ಪ್ರಧಾನ ಮಂತ್ರಿಯವರ ಕಛೇರಿ
ಜನವರಿ 17, ದೇಶದ ವಿವಿಧ ಪ್ರದೇಶಗಳಿಂದ ಏಕತೆಯ ಪ್ರತಿಮೆಗೆ ತಡೆರಹಿತ ರೈಲು ಸಂಪರ್ಕ ಸೌಲಭ್ಯ; 8 ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ
ಗುಜರಾತ್ ರೈಲ್ವೆ ವಲಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
प्रविष्टि तिथि:
15 JAN 2021 4:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಜನವರಿ 17ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ವಿವಿಧ ಪ್ರದೇಶಗಳಿಂದ ಕೇವಾಡಿಯಾಕ್ಕೆ ಸಂಪರ್ಕ ಕಲ್ಪಿಸುವ 8 ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲುಗಳು ಏಕತೆಯ ಪ್ರತಿಮೆಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸುತ್ತವೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಗುಜರಾತ್ ನಲ್ಲಿ ರೈಲ್ವೆ ವಲಯಕ್ಕೆ ಸಂಬಂಧಿಸಿದ ಇತರ ಹಲವು ಯೋಜನೆಗಳನ್ನೂ ಉದ್ಘಾಟಿಸಲಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಮತ್ತು ರೈಲ್ವೆ ಸಚಿವ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಪ್ರಧಾನಮಂತ್ರಿಯವರು ದಭೋಯ್ – ಚಾಂದೋಡ್ ನಡುವೆ ಬ್ರಾಡ್‌ಗೇಜ್‌ಗೆ ಪರಿವರ್ತಿಸಲಾದ ಮಾರ್ಗ, ಚಾಂದೋಡ್ – ಕೇವಾಡಿಯ ಹೊಸ ಬ್ರಾಡ್‌ಗೇಜ್ ರೈಲ್ವೆ ಮಾರ್ಗ, ಹೊಸದಾಗಿ ವಿದ್ಯುದ್ದೀಕರಣ ಮಾಡಲಾಗಿರುವ ಪ್ರತಾಪ್ ನಗರ ಕೇವಾಡಿಯ ವಿಭಾಗ ಮತ್ತು ದಭೋಯ್, ಛಾಂದೋಡ್ ಮತ್ತು ಕೆವಾಡಿಯಾದ ನೂತನ ರೈಲು ನಿಲ್ದಾಣ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ಈ ಕಟ್ಟಡಗಳನ್ನು ಸ್ಥಳೀಯ ವೈಶಿಷ್ಟ್ಯಗಳನ್ನು ಮತ್ತು ಪ್ರಯಾಣಿಕರ ಆಧುನಿಕ ಸೌಲಭ್ಯ ಒಳಗೊಂಡಂತೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಕೇವಾಡಿಯಾ ನಿಲ್ದಾಣ ಹಸಿರು ಕಟ್ಟಡ ಪ್ರಮಾಣ ಪತ್ರ ಪಡೆದ ಭಾರತದ ಪ್ರಥಮ ರೈಲು ನಿಲ್ದಾಣವಾಗಿದೆ. ಈ ಯೋಜನೆ ನರ್ಮದಾ ತಟದ ಪ್ರಮುಖ ಧಾರ್ಮಿಕ ಮತ್ತು ಪುರಾತನ ಯಾತ್ರಾ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ದೇಶೀಯ ಮತ್ತು ವಿದೇಶೀ ಪ್ರವಾಸಿಗರ ಹೆಚ್ಚಿನ ಆಗಮನ ಹೆಚ್ಚಿಸುವುದರೊಂದಿಗೆ ಹತ್ತಿರದ ಬುಡಕಟ್ಟು ವಲಯಗಳ ಅಭಿವೃದ್ಧಿಗೂ ಇಂಬು ನೀಡಲಿದೆ ಮತ್ತು ಒಟ್ಟಾರೆ ನಲಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ. ಜೊತೆಗೆ ಹೊಸ ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
ಉದ್ಘಾಟನೆಗೊಳ್ಳಲಿರುವ 8 ರೈಲುಗಳ ವಿವರ ಈ ಕೆಳಕಂಡಂತಿದೆ:
|
ಕ್ರ.ಸಂ
|
ರೈಲಿನ ಸಂಖ್ಯೆ
|
ಇಂದ
|
ಗೆ
|
ರೈಲಿನ ಹೆಸರು ಮತ್ತು ಕಾಲಾವಧಿ
|
|
1
|
20903/04
|
ಕೇವಾಡಿಯಾ
|
ವಾರಾಣಸಿ
|
ಮಹಾಮನ ಎಕ್ಸ್ಪ್ರೆಸ್ (ಸಾಪ್ತಾಹಿಕ)
|
|
2
|
12927/28
|
ದಾದರ್
|
ಕೇವಾಡಿಯ
|
ದಾದರ್ -ಕೇವಾಡಿಯಾ
ಎಕ್ಸ್ಪ್ರೆಸ್ (ದೈನಿಕ)
|
|
3
|
20947/48
|
ಅಹ್ಮದಾಬಾದ್
|
ಕೇವಾಡಿಯಾ
|
ಜನ ಶತಾಬ್ದಿ (ದೈನಿಕ)
|
|
4
|
20945/46
|
ಕೇವಾಡಿಯಾ
|
ಎಚ್. ನಿಜಾಮುದ್ದೀನ್
|
ನಿಜಾಮುದ್ದೀನ್ ಕೇವಾಡಿಯಾ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ (ವಾರಕ್ಕೆರಡು ಬಾರಿ).
|
|
5
|
20905/06
|
ಕೇವಾಡಿಯಾ
|
ರೇವಾ
|
ಕೇವಾಡಿಯಾ –ರೇವಾ ಎಕ್ಸ್ಪ್ರೆಸ್ (ಸಾಪ್ತಾಹಿಕ)
|
|
6
|
20919/20
|
ಚೆನ್ನೈ
|
ಕೇವಾಡಿಯಾ
|
ಚೆನ್ನೈ – ಕೇವಾಡಿಯಾ ಎಕ್ಸ್ಪ್ರೆಸ್ (ಸಾಪ್ತಾಹಿಕ)
|
|
7
|
69201/02
|
ಪ್ರತಾಪ್ ನಗರ
|
ಕೇವಾಡಿಯಾ
|
ಮೆಮು ರೈಲು (ದೈನಿಕ)
|
|
8
|
69203/04
|
ಪ್ರತಾಪ್ ನಗರ
|
ಕೇವಾಡಿಯಾ
|
ಮೆಮು ರೈಲು (ದೈನಿಕ)
|
ಜನ್ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ಇತ್ತೀಚಿನ “ವಿಸ್ಟಾ ಡೂಮ್ ಪ್ರವಾಸಿಗರ ಕೋಚ್” ಒದಗಿಸಲಾಗಿದ್ದು, ಇದು ಆಕಾಶದ ವಿಹಂಗಮ ನೋಟ ನೀಡುತ್ತದೆ.
***
(रिलीज़ आईडी: 1688825)
आगंतुक पटल : 346
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam