ಸಂಪುಟ

ಭಾರತ ಸ್ಪರ್ಧಾ ಆಯೋಗ (ಸಿಸಿಐ) ಮತ್ತು ಬ್ರೆಜಿಲ್ ಆರ್ಥಿಕ ರಕ್ಷಣೆಯ ಆಡಳಿತ ಮಂಡಳಿ (ಸಿಎಡಿಇ) ನಡುವೆ ತಿಳಿವಳಿಕೆ ಒಪ್ಪಂದ

प्रविष्टि तिथि: 20 APR 2021 3:46PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದ ಸ್ಪರ್ಧಾ ಆಯೋಗ (ಸಿಸಿಐ) ಮತ್ತು ಬ್ರೆಜಿಲ್ ಆರ್ಥಿಕ ರಕ್ಷಣಾ ಆಡಳಿತ ಮಂಡಳಿ (ಸಿಎಡಿಇ) ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಅನುಮೋದನೆ ನೀಡಿದೆ.

ಸ್ಪರ್ಧಾ ಕಾಯ್ದೆ, 2002 ಸೆಕ್ಷನ್ 18 ಪ್ರಕಾರ ಸಿಸಿಐ ತನ್ನ ಕರ್ತವ್ಯಗಳನ್ನು ನಿರ್ವಹಿಸುವ ಅಥವಾ ಕಾಯ್ದೆಯಡಿ ತನ್ನ ಕಾರ್ಯಗಳನ್ನು ನಿರ್ವಹಿಸುವ ಉದ್ದೇಶದಿಂದ ಯಾವುದೇ ವಿದೇಶಿ ಸಂಸ್ಥೆಯೊಂದಿಗೆ ಯಾವುದೇ ಜ್ಞಾಪನಾ ಪತ್ರ ಅಥವಾ ಅಂತಹ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಿದೆ.

ಅದರಂತೆ, ಸಿಸಿಐ ಕೆಳಗಿನ ಆರು ಒಪ್ಪಂದಗಳನ್ನು ಮಾಡಿಕೊಂಡಿದೆ:

I.          ಅಮೆರಿಕಾದ ಫೆಡರಲ್ ಟ್ರೇಡ್ ಕಮಿಷನ್ (ಎಫ್ಟಿಸಿ) ಮತ್ತು ನ್ಯಾಯಾಂಗ ಇಲಾಖೆ (ಡಿಒಜೆ),

II.        ಯುರೋಪಿಯನ್ ಯೂನಿಯನ್ ಡೈರೆಕ್ಟರ್ ಜನರಲ್ ಕಾಂಪಿಟಿಷನ್ 

III.       ರಷ್ಯಾದ ಫೆಡರಲ್ ಆಂಟಿ ಮನೊಪೊಲಿ ಸೇವೆ

IV.       ಆಸ್ಟ್ರೇಲಿಯಾದ ಸ್ಪರ್ಧಾ ಮತ್ತು ಗ್ರಾಹಕ ಆಯೋಗ

V.        ಕೆನಡಾದ ಸ್ಪರ್ಧಾ ಬ್ಯೂರೋ ಮತ್ತು

VI.       ಬ್ರಿಕ್ಸ್ ಸ್ಪರ್ಧಾ ಆಡಳಿತಗಳು

ಪ್ರಸ್ತುತ ಪ್ರಸ್ತಾಪವು ಸಿಸಿಐ ಮತ್ತು ಸಿಎಡಿಇ ನಡುವೆ ಇದೇ ರೀತಿಯ ಒಪ್ಪಂದಕ್ಕೆ ಸಹಿ ಮಾಡಲು ಸಂಬಂಧಿಸಿದೆ.

***


(रिलीज़ आईडी: 1712941) आगंतुक पटल : 356
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu