ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸತತ 6ನೇ ದಿನ ಹೊಸ ಸೋಂಕು ಪ್ರಕರಣಗಳಿಗಿಂತ ಪ್ರತಿ ದಿನ ಗುಣಮುಖರಾದವರ ಸಂಖ್ಯೆ ಹೆಚ್ಚಳ


ಸತತ ಮೂರನೇ ದಿನ ದೇಶದಲ್ಲಿ 3 ಲಕ್ಷಕ್ಕೂ ಕಡಿಮೆ ಹೊಸ ಸೋಂಕು ಪ್ರಕರಣ

ಕಳೆದ 24 ಗಂಟೆಗಳಲ್ಲಿ ಅತ್ಯಧಿಕ 20 ಲಕ್ಷ ಸೋಂಕು ಪತ್ತೆ ಪರೀಕ್ಷೆ ನಡೆಸಿದ್ದು, ಇದು ಜಾಗತಿಕ ದಾಖಲೆ

ಪ್ರತಿ ದಿನದ ಪಾಸಿಟಿವಿಟಿ ದರ ಶೇ.13.31ಕ್ಕೆ ಇಳಿಕೆ

ಈವರೆಗೆ 18-44ರ ವಯೋಮಾನದ 64 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಲಸಿಕೆ

Posted On: 19 MAY 2021 12:28PM by PIB Bengaluru

ಸತತ 6ನೇ ದಿನ ಭಾರತದಲ್ಲಿ ಪ್ರತಿ ದಿನದ ಹೊಸ ಸೋಂಕು ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 3,89,851 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ಇದರಿಂದಾಗಿ ಭಾರತದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ ಇಂದು 2,19,86,363 ತಲುಪಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಮತ್ತಷ್ಟು ಹೆಚ್ಚಾಗಿ ಶೇ. 86.23 ತಲುಪಿದೆ.

ಹತ್ತು ರಾಜ್ಯಗಳಲ್ಲಿ ಶೇ. 74.94ರಷ್ಟು ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ.

ಸಕಾರಾತ್ಮಕ ಪ್ರವೃತ್ತಿ ಮುಂದುವರಿದಿದ್ದು, ಭಾರತದಲ್ಲಿ ಸತತ 3ನೇ ದಿನ 3 ಲಕ್ಷಕ್ಕಿಂತಲೂ ಕಡಿಮೆ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 2,67,334 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಹತ್ತು ರಾಜ್ಯಗಳಲ್ಲಿ ಶೇ. 74.46ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ ಪ್ರತಿ ದಿನದ ಹೊಸ ಪ್ರಕರಣಗಳಲ್ಲಿ ಅತ್ಯಧಿಕ 33,059 ಪ್ರಕರಣಗಳು ವರದಿಯಾಗಿದ್ದರೆ, ಆನಂತರ ಕೇರಳದಲ್ಲಿ 31,337 ಹೊಸ ಪ್ರಕರಣ ವರದಿಯಾಗಿದೆ.

ಮತ್ತೊಂದೆಡೆ ಭಾರತದಲ್ಲಿ ಇಂದು ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 32,26,719ಕ್ಕೆ ಇಳಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 1,27,046 ರಷ್ಟು ಪ್ರಕರಣಗಳು ಇಳಿಕೆಯಾಗಿವೆ.

ಇದು ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಶೇ. 12.66ರಷ್ಟಾಗಲಿದೆ.

ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಎಂಟು ರಾಜ್ಯಗಳಲ್ಲಿ ಒಟ್ಟಾರೆ ಶೇ. 69.02ರಷ್ಟಿವೆ.

ಕೆಳಗಿನ ಗ್ರಾಫ್ ನಲ್ಲಿ ಕಳೆದ ಒಂದು ತಿಂಗಳಿನಿಂದ ಸಕ್ರಿಯ ಪ್ರಕರಣಗಳು ಸಾಗಿದ ಪಥದ ವಿವರ ನೋಡಬಹುದು.

ಕಳೆದ 24 ಗಂಟೆಗಳಲ್ಲಿ 20 ಲಕ್ಷಕ್ಕೂ ಅಧಿಕ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ(ಭಾರತದಲ್ಲಿ ಒಂದೇ ದಿನ ನಡೆಸಿದ ಅತ್ಯಧಿಕ ಸಂಖ್ಯೆಯ ಪರೀಕ್ಷೆಗಳಾಗಿವೆ) ಮಧ್ಯೆ, ಪ್ರತಿ ದಿನದ ಪಾಸಿಟಿವಿಟಿ ದರ ಶೇ. 13.31ಕ್ಕೆ ಇಳಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 20.08 ಪರೀಕ್ಷೆಗಳನ್ನು ನಡೆಸಿರುವುದು ಜಾಗತಿಕ ದಾಖಲೆಯಾಗಿದೆ.

ದೇಶಾದ್ಯಂತ ಈವರೆಗೆ ಸುಮಾರು 32 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

ಕೆಳಗಿನ ಗ್ರಾಫ್ ನಲ್ಲಿ ಭಾರತದಲ್ಲಿ ಸೋಂಕು ಪತ್ತೆ ಪರೀಕ್ಷೆಗಳ ಏರಿಕೆ ಪಥದ ನೋಟವನ್ನು ಕಾಣಬಹುದು. ಒಟ್ಟಾರೆ ಪಾಸಿಟಿವಿಟಿ ದರ ಶೇ.7.96ರಷ್ಟಿದೆ.

ಮೂರನೇ ಹಂತದ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಡಿ ಇಂದು ಒಟ್ಟಾರೆ ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದವರ ಸಂಖ್ಯೆ 18.58 ಕೋಟಿ ತಲುಪಿದೆ.

ಇಂದು ಬೆಳಗ್ಗೆ 7 ಗಂಟೆಯವರೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯ ಪ್ರಕಾರ 27,10,934 ಸೆಷನ್ ಗಳ ಮೂಲಕ ಒಟ್ಟು 18,58,09,302 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಪೈಕಿ 96,73,684 ಎಚ್ ಸಿ ಡಬ್ಲ್ಯೂಗಳಿಗೆ ಮೊದಲ ಡೋಸ್ ಮತ್ತು 66,59,125 ಎಚ್ ಸಿ ಡಬ್ಲ್ಯೂಗಳಿಗೆ ಎರಡನೇ ಡೋಸ್ ನೀಡಲಾಗಿದೆ. 1,45,69,669 ಎಫ್ಎಲ್ ಡಬ್ಲ್ಯೂಗಳಿಗೆ(ಮೊದಲನೇ ಡೋಸ್) 82,36,515ಎಫ್ಎಲ್ ಡಬ್ಲ್ಯೂಗಳಿಗೆ (2ನೇ ಡೋಸ್), 18 ರಿಂದ 44 ವಯೋಮಾನದ 64,77,443 ಫಲಾನುಭವಿಗಳಿಗೆ(ಮೊದಲನೇ ಡೋಸ್), 5,80,46,339(1ನೇ ಡೋಸ್) ಮತ್ತು 45 ರಿಂದ 60 ವರ್ಷ ವಯೋಮಾನದ 93,51,036(2ನೇ ಡೋಸ್), 60 ವರ್ಷ ಮೇಲ್ಪಟ್ಟ ಮೊದಲನೇ 5,48,16,7671 ಮೊದಲನೇ ಡೋಸ್ ಮತ್ತು 1,79,78,724 2ನೇ ಡೋಸ್ ನಿಡಲಾಗಿದೆ.

ಎಚ್ ಸಿ ಡಬ್ಲ್ಯೂಗಳು

1ನೇ ಡೋಸ್

96,73,684

2ನೇ ಡೋಸ್

66,59,125

ಎಫ್ಎಲ್ ಡಬ್ಲ್ಯೂಗಳು

1ನೇ ಡೋಸ್

1,45,69,669

2ನೇ ಡೋಸ್

82,36,515

18 ರಿಂದ 44 ವರ್ಷ

1ನೇ ಡೋಸ್

64,77,443

45 ರಿಂದ 60 ವರ್ಷ

1ನೇ ಡೋಸ್

5,80,46,339

2ನೇ ಡೋಸ್

93,51,036

60 ವರ್ಷ ಮೇಲ್ಪಟ್ಟವರು

1ನೇ ಡೋಸ್

5,48,16,767

2ನೇ ಡೋಸ್

1,79,78,724

 

ಒಟ್ಟು

18,58,09,302

***



(Release ID: 1719908) Visitor Counter : 202