ಪ್ರಧಾನ ಮಂತ್ರಿಯವರ ಕಛೇರಿ

ಬೀರ್ ಚಿಲಾರಾಯ್ ಜಯಂತಿ: ಪ್ರಧಾನ ಮಂತ್ರಿ ಸ್ಮರಣೆ

प्रविष्टि तिथि: 27 FEB 2021 3:59PM by PIB Bengaluru

ಬೀರ್ ಚಿಲಾರಾಯ್ ಅವರ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಪ್ರತಿಮ ದೇಶಭಕ್ತನನ್ನು ಸ್ಮರಿಸಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ಬೀರ್ ಚಿಲಾರಾಯ್ ಅವರು ಅಪ್ರತಿಮ ಶೌರ್ಯ ಮತ್ತು ದೇಶಭಕ್ತಿಗೆ ಸಮಾನಾರ್ಥಕವಾಗಿದ್ದರು. ಅವರು ಮಹೋನ್ನತ ಯೋಧರಾಗಿದ್ದರು. ಜನರಿಗಾಗಿ ಜೀವನಪೂರ್ತಿ ಹೋರಾಟ ನಡೆಸಿದ್ದ ಅವರು, ತಾವು ನಂಬಿದ್ದ ತತ್ವಗಳನ್ನು ಕೊನೆಯ ತನಕ ಪಾಲಿಸಿಕೊಂಡು ಬಂದಿದ್ದರು. ಅವರ ಕೆಚ್ಚೆದೆಯ ಧೈರ್ಯವು ಮುಂಬರುವ ಪೀಳಿಗೆಗೆ ಸದಾ ಪ್ರೇರಣೆಯಾಗಿ ಮುಂದುವರಿಯಲಿದೆ. ಬೀರ್ ಚಿಲಾರಾಯ್ ಜಯಂತಿಯಂದು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ.ಎಂದು ಹೇಳಿದ್ದಾರೆ.

***


(रिलीज़ आईडी: 1701631) आगंतुक पटल : 267
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Manipuri , Punjabi , Gujarati , Odia , Tamil , Telugu , Malayalam