ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಲಸಿಕಾ ಅಭಿಯಾನದ 3 ನೇ ಹಂತದಲ್ಲಿ 18 - 44 ವಯಸ್ಸಿನವರಿಗೆ 1 ಕೋಟಿ ಡೋಸುಗಳನ್ನು ನೀಡುವ ಮೂಲಕ ಭಾರತವು ಒಂದು ಪ್ರಮುಖ ಘಟ್ಟವನ್ನು ದಾಟಿದೆ
ದೈನಂದಿನ ಚೇತರಿಕೆಯ ಪ್ರಮಾಣವು ಸತತ 11 ದಿನಗಳವರೆಗೆ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಸುತ್ತಿವೆ
ದೈನಂದಿನ ಹೊಸ ಪ್ರಕರಣಗಳು ಸತತ 8 ನೇ ದಿನವೂ 3 ಲಕ್ಷಕ್ಕಿಂತ ಕಡಿಮೆ ಇವೆ
ವಾರದ ಧೃಡಪಟ್ಟ ಪ್ರಕರಣಗಳ ಪ್ರಮಾಣವು 12.66% ಕ್ಕೆ ಇಳಿದಿದೆ
Posted On:
24 MAY 2021 11:52AM by PIB Bengaluru
ಇಂದು ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಭಾರತವು ಮಹತ್ವದ ಘಟ್ಟವನ್ನು ದಾಟಿದೆ. ಲಸಿಕಾ ಅಭೀಯಾನದ 3 ನೇ ಹಂತದಲ್ಲಿ 18 - 44 ವಯಸ್ಸಿನವರಿಗೆ 1 ಕೋಟಿ (1,06,21,235) ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಲಸಿಕೆ ಹಾಕುವುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಜೊತೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೋವಿಡ್ ಸೂಕ್ತ ವರ್ತನೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ. ಕೋವಿಡ್ -19 ಲಸಿಕೆ ನೀಡುವಿಕೆಯ ಉದಾರೀಕೃತ ಮತ್ತು ವೇಗವರ್ಧಿತ ಹಂತ 3ರ ಕಾರ್ಯತಂತ್ರದ ಅನುಷ್ಠಾನವು ಮೇ 1, 2021 ರಿಂದ ಪ್ರಾರಂಭವಾಗಿದೆ
ಕ್ರಮ ಸಂಖ್ಯೆ
|
ರಾಜ್ಯಗಳು
|
ಒಟ್ಟು
|
1
|
ಅಂಡಮಾನ್ & ನಿಕೋಬಾರ್ ದ್ವೀಪಗಳು
|
4,082
|
2
|
ಆಂಧ್ರಪ್ರದೇಶ
|
8,891
|
3
|
ಅರುಣಾಚಲ ಪ್ರದೇಶ
|
17,777
|
4
|
ಅಸ್ಸಾಂ
|
4,33,615
|
5
|
ಬಿಹಾರ
|
12,27,279
|
6
|
ಚಂಡೀಗಢ
|
18,613
|
7
|
ಛತ್ತೀಸ್ಗಗಢ
|
7,01,945
|
8
|
ದಾದರ್ & ನಗರ್ ಹವೇಲಿ
|
18,269
|
9
|
ದಾಮನ್ & ದಿಯು
|
19,802
|
10
|
ದೆಹಲಿ
|
9,15,275
|
11
|
ಗೋವಾ
|
30,983
|
12
|
ಗುಜರಾತ್
|
6,89,234
|
13
|
ಹರಿಯಾಣ
|
7,20,681
|
14
|
ಹಿಮಾಚಲ ಪ್ರದೇಶ
|
40,272
|
15
|
ಜಮ್ಮು & ಕಾಶ್ಮೀರ
|
37,562
|
16
|
ಜಾರ್ಖಂಡ್
|
3,69,847
|
17
|
ಕರ್ನಾಟಕ
|
1,97,693
|
18
|
ಕೇರಳ
|
30,555
|
19
|
ಲಡಾಖ್
|
3,845
|
20
|
ಲಕ್ಷ ದ್ವೀಪ
|
1,770
|
21
|
ಮಧ್ಯ ಪ್ರದೇಶ
|
7,72,873
|
22
|
ಮಹಾರಾಷ್ಟ್ರ
|
7,06,853
|
23
|
ಮಣೀಪುರ್
|
9,110
|
24
|
ಮೇಘಾಲಯ
|
23,142
|
25
|
ಮಿಜೋರಾಂ
|
10,676
|
26
|
ನಾಗಾಲ್ಯಾಂಡ್
|
7,376
|
27
|
ಒಡಿಶಾ
|
3,06,167
|
28
|
ಪುದುಚೆರಿ
|
5,411
|
29
|
ಪಂಜಾಬ್
|
3,70,413
|
30
|
ರಾಜಸ್ಥಾನ್
|
13,17,060
|
31
|
ಸಿಕ್ಕಿಂ
|
6,712
|
32
|
ತಮಿಳು ನಾಡು
|
53,216
|
33
|
ತೆಲಂಗಾಣ
|
654
|
34
|
ತ್ರಿಪುರ
|
53,957
|
35
|
ಉತ್ತರ ಪ್ರದೇಶ
|
10,70,642
|
36
|
ಉತ್ತರಾಖಂಡ
|
2,20,249
|
37
|
ಪಶ್ಚಿಮ ಬಂಗಾಳ
|
1,98,734
|
ಒಟ್ಟು
|
1,06,21,235
|
ದೇಶಾದ್ಯಂತ ನೀಡಲಾದ ಕೋವಿಡ್ -19 ಲಸಿಕೆ ಡೋಸುಗಳ ಒಟ್ಟು ಸಂಖ್ಯೆ ಇಂದು ಲಸಿಕಾ ಅಭಿಯಾನದ 3 ನೇ ಹಂತದಲ್ಲಿ 19.60 ಕೋಟಿಯನ್ನು ಮೀರಿದೆ.
ತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 19,60,51,962 ಲಸಿಕೆ ಡೋಸುಗಳನ್ನು 28,16,725 ಸೆಷನ್ಗಳ ಮೂಲಕ ನೀಡಲಾಗಿದೆ. ಇದು 1ನೇ ಡೋಸ್ ತೆಗೆದುಕೊಂಡ 97,60,444 ಆರೋಗ್ಯ ಕಾರ್ಯಕರ್ತರು (ಎಚ್ಸಿಡಬ್ಲ್ಯೂ) ಮತ್ತು 2ನೇ ಡೋಸ್ ತೆಗೆದುಕೊಂಡ 67,06,890 ಆರೋಗ್ಯ ಕಾರ್ಯಕರ್ತರು, 1,49,91,357 ಮುಂಚೂಣಿಯಲ್ಲಿರುವ ಕಾರ್ಯಕರ್ತರು (ಎಫ್.ಎಲ್.ಡಬ್ಲ್ಯೂ) (1ನೇ ಡೋಸ್), 83,33,774 ಮುಂಚೂಣಿಯಲ್ಲಿರುವ ಕಾರ್ಯಕರ್ತರು (2 ನೇ ಡೋಸ್), 18 – 44 ವರ್ಷದೊಳಗಿನ 1,06,21,235 ಫಲಾನುಭವಿಗಳು(1 ನೇ ಡೋಸ್), 45 ರಿಂದ 60 ವರ್ಷ ವಯಸ್ಸಿನ 44 ವಯೋಮಾನದ 6,09,11,756 (1ನೇ ಡೋಸ್) ಮತ್ತು 98,18,384 (2 ನೇ ಡೋಸ್) ಫಲಾನುಭವಿಗಳು. 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 5,66,45,457 1ನೇ ಡೋಸ್ ಫಲಾನುಭವಿಗಳು ಮತ್ತು 1,82,62,665 2ನೇ ಡೋಸ್ ಫಲಾನುಭವಿಗಳನ್ನು ಒಳಗೊಂಡಿದೆ.
ಎಚ್ ಸಿ ಡಬ್ಲ್ಯೂ
|
1ನೇ ಡೋಸ್
|
97,60,444
|
2ನೇ ಡೋಸ್
|
67,06,890
|
ಎಫ್.ಎಲ್.ಡಬ್ಲ್ಯೂ
|
1ನೇ ಡೋಸ್
|
1,49,91,357
|
2ನೇ ಡೋಸ್
|
83,33,774
|
18 - 44 ವರ್ಷದವರು
|
1ನೇ ಡೋಸ್
|
1,06,21,235
|
45 - 60 ವರ್ಷದವರು
|
1ನೇ ಡೋಸ್
|
6,09,11,756
|
2ನೇ ಡೋಸ್
|
98,18,384
|
60 ವರ್ಷ ಮೇಲ್ಪಟ್ಟವರು
|
1ನೇ ಡೋಸ್
|
5,66,45,457
|
2ನೇ ಡೋಸ್
|
1,82,62,665
|
ಒಟ್ಟು
|
19,60,51,962
|
ದೇಶದಲ್ಲಿ ಇಲ್ಲಿಯವರೆಗೆ ನೀಡಲಾದ ಒಟ್ಟು ಪ್ರಮಾಣಗಳಲ್ಲಿ 66.30% ರಷ್ಟು ಭಾಗವು ಹತ್ತು ರಾಜ್ಯಗಳದ್ದಾಗಿದೆ.
ದೈನಂದಿನ ಚೇತರಿಕೆಯ ಪ್ರಮಾಣವು ಸತತ 11 ದಿನಗಳವರೆಗೆ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 3,02,544 ಚೇತರಿಕೆಯ ವರದಿಯಾಗಿದೆ.
ಭಾರತದ ಒಟ್ಟು ಚೇತರಿಕೆಯು ಇಂದು 2,37,28,011ಕ್ಕೆ ತಲುಪಿದೆ. ರಾಷ್ಟ್ರೀಯ ಚೇತರಿಕೆಯ ಪ್ರಮಾಣವು 88.69%ಕ್ಕೆ ತಲುಪಿದೆ.
ಚೇತರಿಕೆಯ ಪ್ರಮಾಣದ 72.23% ರಷ್ಟು ಭಾಗವು ಹತ್ತು ರಾಜ್ಯಗಳದ್ದಾಗಿದೆ.
ಮತ್ತೊಂದು ಸಕಾರಾತ್ಮಕ ಬೆಳವಣಿಗೆಯಲ್ಲಿ, ಭಾರತದಲ್ಲಿ ದೈನಂದಿನ ಹೊಸ ಪ್ರಕರಣಗಳು ಸತತ 8 ನೇ ದಿನವೂ 3 ಲಕ್ಷಕ್ಕಿಂತ ಕಡಿಮೆ ದಾಖಲಾಗಿವೆ. ದೈನಂದಿನ ಹೊಸ ಪ್ರಕರಣಗಳು ಮತ್ತು ದೈನಂದಿನ ಚೇತರಿಕೆಯ ಪ್ರಕರಣಗಳ ನಡುವಿನ ಅಂತರವು ಇಂದು 80,229 ಕ್ಕೆ ಇಳಿದಿದೆ.
ಭಾರತದ ದೈನಂದಿನ ಹೊಸ ಪ್ರಕರಣಗಳು ಮತ್ತು ಚೇತರಿಸಿಕೊಂಡ ಪ್ರಕರಣಗಳ ಪಥವನ್ನು ಈ ಕೆಳಗೆ ತೋರಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 2,22,315 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ..
ಕಳೆದ 24 ಗಂಟೆಗಳಲ್ಲಿ ಹತ್ತು ರಾಜ್ಯಗಳು 81.08% ಹೊಸ ಪ್ರಕರಣಗಳನ್ನು ವರದಿ ಮಾಡಿವೆ. ತಮಿಳುನಾಡಿನಲ್ಲಿ ದೈನಂದಿನ ಅತಿ ಹೆಚ್ಚು 35,483 ಹೊಸ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 26,672 ಹೊಸ ಪ್ರಕರಣಗಳು ದಾಖಲಾಗಿವೆ.
ಭಾರತದ ಸಕ್ರಿಯ ಪ್ರಕರಣಗಳ ಪಥವನ್ನು ಕೆಳಗೆ ತೋರಿಸಲಾಗಿದೆ. 2021 ರ ಮೇ 10 ರಂದು ಅದರ ಕೊನೆಯ ಗರಿಷ್ಠ ಮಟ್ಟದಿಂದ ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ.
ಭಾರತದ ಒಟ್ಟು ಸಕ್ರಿಯ ಪ್ರಕರಣವು ಇಂದು 27,20,716 ಕ್ಕೆ ಇಳಿದಿದೆ.
ಕಳೆದ 24 ಗಂಟೆಗಳಲ್ಲಿ 84,683 ನಿವ್ವಳ ಕುಸಿತ ಕಂಡಿದೆ. ಇದು ಈಗ ದೇಶದ ಒಟ್ಟು ಧೃಡಪಟ್ಟ ಪ್ರಕರಣಗಳಲ್ಲಿ 10.17% ರಷ್ಟನ್ನುಒಳಗೊಂಡಿದೆ.
ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 8 ರಾಜ್ಯಗಳ ಪಾಲು ಒಟ್ಟು 71.62% ನಷ್ಟಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19,28,127 ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟು 33,05,36,064 ಪರೀಕ್ಷೆಗಳನ್ನು ಈವರೆಗೆ ಮಾಡಲಾಗಿದೆ. ಒಟ್ಟು ಧೃಡಪಟ್ಟ ಪ್ರಕರಣಗಳ ದರವು ಇಂದು 8.09% ರಷ್ಟಿದೆ.
ವಾರದ ಧೃಡಪಟ್ಟ ಪ್ರಕರಣಗಳ ದರವು 12.66% ಕ್ಕೆ ಇಳಿದಿದೆ.
ಪ್ರಸ್ತುತ ರಾಷ್ಟ್ರದಲ್ಲಿ ಮರಣ ಪ್ರಮಾಣವು 1.14% ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ 4,454 ಸಾವುಗಳು ವರದಿಯಾಗಿವೆ.
ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಸಾವುಗಳಲ್ಲಿ 79.52% ರಷ್ಟು ಹತ್ತು ರಾಜ್ಯಗಳ ಪಾಲಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವು ಸಂಭವಿಸಿದೆ (1,320). ದಿನಕ್ಕೆ 624 ಸಾವುಗಳೊಂದಿಗೆ ಕರ್ನಾಟಕವು ಎರಡನೆಯ ಸ್ಥಾನದಲ್ಲಿದೆ.
18 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸಾವಿನ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ (1.14%) ಹೊಂದಿವೆ.
18 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿವೆ.
***
(Release ID: 1721292)
Visitor Counter : 235
Read this release in:
Malayalam
,
Tamil
,
Telugu
,
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia