ಪ್ರಧಾನ ಮಂತ್ರಿಯವರ ಕಛೇರಿ

4 ವರ್ಷ ಪೂರ್ಣಗೊಳಿಸಿದ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ


ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಇದೊಂದು ಮೈಲಿಗಲ್ಲು ಎಂದು ಶ್ಲಾಘಿಸಿದ ಪ್ರಧಾನಿ

प्रविष्टि तिथि: 30 JUN 2021 2:38PM by PIB Bengaluru

ಜಿಎಸ್‌ಟಿ ತೆರಿಗೆ ವ್ಯವಸ್ಥೆ ಅನುಷ್ಠಾನಗೊಂಡು 4 ವರ್ಷಗಳು ಪೂರ್ಣಗೊಂಡಿರುವ ಬಗ್ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಮತ್ತು  ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಇದೊಂದು ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವಪ್ರಧಾನಿ, "ಜಿಎಸ್‌ಟಿ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲಾಗಿದೆ. ಇದು ತೆರಿಗೆಗಳ ಸಂಖ್ಯೆ, ಅನುಸರಣೆ ಹೊರೆ ಮತ್ತು ಸಾಮಾನ್ಯ ಜನರ ಮೇಲಿನ ಒಟ್ಟಾರೆ ತೆರಿಗೆ ಹೊರೆಯನ್ನು ಕಡಿಮೆ ಮಾಡಿದೆ. ಜೊತೆಗೆ ಪಾರದರ್ಶಕತೆ, ಅನುಸರಣೆ ಮತ್ತು ಒಟ್ಟಾರೆ ಸಂಗ್ರಹವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. #4YearsofGST" ಎಂದು ಹೇಳಿದ್ದಾರೆ.

***


(रिलीज़ आईडी: 1731442) आगंतुक पटल : 356
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam