ಪ್ರಧಾನ ಮಂತ್ರಿಯವರ ಕಛೇರಿ
ಸಾಬರಮತಿ ಆಶ್ರಮದಿಂದ ಅಮೃತ ಮಹೋತ್ಸವ ಕಾರ್ಯಕ್ರಮ ಆರಂಭ: ಪ್ರಧಾನ ಮಂತ್ರಿ
ಬಾಪು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ‘ವೋಕಲ್ ಫಾರ್ ಲೋಕಲ್’ ಮೂಲಕ ಅದ್ಭುತ ಗೌರವ: ಪ್ರಧಾನಮಂತ್ರಿ
Posted On:
12 MAR 2021 10:00AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನ ಸಾಬರಮತಿ ಆಶ್ರಮದಿಂದ ಆರಂಭವಾಗುವ ಪಾದಯಾತ್ರೆ (ಸ್ವಾತಂತ್ರ್ಯ ನಡಿಗೆ) ಗೆ ಹಸಿರು ನಿಶಾನೆ ತೋರಲಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಇಂದು ದಂಡಿ ಸತ್ಯಾಗ್ರಹ ಆರಂಭವಾದ ಸಾಬರಮತಿ ಆಶ್ರಮದಿಂದ ಅಮೃತ ಮಹೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಆ ನಡಿಗೆ ಭಾರತದ ಜನರಲ್ಲಿ ಹೆಮ್ಮೆಯ ಮನೋಭಾವ ಹೆಚ್ಚಿಸುವಲ್ಲಿ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ನಾವು “ವೋಕಲ್ ಫಾರ್ ಲೋಕಲ್” ಅಂದರೆ ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗುವುದು ಬಾಪು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲಿಸುವ ಅದ್ಭುತ ಗೌರವವಾಗಿದೆ.
ನೀವು ಯಾವುದೇ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ “ವೋಕಲ್ ಫಾರ್ ಲೋಕಲ್’ ಟ್ಯಾಗ್ ಲೈನ್ ಆಯ್ಕೆ ಮಾಡಿಕೊಂಡು ಅದರ ಚಿತ್ರವನ್ನು ಪೋಸ್ಟ್ ಮಾಡಿ. ಸಾಬರಮತಿ ಆಶ್ರಮದ ಮಗನ್ ನಿವಾಸದ ಬಳಿ ಚರಕವನ್ನು ಪ್ರತಿಷ್ಠಾಪಿಸಲಾಗಿದೆ. ಅದು ಆತ್ಮನಿರ್ಭರಕ್ಕೆ ಸಂಬಂಧಿಸಿದ ಟ್ವೀಟ್ ನೊಂದಿಗೆ ಒಂದು ಪೂರ್ಣ ಸುತ್ತು ತಿರುಗುತ್ತದೆ. ಇದು ಕೂಡ ಜನಾಂದೋಲನಕ್ಕೆ ವೇಗವರ್ಧಕವಾಗಲಿದೆ.’’ ಎಂದು ಹೇಳಿದ್ದಾರೆ.
***
(Release ID: 1704331)
Visitor Counter : 227
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam