ಪ್ರಧಾನ ಮಂತ್ರಿಯವರ ಕಛೇರಿ

ನಾಳೆ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ವೈದ್ಯರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ

Posted On: 30 JUN 2021 3:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ, ಜುಲೈ 1, 2021 ರಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ವೈದ್ಯರನ್ನು ದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಕೋವಿಡ್-19 ವಿರುದ್ಧ ಹೋರಾಡಲು ಎಲ್ಲಾ ವೈದ್ಯರು ನಡೆಸಿದ ಪ್ರಯತ್ನಗಳ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ. ಜುಲೈ 1 ಅನ್ನು ʻರಾಷ್ಟ್ರೀಯ ವೈದ್ಯರ ದಿನʼವೆಂದು ಗುರುತಿಸಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ @IMAIndiaOrg ಆಯೋಜಿಸಿರುವ ಕಾರ್ಯಕ್ರಮದಲ್ಲಿ ವೈದ್ಯರ ಸಮುದಾಯವನ್ನು ದ್ದೇಶಿಸಿ ಮಾತನಾಡಲಿದ್ದೇನೆ,ʼʼ ಎಂದು ಹೇಳಿದ್ದಾರೆ.

***



(Release ID: 1731658) Visitor Counter : 159