ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ವಿರುದ್ಧ ಯಶಸ್ವಿ ಲಸಿಕೆ ಆಂದೋಲನ ಆರಂಭಿಸಿದ ಪ್ರಧಾನಮಂತ್ರಿ ಮತ್ತು ಭಾರತ ಸರ್ಕಾರಕ್ಕೆ ನೆರೆ ರಾಷ್ಟ್ರಗಳ ನಾಯಕರಿಂದ ಅಭಿನಂದನೆ

Posted On: 18 JAN 2021 5:22PM by PIB Bengaluru

ಕೋವಿಡ್-19 ವಿರುದ್ಧ 2021 ಜನವರಿ 16ರಂದು ಯಶಸ್ವಿ ಲಸಿಕೆ ಆಂದೋಲನ ಆರಂಭಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ನೆರೆಯ ರಾಷ್ಟ್ರಗಳ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಶ್ರೀ ಗೊತಬಯ ರಾಜಪಕ್ಸ ತಮ್ಮ ಟ್ವೀಟ್ ಸಂದೇಶದಲ್ಲಿಕೋವಿಡ್-19 ವಿರುದ್ಧ ಯಶಸ್ವಿ ಲಸಿಕೆ ಬಿಡುಗಡೆ ಮಾಡಿದ್ದಕ್ಕಾಗಿ ಮತ್ತು ನೆರೆಯ ಮಿತ್ರ ರಾಷ್ಟ್ರಗಳ ಬಗ್ಗೆ ತೋರುತ್ತಿರುವ ಉದಾರತೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನನ್ನ ಹೃದಯಪೂರ್ವಕ ಅಭಿನಂದನೆಗಳು.’’ಎಂದು ಹೇಳಿದ್ದಾರೆ.

ಶ್ರೀಲಂಕಾದ ಪ್ರಧಾನಮಂತ್ರಿ ಶ್ರೀ ಮಹಿಂದ ರಾಜಪಕ್ಸ ತಮ್ಮ ಟ್ವೀಟ್ ಸಂದೇಶದಲ್ಲಿಕೋವಿಡ್-19 ವಿರುದ್ಧ ಬೃಹತ್ ಲಸಿಕೆ ಆಂದೋಲನ ಆರಂಭಿಸಿದ್ದು ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು, ಅದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ. ಭೀಕರ ಸಾಂಕ್ರಾಮಿಕ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ನಾವು ಭಾವಿಸುತ್ತೇವೆ’’ಎಂದು ಹೇಳಿದ್ದಾರೆ.

ಮಾಲ್ಡವೀಸ್ ಗಣರಾಜ್ಯದ ಅಧ್ಯಕ್ಷ ಶ್ರೀ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ತಮ್ಮ ಟ್ವೀಟ್ ಸಂದೇಶದಲ್ಲಿಕೋವಿಡ್-19 ವಿರುದ್ಧ ಭಾರತದ ಜನಸಂಖ್ಯೆಗೆ ಲಸಿಕೆ ಹಾಕುವ ಮಹತ್ವದ ಕಾರ್ಯ ಆರಂಭಿಸಿರುವುದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ. ಪ್ರಯತ್ನದಲ್ಲಿ ನೀವು ಯಶಸ್ವಿಯಾಗಲಿದ್ದೀರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಮತ್ತು ಅಂತಿಮವಾಗಿ ನಾವು ಕೋವಿಡ್-19 ಬಿಕ್ಕಟ್ಟು ಅಂತ್ಯವಾಗಲಿರುವುದನ್ನು ಕಾಣಲಿದ್ದೇವೆ’’ಎಂದು ಹೇಳಿದ್ದಾರೆ.

ಭೂತಾನ್ ಪ್ರಧಾನಮಂತ್ರಿ ಡಾ. ಲೋಟೇ ತ್ಸೆರಿಂಗ್ ಅವರು ತಮ್ಮ ಟ್ವೀಟ್ ನಲ್ಲಿಕೋವಿಡ್-19 ವಿರುದ್ಧ ರಾಷ್ಟ್ರವ್ಯಾಪಿ ಯಶಸ್ವಿ ಲಸಿಕೆ ಆಂದೋಲನ ಆರಂಭಿಸಿರುವುದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತದ ಜನತೆಯನ್ನು ಅಭಿನಂದಿಸುತ್ತೇನೆ.  ಸಾಂಕ್ರಾಮಿಕ ಅವಧಿಯಲ್ಲಿ ಎಲ್ಲರೂ ಅನುಭವಿಸಿದ ಯಾತನೆಗಳಿಗೆ ಇದು ಉತ್ತರ ನೀಡಲಿದೆ ಎಂಬ ಭರವಸೆ ನನಗಿದೆ.” ಎಂದು ಹೇಳಿದ್ದಾರೆ.

***


(Release ID: 1689927) Visitor Counter : 208