ಪ್ರಧಾನ ಮಂತ್ರಿಯವರ ಕಛೇರಿ

ರಾಮಕೃಷ್ಣ ಮಠದ ಸ್ವಾಮಿ ಶಿವಮಯಾನಂದ ಜಿ ಮಹಾರಾಜ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 12 JUN 2021 2:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಮಕೃಷ್ಣ ಮಠದ ಸ್ವಾಮಿ ಶಿವಮಯಾನಂದ ಜಿ ಮಹಾರಾಜ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ರಾಮಕೃಷ್ಣ ಮಠದ ಸ್ವಾಮಿ ಶಿವಮಯಾನಂದ ಜಿ ಮಹಾರಾಜ್ ಅವರು ಸಾಮಾಜಿಕ ಸಬಲೀಕರಣಕ್ಕೆ ಒತ್ತು ನೀಡುವ ಹಲವು ಬಗೆಯ ಸಮುದಾಯ ಸೇವಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜಗತ್ತಿಗೆ ಅವರು ನೀಡಿರುವ ಕೊಡುಗೆ ಸದಾ ಸ್ಮರಣೀಯ. ಅವರ ನಿಧನ ದುಃಖ ತಂದಿದೆ, ಓಂ ಶಾಂತಿ” ಎಂದು ಹೇಳಿದ್ದಾರೆ.

 

***


(Release ID: 1726639) Visitor Counter : 182