ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕಳೆದ 24 ಗಂಟೆಗಳಲ್ಲಿ ಭಾರತವು 84,332 ಹೊಸ ಪ್ರಕರಣಗಳನ್ನು ವರದಿ ಮಾಡಿದೆ - ಇದು 70 ದಿನಗಳ ನಂತರ ವರದಿಯಾದ ಕಡಿಮೆ ಪ್ರಕರಣ.
ಭಾರತದ ಸಕ್ರಿಯ ಪ್ರಕರಣಗಳ ಹೊರೆಯು 63 ದಿನಗಳ ನಂತರ ಮತ್ತಷ್ಟು 11ಲಕ್ಷಕ್ಕಿಂತ ಕಡಿಮೆಯಾಗಿದೆ
ದೈನಂದಿನ ಚೇತರಿಕೆಯ ಪ್ರಮಾಣವು ಸತತ 30 ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ
ಚೇತರಿಕೆಯ ದರ 95.07% ರಷ್ಟು ಹೆಚ್ಚಾಗಿದೆ
ದೈನಂದಿನ ದೃಢಪಟ್ಟ ಪ್ರಕರಣಗಳ ದರವು 4.39%ರಷ್ಟಿದೆ, ಇದು ನಿರಂತರವಾಗಿ 19 ದಿನಗಳವರೆಗೆ ದೃಢಪಟ್ಟ ಪ್ರಕರಣಗಳ ದರ 10% ಕ್ಕಿಂತ ಕಡಿಮೆಯಿದೆ.
प्रविष्टि तिथि:
12 JUN 2021 11:36AM by PIB Bengaluru
ಭಾರತವು ಕಳೆದ 24 ಗಂಟೆಗಳಲ್ಲಿ 84,332 ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ದೇಶವು ಈಗ ನಿರಂತರ ಐದು ದಿನಗಳವರೆಗೆ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಇದು ಕೇಂದ್ರ ಮತ್ತು ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

ಭಾರತದ ಸಕ್ರಿಯ ಪ್ರಕರಣಗಳ ಹೊರೆಯಲ್ಲಿ ನಿರಂತರವಾಗಿ ಕುಸಿತ ಕಂಡುಬರುತ್ತಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆಯು ಇಂದು 10,80,690ರಷ್ಟಿದೆ. ಸತತ ಹನ್ನೆರೆಡು ದಿನಗಳವರೆಗೆ ಪ್ರಕರಣಗಳ ಹೊರೆಯು 20 ಲಕ್ಷಕ್ಕಿಂತ ಕಡಿಮೆಯಿದೆ.
ಕಳೆದ 24 ಗಂಟೆಗಳಲ್ಲಿ 40,981ರ ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ 3.68%ರಷ್ಟು ಮಾತ್ರ ಇದೆ.

ಕೋವಿಡ್ ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವ ಕಾರಣ, ಭಾರತದ ದೈನಂದಿನ ಚೇತರಿಕೆಗಳ ಪ್ರಮಾಣವು ಸತತ ಮೂವತ್ತನೆಯ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 1,21,311 ಗುಣಮುಖರಾದ ಪ್ರಕರಣಗಳು ವರದಿಯಾಗಿವೆ.
ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 36,979 ಹೆಚ್ಚಿನ ಚೇತರಿಕೆಯ ಪ್ರಕರಣಗಳು ವರದಿಯಾಗಿದೆ.

ಸಾಂಕ್ರಾಮಿಕ ರೋಗದ ಆರಂಭದಿಂದಲೂ 2,79,11,384 ಜನರು ಈಗಾಗಲೇ ಕೋವಿಡ್-19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 1,21,311 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 95.07% ಆಗಿದ್ದು, ಇದು ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ಕಳೆದ 24 ಗಂಟೆಗಳಲ್ಲಿ ಒಟ್ಟು 19,20,477 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇಲ್ಲಿಯವರೆಗೆ ಭಾರತದಲ್ಲಿ 37.62 ಕೋಟಿ (37,62,32,162) ಪರೀಕ್ಷೆಗಳನ್ನು ನಡೆಸಲಾಗಿದೆ.
ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ, ಸಾಪ್ತಾಹಿಕ ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವು ಕಂಡುಬರುತ್ತಿದೆ. ಸಾಪ್ತಾಹಿಕ ಸಕಾರಾತ್ಮಕ ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 4.94%ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 4.39% ರಷ್ಟಿದೆ. ಈಗ ಇದು ಸತತ ಹತ್ತೊಂಬತ್ತು ದಿನಗಳವರೆಗೆ 10% ಕ್ಕಿಂತ ಕಡಿಮೆಯಿದೆ.

ದೇಶಾದ್ಯಂತ ನೀಡಲಾದ ಕೋವಿಡ್ -19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ ಇಂದು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ 25ಕೋಟಿಯ ಹತ್ತಿರ ಮುಟ್ಟಿದೆ. ಕಳೆದ 24 ಗಂಟೆಗಳಲ್ಲಿ 34,33,763 ಲಸಿಕೆ ಡೋಸ್ ಗಳನ್ನು ನೀಡಲಾಯಿತು.
ತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಗ್ಗೆ 7 ಗಂಟೆಯವರೆಗೆ ಒಟ್ಟು 24,96,00,304 ಲಸಿಕೆ ಡೋಸ್ ಗಳನ್ನು 34,64,228 ಸೆಷನ್ಗಳ ಮೂಲಕ ನೀಡಲಾಗಿದೆ.
ಅವುಗಳ ವಿವರ ಹೀಗಿವೆ:
|
ಎಚ್‌ಸಿಡಬ್ಲ್ಯೂ
|
1 ನೇ ಡೋಸ್
|
1,00,35,262
|
|
2 ನೇ ಡೋಸ್
|
69,47,565
|
|
ಎಫ್‌ಎಲ್‌ಡಬ್ಲ್ಯೂ
|
1 ನೇ ಡೋಸ್
|
1,66,36,247
|
|
2 ನೇ ಡೋಸ್
|
88,12,574
|
|
18 - 44 ವರ್ಷದವರು
|
1 ನೇ ಡೋಸ್
|
3,81,21,531
|
|
2 ನೇ ಡೋಸ್
|
5,61,503
|
|
45 ರಿಂದ 60 ವರ್ಷದವರು
|
1 ನೇ ಡೋಸ್
|
7,47,06,979
|
|
2 ನೇ ಡೋಸ್
|
1,18,31,770
|
|
60 ವರ್ಷಕ್ಕಿಂತ ಮೇಲ್ಪಟ್ಟವರು
|
1 ನೇ ಡೋಸ್
|
6,21,90,130
|
|
2 ನೇ ಡೋಸ್
|
1,97,56,743
|
|
ಒಟ್ಟು
|
24,96,00,304
|
(रिलीज़ आईडी: 1726650)
आगंतुक पटल : 267
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam