ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ವೈದ್ಯರೊಂದಿಗೆ ಆಫ್ಘಾನಿಸ್ತಾನದ ರಾಯಭಾರಿಯ ಅನುಭವ ಕುರಿತಂತೆ ಪ್ರಧಾನಮಂತ್ರಿ ಟ್ವೀಟ್
ನಿಮ್ಮ ಅನುಭವ ಭಾರತ- ಆಫ್ಘಾನಿಸ್ತಾನ ಬಾಂಧವ್ಯದ ಸುಗಂಧದ ಸಾರವನ್ನು ಒಳಗೊಂಡಿದೆ - ಪ್ರಧಾನಮಂತ್ರಿ
प्रविष्टि तिथि:
01 JUL 2021 5:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತದಲ್ಲಿನ ಆಫ್ಘಾನಿಸ್ತಾನದ ರಾಯಭಾರಿ ಶ್ರೀ ಫರೀದ್ ಮಮುಂಡ್ ಝೇ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಬಳಿ ಬಂದ ರೋಗಿ ಭಾರತದಲ್ಲಿನ ಆಫ್ಘಾನಿಸ್ತಾನದ ರಾಯಭಾರಿ ಎಂದು ತಿಳಿದ ಭಾರತೀಯ ವೈದ್ಯರು, ತಾವು ಸೋದರನಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿ ಅವರಿಂದ ವೈದ್ಯಕೀಯ ಶುಲ್ಕ ಪಡೆಯಲು ನಿರಾಕರಿಸಿದ ಕುರಿತಂತೆ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಟ್ವೀಟ್ ಹಿಂದಿಯಲ್ಲಿತ್ತು. ರಾಯಭಾರಿಯವರು ಹಂಚಿಕೊಂಡಿರುವ ಈ ಘಟನೆ, ಭಾರತ- ಆಫ್ಘಾನಿಸ್ತಾನ ಬಾಂಧವ್ಯದ ತಿರುಳನ್ನು ಒಳಗೊಂಡಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.
ಕಾಮೆಂಟ್ ಒಂದರಲ್ಲಿ ನೀಡಿರುವ ಆಹ್ವಾನದಂತೆ ರಾಜಸ್ಥಾನದ ಹರಿಪುರಕ್ಕೆ ಭೇಟಿ ನೀಡುವಂತೆ ತಿಳಿಸಿರುವ ಪ್ರಧಾನಮಂತ್ರಿಯವರು, ತನ್ನದೇ ಆದ ಇತಿಹಾಸವನ್ನು ಹೊಂದಿರುವ ಗುಜರಾತಿನ ಹರಿಪುರಕ್ಕೂ ಭೇಟಿ ನೀಡುವಂತೆ ತಿಳಿಸಿದ್ದಾರೆ.
ಇಂದು ರಾಷ್ಟ್ರೀಯ ವೈದ್ಯರ ದಿನ.
****
(रिलीज़ आईडी: 1732769)
आगंतुक पटल : 230
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam