ ಆಧ್ಯಾತ್ಮಿಕತೆ ಮತ್ತು ಜ್ಞಾನದ ಗಣಿಯಾಗಿದ್ದರು. ಅವರ ನಿಸ್ವಾರ್ಥ ಸೇವಾ ಕಾರ್ಯಗಳು ಕಡು ಬಡವರನ್ನು ಸಬಲೀಕರಿಸಿದ್ದವು. ಅವರು ಶ್ರೀ ನಾರಾಯಣ ಗುರು ಅವರ ಉದಾತ್ತ ಚಿಂತನೆಗಳನ್ನು ಜನಪ್ರಿಯಗೊಳಿಸುವ ನೇತೃತ್ವ ವಹಿಸಿದ್ದರು. ಅವರ ಅಗಲಿಕೆಯಿಂದ ದುಃಖಿತನಾಗಿದ್ದೇನೆ. ಓಂ ಶಾಂತಿ" ಎಂದು ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1733377) ವಿಸಿಟರ್ ಕೌಂಟರ್ : 276