ಪ್ರಧಾನ ಮಂತ್ರಿಯವರ ಕಛೇರಿ
ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವದೇಶಾನಂದ ಗಿರಿ ಜಿ ಅವರೊಂದಿಗೆ ಪ್ರಧಾನಮಂತ್ರಿ ಸಮಾಲೋಚನೆ
ಎರಡು ಶಾಹಿ ಸ್ನಾನದ ಬಳಿಕ ಸಾಂಕೇತಿಕವಾಗಿ ಕುಂಭಮೇಳ ಆಚರಿಸಲು ಮನವಿ
ಸಂತರ ಆರೋಗ್ಯದ ಕುರಿತು ವಿಚಾರಣೆ
Posted On:
17 APR 2021 9:25AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವದೇಶಾನಂದ ಗಿರಿ ಜಿ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿದರು ಮತ್ತು ಎಲ್ಲಾ ಸಂತರ ಆರೋಗ್ಯದ ಕುರಿತು ವಿಚಾರಿಸಿದರು. ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ ಸಂತ ಸಮಾಜಕ್ಕೆ ಪ್ರಧಾನಮಂತ್ರಿ ಧನ್ಯವಾದಗಳನ್ನು ಹೇಳಿದರು.
ಈಗಾಗಲೇ ಎರಡು ಶಾಹಿ ಸ್ನಾನಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕುಂಭ ಮೇಳದ ಆಚರಣೆಯನ್ನು ಸಾಂಕೇತಿಕವಾಗಿ ಮುಂದುವರಿಸಲು ಪ್ರಧಾನಮಂತ್ರಿ ಮನವಿ ಮಾಡಿದರು. ಇದರಿಂದಾಗಿ ಸಾಂಕ್ರಾಮಿಕದ ವಿರುದ್ಧದ ಹೋರಾಟ ಮತ್ತಷ್ಟು ಬಲವರ್ಧನೆಯಾಗಲಿದೆ.
ಪ್ರಧಾನಮಂತ್ರಿಗಳ ಮನವಿಯನ್ನು ಗೌರವಿಸಿ ಉತ್ತರ ನೀಡಿರುವ ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವದೇಶಾನಂದ ಗಿರಿ ಜಿ ಅವರು ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಸ್ನಾನಕ್ಕೆ ಆಗಮಿಸದಂತೆ ಮನವಿ ಮಾಡಿದ್ದಾರೆ ಹಾಗೂ ಸೂಕ್ತ ಕೋವಿಡ್ ನಡವಳಿಕೆ ಹಾಗೂ ನಿಯಮಗಳನ್ನು ಪಾಲನೆ ಮಾಡುವಂತೆ ಕೋರಿದ್ದಾರೆ.
***
(Release ID: 1712473)
Visitor Counter : 256
Read this release in:
Malayalam
,
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu