ಪ್ರಧಾನ ಮಂತ್ರಿಯವರ ಕಛೇರಿ

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗುತ್ತಿರುವ ನಟ ರಜನಿಕಾಂತ್ ಗೆ ಪ್ರಧಾನಮಂತ್ರಿ ಅಭಿನಂದನೆ

Posted On: 01 APR 2021 11:17AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಲಿರುವ ನಟ ರಜನಿಕಾಂತ್ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿಎಲ್ಲ ಪೀಳಿಗೆಯ ಜನರಿಂದ ಜನಪ್ರಿಯತೆ ಗಳಿಸಿರುವ, ಕೆಲವೇ ಕೆಲವು ವ್ಯಕ್ತಿಗಳು ಹೊಂದಬಹುದಾದ ಹೆಗ್ಗಳಿಕೆ ಸಂಪಾದಿಸಿರುವ, ವೈವಿಧ್ಯಮಯ ಪಾತ್ರ ಮತ್ತು ಪ್ರೀತಿಯ ವ್ಯಕ್ತಿತ್ವ.. ಅದು ನೀವೇ ಶ್ರೀ ರಜನಿಕಾಂತ್ ಜಿ

ಥಲೈವ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗುತ್ತಿರುವುದು ಅಪಾರ ಸಂತೋಷದ ಸಂಗತಿ. ಅವರಿಗೆ ಅಭಿನಂದನೆಗಳು’’ ಎಂದು ಹೇಳಿದ್ದಾರೆ.

***



(Release ID: 1708914) Visitor Counter : 198