ಪ್ರಧಾನ ಮಂತ್ರಿಯವರ ಕಛೇರಿ
ಡಿಸೆಂಬರ್ 31ರಂದು ರಾಜಕೋಟ್ ನಲ್ಲಿ ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
Posted On:
29 DEC 2020 3:32PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ರಾಜಕೋಟ್ ಏಮ್ಸ್ ಗೆ 2020ರ ಡಿಸೆಂಬರ್ 31ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗುಜರಾತ್ ರಾಜ್ಯಪಾಲರು, ಗುಜರಾತ್ ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ಕೇಂದ್ರದ ರಾಜ್ಯ ಸಚಿವರು ಈ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಈ ಯೋಜನೆಗೆ 201 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಇದನ್ನು 1195 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು ಮತ್ತು ಇದು 2022ರ ಮಧ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 20 ಹಾಸಿಗಳ ಆಯುಷ್ ವಿಭಾಗ ಸೇರಿದಂತೆ 750 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯೂ ಇದ್ದು, ಇದರಲ್ಲ 125 ಎಂ.ಬಿ.ಬಿ.ಎಸ್. ಸೀಟುಗಳು ಮತ್ತು 60 ಶುಶ್ರೂಷಕರ ಸೀಟುಗಳಿರುತ್ತವೆ.
***
(Release ID: 1684404)
Read this release in:
Hindi
,
Assamese
,
English
,
Urdu
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam