ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ದೇಶದಲ್ಲಿ ಮೊದಲ ಬಾರಿಗೆ 4 ಲಕ್ಷಕ್ಕೂ ಹೆಚ್ಚು ದೈನಂದಿನ ಚೇತರಿಕೆಗಳು

ಸತತ ಎರಡು ದಿನಗಳಿಂದ 3 ಲಕ್ಷಕ್ಕಿಂತ ಕಡಿಮೆ ದೈನಂದಿನ ಪ್ರಕರಣಗಳು  ದಾಖಲು

ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಹೊರೆಯಲ್ಲಿ 1,63,232 ಪ್ರಕರಣಗಳಷ್ಟು ಕುಸಿತ

18.44  ಕೋಟಿ ಮೀರಿದ ಭಾರತದ ಒಟ್ಟಾರೆ ಲಸಿಕೆ ನೀಡಿಕೆ ಪ್ರಮಾಣ

ಇದುವರೆಗೂ 18-44 ವಯೋಮಾನದ 66 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ನೀಡಲಾಗದೆ

Posted On: 18 MAY 2021 1:27PM by PIB Bengaluru

ಎಲ್ಲ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ಸಮರ್ಪಣಾ ಭಾವದ ಕರ್ತವ್ಯ ನಿರ್ವಹಣೆ ಹಾಗೂ ದಣಿವರಿಯದ  ಪ್ರಯತ್ನದಿಂದಾಗಿ ಇದೇ ಮೊದಲ ಬಾರಿಗೆ ಭಾರತವು ಒಂದೇ ದಿನದಲ್ಲಿ 4 ಲಕ್ಷಕ್ಕೂ ಅಧಿಕ ಕೋವಿಡ್ ರೋಗಿಗಳ ದೈನಂದಿನ ಚೇತರಿಕೆಯನ್ನು ದಾಖಲಿಸುವ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಿದೆ.

ಕಳೆದ 24 ಗಂಟೆಗಳಲ್ಲಿ 4,22,436 ಚೇತರಿಕೆಗಳು ದಾಖಲಾಗಿವೆ.

ಕಳೆದ 14 ದಿನಗಳಲ್ಲಿ 3,55,944ಕ್ಕೂ ಅಧಿಕ ಸರಾಸರಿ ದೈನಂದಿನ ಚೇತರಿಕೆ ಪ್ರಕರಣಗಳು ದಾಖಲಾಗಿವೆ.  ಕೆಳಗಿನ ನಕ್ಷೆಯು ಕಳೆದ 14 ದಿನಗಳ ದೈನಂದಿನ ಚೇತರಿಕೆಯನ್ನು ವಿವರಿಸುತ್ತದೆ:

ಕಳೆದ 24 ಗಂಟೆಗಳಲ್ಲಿ 2,63,533 ಹೊಸ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ದಾಖಲಾಗುತ್ತಿರುವ ದೈನಂದಿನ ಹೊಸ ಕೋವಿಡ್ ಪ್ರಕರಣಗಳು ಸಂಖ್ಯೆ ಈಗ ಸತತ ಎರಡನೇ ದಿನ 3 ಲಕ್ಷಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಹೊರೆಯಲ್ಲಿ 1,63,232 ಪ್ರಕರಣಗಳ ನಿವ್ವಳ  ಕುಸಿತ  ದಾಖಲಾಗಿದೆ.

2021ರ ಮಾರ್ಚ್ 13 ರಿಂದ ಭಾರತದ ದೈನಂದಿನ ಹೊಸ ಪ್ರಕರಣಗಳ ಚಲನೆಯ ಪಥ ಮತ್ತು ಚೇತರಿಕೆ ಪ್ರಕರಣಗಳನ್ನು ಕೆಳಗೆ ಚಿತ್ರಿಸಲಾಗಿದೆ.

ಭಾರತದ ಒಟ್ಟಾರೆ ಚೇತರಿಕೆ ಪ್ರಕರಣಗಳ ಸಂಖ್ಯೆ ಇಂದು 2,15,96,512 ಕ್ಕೆ ತಲುಪಿದೆ.  ರಾಷ್ಟ್ರೀಯ ಚೇತರಿಕೆ  ದರವು  ಮತ್ತಷ್ಟು ಸುಧಾರಿಸಿ ಶೇ. 85. 60ಕ್ಕೆ ತಲುಪಿದೆ. 

ಹೊಸ ಚೇತರಿಕೆ ಪ್ರಕರಣಗಳಲ್ಲಿ ಹತ್ತು ರಾಜ್ಯಗಳು 75.77%  ರಷ್ಟು ಪಾಲು ಹೊಂದಿವೆ.

ಮತ್ತೊಂದೆಡೆ, ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಹೊರೆ ಇಂದು 33,53,765ಕ್ಕೆ ಇಳಿಕೆಯಾಗಿದೆ.  ಇದು ಪ್ರಸ್ತುತ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳ ಶೇ. 13.29ರಷ್ಟಿದೆ.  

ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 8 ರಾಜ್ಯಗಳ ಒಟ್ಟು  ಪಾಲು ಶೇ. 69.01% ರಷ್ಟಿದೆ.

ರಾಷ್ಟ್ರವ್ಯಾಪಿ 3ನೇ ಹಂತದ ಲಸಿಕೆ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ನೀಡಲಾದ ಕೋವಿಡ್‌-19 ಲಸಿಕೆ ಡೋಸ್‌ಗಳ  ಸಂಖ್ಯೆ ಇಂದು ಸುಮಾರು 18.44  ಕೋಟಿಗೆ ತಲುಪಿದೆ.

ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ 26,87,638 ಸೆಷನ್‌ಗಳ ಮೂಲಕ ಒಟ್ಟು 18,44,53,149 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇವುಗಳಲ್ಲಿ 1ನೇ ಡೋಸ್ ತೆಗೆದುಕೊಂಡ 96,59,441  ಆರೋಗ್ಯ ಕಾರ್ಯಕರ್ತರು ಮತ್ತು 2ನೇ ಡೋಸ್‌ ತೆಗೆದುಕೊಂಡ 66,52,389  ಆರೋಗ್ಯ ಕಾರ್ಯರ್ತರು; 1ನೇ ಡೋಸ್‌ ಪಡೆದ 1,45,00,303 ಮುಂಚೂಣಿ ಕಾರ್ಯಕರ್ತರು; 2ನೇ ಡೋಸ್‌ ಪಡೆದ 82,17,075 ಮುಂಚೂಣಿ ಕಾರ್ಯಕರ್ತರು; ಮೊದಲ ಡೋಸ್‌ ಪಡೆದ 18-44 ವರ್ಷದೊಳಗಿನ 59,39,290 ಫಲಾನುಭವಿಗಳು,  1ನೇ ಡೋಸ್‌ ಪಡೆದ  5,76,64,616  45-60 ವಯೋಮಾನದ ಫಲಾನುಭವಿಗಳು ಹಾಗೂ ಎರಡನೇ ಡೋಸ್‌ ಪಡೆದ  92,43,104  ಮಂದಿ 45 ರಿಂದ 60 ವರ್ಷ ವಯಸ್ಸಿನವರು;  ಮೊದಲ ಡೋಸ್‌ ಪಡೆದ 5,46,64,577  ಮಂದಿ 60 ವರ್ಷ ಮೀರಿದ ಫಲಾನುಭವಿಗಳು ಹಾಗೂ 2ನೇ ಡೋಸ್‌ ಪಡೆದ 1,79,12,354  ಮಂದಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಫಲಾನುಭವಿಗಳು ಸೇರಿದ್ದಾರೆ.

ಆರೋಗ್ಯ ಕಾರ್ಯಕರ್ತರು

1ನೇ  ಡೋಸ್

96,59,441

2ನೇ  ಡೋಸ್

66,52,389

ಮುಂಚೂಣಿ ಕಾರ್ಯಕರ್ತರು

1ನೇ  ಡೋಸ್

1,45,00,303

2ನೇ  ಡೋಸ್

82,17,075

18-44 ವರ್ಷ ವಯೋಮಾನದವರು

1ನೇ  ಡೋಸ್

59,39,290

45 ರಿಂದ 60 ವರ್ಷ ವಯೋಮಾನದವರು

1ನೇ  ಡೋಸ್

5,76,64,616

2ನೇ  ಡೋಸ್

92,43,104

60 ವರ್ಷ ಮೀರಿದವರು

1ನೇ  ಡೋಸ್

5,46,64,577

2ನೇ  ಡೋಸ್

1,79,12,354

 

ಒಟ್ಟು

18,44,53,149

ದೇಶದಲ್ಲಿ ಇದುವರೆಗೂ ನೀಡಲಾದ ಒಟ್ಟಾರೆ ಡೋಸ್‌ಗಳಲ್ಲಿ 66.70%ರಷ್ಟನ್ನು ಹತ್ತು ರಾಜ್ಯಗಳಲ್ಲಿ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 18-44 ವರ್ಷ ವಯೋಮಾನದ 6,69,884 ಫಲಾನುಭವಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಮತ್ತು 3ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆಯ ಸಿಕ್ಕಾಗಿನಿಂದಲೂ ಇದುವರೆಗೂ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಯೋಮಾನದ ಒಟ್ಟು 59,39,290 ಫಲಾನುಭವಿಗಳು ಲಸಿಕೆಯ ಡೋಸ್ಗಳನ್ನು ಪಡೆದುಕೊಂಡಿದ್ದಾರೆ.

ಲಸಿಕೆ ಅಭಿಯಾನದ 122ನೇ ದಿನದಂದು (ಮೇ 17, 2021) 15,10,418  ಲಸಿಕೆ  ಡೋಸ್‌ಗಳನ್ನು ನೀಡಲಾಗಿದೆ.  14,447 ಸೆಷನ್‌ಗಳಲ್ಲಿ,  12,67,201 ಫಲಾನುಭವಿಗಳಿಗೆ 1ನೇ ಡೋಸ್ ಲಸಿಕೆ ನೀಡಲಾಯಿತು ಮತ್ತು 2,43,217 ಫಲಾನುಭವಿಗಳು ತಮ್ಮ 2ನೇ ಡೋಸ್  ಲಸಿಕೆಯನ್ನು  ಪಡೆದುಕೊಂಡರು.

ಕಳೆದ 24 ಗಂಟೆಗಳಲ್ಲಿ ಹತ್ತು ರಾಜ್ಯಗಳಲ್ಲಿ 74.54% ಹೊಸ ಪ್ರಕರಣಗಳು ವರದಿಯಾಗಿವೆ. ಪೈಕಿ ಕರ್ನಾಟಕದಲ್ಲಿ ಅತ್ಯಧಿಕ ಅಂದರೆ, 38,603 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ. 33,075 ಹೊಸ ಪ್ರಕರಣಗಳೊಂದಿಗೆ ತಮಿಳುನಾಡು ನಂತರದ ಸ್ಥಾನದಲ್ಲಿದೆ.

ರಾಷ್ಟ್ರೀಯ ಮರಣ ದರವು ಪ್ರಸ್ತುತ 1.10% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 4,329 ಸಾವುಗಳು  ವರದಿಯಾಗಿವೆ.

ಹೊಸ ಸಾವುಗಳಲ್ಲಿ ಹತ್ತು ರಾಜ್ಯಗಳ ಪಾಲು 75.98%ರಷ್ಟಿದೆ. ಮಹಾರಾಷ್ಟ್ರದಲ್ಲಿ  ಗರಿಷ್ಠ ಸಾವುನೋವುಗಳು (1000) ಸಂಭವಿಸಿವೆ. ಕರ್ನಾಟಕವು  476  ದೈನಂದಿನ  ಸಾವುಗಳೊಂದಿಗೆ  ನಂತರದ ಸ್ಥಾನದಲ್ಲಿದೆ.  

ಇದಲ್ಲದೆ, ಕೋವಿಡ್‌-19 ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕಾಗಿ ವಿದೇಶಿ ನೆರವಿನ ರೂಪದಲ್ಲಿ ಬಂದ ಪರಿಹಾರ ಸಾಮಗ್ರಿಗಳನ್ನು ತ್ವರಿತವಾಗಿ ಹಂಚಿಕೆ ಮಾಡಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಒಟ್ಟಾರೆಯಾಗಿ, 11,321 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು; 15,801 ಆಕ್ಸಿಜನ್ ಸಿಲಿಂಡರ್‌ಗಳು; 19 ಆಕ್ಸಿಜನ್ ಉತ್ಪಾದನಾ ಘಟಕಗಳು; 7,470 ವೆಂಟಿಲೇಟರ್‌ಗಳು/ಬಿಐ ಪಿಎಪಿ; 5.5 ಲಕ್ಷ ರೆಮ್‌ಡೆಸಿವಿರ್‌ ಔಷಧದ ಸೀಸೆಗಳನ್ನು ರಸ್ತೆ ಮಾರ್ಗವಾಗಿ ಮತ್ತು ವಿಮಾನದ ಮೂಲಕ ತಲುಪಿಸಲಾಗಿದೆ/ ರವಾನಿಸಲಾಗಿದೆ.

***(Release ID: 1719613) Visitor Counter : 132