ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಸಕ್ರೀಯ ಸೋಂಕು ಪ್ರಕರಣಗಳ ಸಂಖ್ಯೆ ದಾಖಲೆಯ ಕುಸಿತ: 1.35ಲಕ್ಷಕ್ಕೆ ಇಳಿಕೆ


ಕಳೆದ 24 ಗಂಟೆಗಳಲ್ಲಿ 4 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಸೋಂಕು ಪ್ರಕರಣಗಳಿಲ್ಲ

75 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಕೋವಿಡ್-19 ಲಸಿಕೆ

ಅತ್ಯಂತ ಅಲ್ಪ ಅವಧಿಯಲ್ಲಿ 7 ಮಿಲಿಯನ್ ಮಂದಿಗೆ ಲಸಿಕೆ ಹಾಕುವಲ್ಲಿ ಭಾರತ ಯಶಸ್ವಿ

Posted On: 12 FEB 2021 10:53AM by PIB Bengaluru

ದೇಶದಲ್ಲಿ ಕೋವಿಡ್-19 ಸೋಂಕಿತರ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ 1.35ಲಕ್ಷ ತಲುಪಿದೆ, ಇಂದು ಪ್ರಮಾಣ 1,35,926 ಇದೆ.

ದೇಶದಲ್ಲಿ ಒಂದು ಒಟ್ಟು ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಸಕ್ರೀಯ ಪ್ರಕರಣಗಳ ಪ್ರಮಾಣ ಶೇ.1.25ರಷ್ಟು ಮಾತ್ರ. ಕಳೆದ ಕೆಲವು ವಾರಗಳಿಗೆ ಹೋಲಿಸಿದರೆ ಪ್ರತಿದಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ.

ಕಳೆದ 24 ಗಂಟೆಗಳಿಂದೀಚೆಗೆ ಪತ್ತೆಯಾಗಿರುವ ಹೊಸ ಪ್ರಕರಣಗಳನ್ನು ಗಮನಿಸಿದರೆ ಸಾಕಾರಾತ್ಮಕ ಚಿತ್ರಣ ಕಂಡು ಬಂದಿದ್ದು, ಒಂದು ರಾಜ್ಯದಲ್ಲಿ ಮಾತ್ರ 1 ಸಾವಿರಕ್ಕೂ ಅಧಿಕ ಪ್ರಕರಣ ದೃಢಪಟ್ಟಿದ್ದು, ಉಳಿದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ 1000 ಕ್ಕಿಂತ ಕಡಿಮೆ ಇದೆ. ಕಳೆದ 24 ಗಂಟೆಗಳಲ್ಲಿ 4 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಹೊಸ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಅವುಗಳೆಂದರೆ ದಾದ್ರಾ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯು, ಲಡಾಖ್ , ತ್ರಿಪುರ ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು.

ಕಳೆದ 24 ಗಂಟೆಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕಿತರ ಸಾವಿನ ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗಿರುವುದು ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 13 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 1ರಿಂದ 5ರವರೆಗೆ ಸಾವು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 9,309 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ, ಮತ್ತು ಇದೇ ವೇಳೆ 15,858 ಮಂದಿ ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ.

ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.97.32ಕ್ಕೆ ಏರಿಕೆಯಾಗಿದ್ದು, ಇದು ವಿಶ್ವದಲ್ಲಿಯೇ ಅತ್ಯಧಿಕವಾಗಿದೆ. ಚೇತರಿಕೆ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ರಾಷ್ಟ್ರೀಯ ಚೇತರಿಕೆ ಪ್ರಮಾಣ ಕೂಡ ಹೆಚ್ಚಾಗುತ್ತಿದೆ.

ಈವರೆಗೆ ಒಟ್ಟು ಗುಣಮುಖವಾಗಿರುವ ಪ್ರಕರಣಗಳು 1,05,89,230. ಸಕ್ರೀಯ ಪ್ರಕರಣಗಳು ಮತ್ತು ಚೇತರಿಕೆ ಪ್ರಕರಣಗಳ ನಡುವಿನ ಅಂತರ ಹೆಚ್ಚಾಗುತ್ತಿದ್ದು, ಸದ್ಯ ಅದು 1,04,53,304 ಇದೆ.

2021 ಫೆಬ್ರವರಿ 12 ರಂದು ಬೆಳಿಗ್ಗೆ 8ಗಂಟೆವರೆಗೆ 75ಲಕ್ಷಕ್ಕೂ ಅಧಿಕ (75,05,010) ಫಲಾನುಭವಿಗಳಿಗೆ ದೇಶಾದ್ಯಂತ ಕೋವಿಡ್-19 ಲಸಿಕೆ ಹಾಕಲಾಗಿದೆ. ಅವರ ವಿವರ ಕೆಳಗಿನಂತಿದೆ.

ಕ್ರ.ಸಂಖ್ಯೆ

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಲಸಿಕೆ ಪಡೆದ ಫಲಾನುಭವಿಗಳು

1

ಅಂಡಮಾನ್ & ನಿಕೋಬಾರ್ ದ್ವೀಪಗಳು

3,454

2

ಆಂಧ್ರಪ್ರದೇಶ

3,43,813

3

ಅರುಣಾಚಲ ಪ್ರದೇಶ

14,322

4

ಅಸ್ಸಾಂ

1,17,607

5

ಬಿಹಾರ್

4,48,903

6

ಚಂಡೀಗಢ

7,374

7

ಛತ್ತೀಸ್ ಗಢ

2,33,126

8

ದಾದ್ರಾ & ನಗರ ಹವೇಲಿ

2,698

9

ದಾಮನ್ & ದಿಯು

1,030

10

ದೆಹಲಿ

1,62,596

11

ಗೋವಾ

11,391

12

ಗುಜರಾತ್

6,45,439

13

ಹರಿಯಾಣ

1,90,390

14

ಹಿಮಾಚಲ ಪ್ರದೇಶ

72,191

15

ಜಮ್ಮು & ಕಾಶ್ಮೀರ

93,570

16

ಜಾರ್ಖಂಡ್

1,74,080

17

ಕರ್ನಾಟಕ

4,77,005

18

ಕೇರಳ

3,33,560

19

ಲಡಾಖ್

2,761

20

ಲಕ್ಷದ್ವೀಪ

920

21

ಮಧ್ಯಪ್ರದೇಶ

4,87,271

22

ಮಹಾರಾಷ್ಟ್ರ

6,08,573

23

ಮಣಿಪುರ

15,944

24

ಮೇಘಾಲಯ

11,642

25

ಮಿಜೋರಾಂ

11,046

26

ನಾಗಾಲ್ಯಾಂಡ್

8,371

27

ಒಡಿಶಾ

3,83,023

28

ಪುದುಚೇರಿ

4,780

29

ಪಂಜಾಬ್

97,668

30

ರಾಜಸ್ಥಾನ್

5,90,990

31

ಸಿಕ್ಕಿಂ

8,316

32

ತಮಿಳುನಾಡು

2,11,762

33

ತೆಲಂಗಣಾ

2,70,615

34

ತ್ರಿಪುರ

59,438

35

ಉತ್ತರಪ್ರದೇಶ

7,63,421

36

ಉತ್ತರಾಖಂಡ್

97,618

37

ಪಶ್ಚಿಮ ಬಂಗಾಳ

4,53,303

38

ಇತರೆ

84,999

ಒಟ್ಟು

75,05,010

 

ಒಟ್ಟು ಲಸಿಕೆ ಪಡೆದಿರುವವರ ಪ್ರಮಾಣ 75,05,010 ಆಗಿದ್ದು, ಅವರಲ್ಲಿ 58,14,976 ಆರೋಗ್ಯ ಕಾರ್ಯಕರ್ತರು (ಎಚ್ ಸಿಡಬ್ಲೂಎಸ್) ಮತ್ತು 16,90,034 ಮುಂಚೂಣಿ ಕಾರ್ಯಕರ್ತರು (ಎಫ್ ಎಲ್ ಡಬ್ಲೂಎಸ್). 1,54,370 ಲಸಿಕೆ ಸೆಷನ್ಸ್ ಗಳನ್ನು ನಡೆಸಲಾಗಿದೆ. ಅತ್ಯಂತ ವೇಗವಾಗಿ 70 ಲಕ್ಷ (7 ಮಿಲಿಯನ್ ) ಲಸಿಕೆ ಹಾಕಿರುವ ಗಡಿ ದಾಟಿರುವ ರಾಷ್ಟ್ರ ಭಾರತವಾಗಿದೆ.

ಲಸಿಕೆ ಅಭಿಯಾನದ 27ನೇ ದಿನವಾದ ನಿನ್ನೆ (2021 ಫೆ.11ರಂದು) 4,87,896 ಫಲಾನುಭವಿಗಳಿಗೆ (1,09,748 ಎಚ್ ಸಿಡಬ್ಲೂಎಸ್ ಮತ್ತು 3,78,148 ಎಫ್ ಎಲ್ ಡಬ್ಲೂಎಸ್)ಗಳಿಗೆ 11,314 ಸೆಷನ್ಸ್ ಗಳಲ್ಲಿ ಲಸಿಕೆಗಳನ್ನು ಹಾಕಲಾಗಿದೆ.

ದೇಶದಲ್ಲಿ ಪ್ರತಿದಿನ ಲಸಿಕೆ ಹಾಕುತ್ತಿರುವ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ.

10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಫಲಾನುಭವಿಗಳಲ್ಲಿ ಶೇ.69ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ. ಉತ್ತರಪ್ರದೇಶವೊಂದರಲ್ಲಿಯೇ ಶೇ.10.2 (7,63,421) ಫಲಾನುಭವಿಗಳಿಗೆ ಒಟ್ಟಾರೆ ಲಸಿಕೆ ಹಾಕಲಾಗಿದೆ.

ಹೊಸದಾಗಿ ದಾಖಲಾಗಿರುವ ಪ್ರಕರಣಗಳಲ್ಲಿ ಶೇ.86.89ರಷ್ಟು ಪ್ರಕರಣಗಳು 6 ರಾಜ್ಯಗಳಿಗೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯ (6,107) ಸೋಂಕಿತರು ಗುಣಮುಖರಾಗಿದ್ದಾರೆ, ನಂತರದ ಸ್ಥಾನದಲ್ಲಿ ಕೇರಳ (5,692) ಮತ್ತು ಛತ್ತೀಸ್ ಗಢ (848) ಸೋಂಕಿತರು ಗುಣಮುಖರಾಗಿದ್ದಾರೆ.

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ 79.87ರಷ್ಟು ಪ್ರಕರಣ 6 ರಾಜ್ಯಗಳಿಗೆ ಸಂಬಂಧಿಸಿದವು.

ಕೇರಳದಲ್ಲಿ ಅತ್ಯಧಿಕ ಪ್ರಕರಣಗಳು ಅಂದರೆ 5,281 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಆನಂತರ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ 652 ಮತ್ತು 481 ಪ್ರಕರಣ ಪತ್ತೆಯಾಗಿವೆ.

ಕಳೆದ 24 ಗಂಟೆಗಳಲ್ಲಿ 87 ಸೋಂಕಿತರು ಸಾವನ್ನಪ್ಪಿದ್ದಾರೆ. ಪೈಕಿ ಆರು ಶೇ.75.86 ಪ್ರಕರಣ ರಾಜ್ಯಗಳಗೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆ 25 ಸೋಂಕಿತರು ಸಾವನ್ನಪ್ಪಿದ್ದಾರೆ. ಆನಂತರ ಕೇರಳದಲ್ಲಿ 16 ಸೋಂಕಿತರು ಮರಣ ಹೊಂದಿದ್ದಾರೆ.

***



(Release ID: 1698041) Visitor Counter : 180