ಪ್ರಧಾನ ಮಂತ್ರಿಯವರ ಕಛೇರಿ

ಶಾಂತಿನಿಕೇತನ, ವಿಶ್ವ-ಭಾರತಿ ವಿಶ್ವವಿದ್ಯಾಲಯ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಿ ಭಾಷಣ


ವಿಶ್ವ - ಭಾರತಿ ಪಯಣ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಸಂಗತಿ

ವಿಶ್ವ-ಭಾರತಿಯ ಬಗ್ಗೆ ಗುರುದೇವರ ದೃಷ್ಟಿಕೋನ ಸ್ವಾವಲಂಬಿ ಭಾರತದ ಸಾರವಾಗಿದೆ: ಪ್ರಧಾನಮಂತ್ರಿ

Posted On: 24 DEC 2020 2:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನದಲ್ಲಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು ವಿಶ್ವ ಭಾರತಿಯ ನೂರು ವರ್ಷಗಳ ಪಯಣ ವಿಶೇಷವಾಗಿದ್ದು, ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಚಾರವಾಗಿದೆ ಎಂದರು. ಗುರುದೇವರ ಚಿಂತನೆ, ದೃಷ್ಟಿಕೋನ ಮತ್ತು ತಾಯಿ ಭಾರತಿಗಾಗಿ ಕಠಿಣ ಪರಿಶ್ರಮದ ನಿಜವಾದ ಸಾಕಾರವೇ ವಿಶ್ವವಿದ್ಯಾಲಯವಾಗಿದೆ ಎಂದು ಹೇಳಿದರು. ಗುರುದೇವರು ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ವಿಶ್ವ-ಭಾರತಿ, ಶ್ರೀನಿಕೇತನ ಮತ್ತು ಶಾಂತಿನಿಕೇತನ ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ನಮ್ಮ ದೇಶವು ವಿಶ್ವಭಾರತಿಯಿಂದ ಹೊರಹೊಮ್ಮುವ ಸಂದೇಶವನ್ನು ಇಡೀ ಜಗತ್ತಿಗೆ ಪಸರಿಸುತ್ತಿದೆ ಎಂದು  ಪ್ರಧಾನಮಂತ್ರಿಯವರು ಹೇಳಿದರು. ಅಂತಾರಾಷ್ಟ್ರೀಯ ಸೌರ ಸಹಯೋಗದ ಮೂಲಕ ಭಾರತ ಇಂದು ಪರಿಸರ ಸಂರಕ್ಷಣೆಯಲ್ಲಿ ಜಗತ್ತನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು.. ಪ್ಯಾರಿಸ್ ಒಪ್ಪಂದದ ಪರಿಸರ ಗುರಿಗಳನ್ನು ಸಾಧಿಸಲು ಸರಿಯಾದ ಹಾದಿಯಲ್ಲಿರುವ ಏಕೈಕ ಪ್ರಮುಖ ದೇಶ ಭಾರತವಾಗಿದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣವಾದ ಸಂದರ್ಭಗಳನ್ನು ಸ್ಮರಿಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ಆಗ್ರಹಿಸಿದರು. ಸ್ವಾತಂತ್ರ್ಯ ಚಳವಳಿಯ ಗುರಿಗಳು ವಿಶ್ವವಿದ್ಯಾಲಯದ ಗುರಿಗಳಿಗೆ ಅನುಗುಣವಾಗಿವೆ ಎಂದು ಅವರು ಹೇಳಿದರು. ಆದರೆ ಚಳವಳಿಗಳಿಗೆ ಬಹಳ ಹಿಂದೆಯೇ ಬುನಾದಿ ಹಾಕಲಾಗಿತ್ತು. ಭಾರತದ ಸ್ವಾತಂತ್ರ್ಯ ಚಳವಳಿಯು ಶತಮಾನಗಳಿಂದಲೂ ನಡೆಯುತ್ತಿದ್ದ ಅನೇಕ ಚಳವಳಿಗಳಿಂದ ಶಕ್ತಿ ಪಡೆದುಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಕ್ತಿ ಚಳವಳಿ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಏಕತೆಯನ್ನು ಬಲಪಡಿಸಿತು. ಭಕ್ತಿ ಯುಗದಲ್ಲಿ, ಭಾರತದ ಪ್ರತಿಯೊಂದು ಪ್ರದೇಶದ ಸಂತರು ದೇಶದ ಪ್ರಜ್ಞೆಯನ್ನು ಜಾಗೃತವಾಗಿಡಲು ಪ್ರಯತ್ನಿಸಿದರು ಎಂದು ಅವರು ಹೇಳಿದರು. ಭಕ್ತಿ ಚಳವಳಿ ಶತಮಾನಗಳಿಂದ ಹೋರಾಡುತ್ತಿದ್ದ ಭಾರತವನ್ನು ಸಾಮೂಹಿಕ ಪ್ರಜ್ಞೆ ಮತ್ತು ಆತ್ಮವಿಶ್ವಾಸದಿಂದ ತುಂಬಿದ ಬಾಗಿಲು ಎಂದು ಅವರು ಹೇಳಿದರು.

ಶ್ರೀ ರಾಮಕೃಷ್ಣ ಪರಮಹಂಸರ ಕಾರಣದಿಂದಾಗಿ, ಭಾರತಕ್ಕೆ ಸ್ವಾಮಿ ವಿವೇಕಾನಂದರು ಸಿಕ್ಕಿದರು ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾಮಿ ವಿವೇಕಾನಂದರು ಭಕ್ತಿ, ಜ್ಞಾನ ಮತ್ತು ಕರ್ಮ ಮೂರೂ ತಮ್ಮೊಳಗೆ ಲೀನರಾಗಿಸಿಕೊಂಡಿದ್ದರು. ಭಕ್ತಿ ವ್ಯಾಪ್ತಿಯನ್ನು ವಿಸ್ತರಿಸುವಾಗ ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವತ್ವವನ್ನು ಕಾಣಲಾರಂಭಿಸಿದರು ಮತ್ತು ವೈಯಕ್ತಿಕ ಮತ್ತು ಸಂಸ್ಥೆಯ ಸೃಷ್ಟಿಗೆ ಒತ್ತು ನೀಡುವ ಮೂಲಕ ಕರ್ಮಕ್ಕೂ ಅಭಿವ್ಯಕ್ತಿ ನೀಡಿದರು ಎಂದು ಶ್ರೀ ಮೋದಿ ಹೇಳಿದರು. ಭಾರತದ ಎಲ್ಲಾ ಭಾಗಗಳಿಂದ ಭಕ್ತಿ ಚಳವಳಿಯ ದೃಢ ನಂಬಿಕೆಯ ಸಂತರು ಬಲವಾದ ಅಡಿಪಾಯ ಹಾಕಿದರು ಎಂದರು.

ನೂರಾರು ವರ್ಷಗಳ ಭಕ್ತಿ ಚಳವಳಿಯ ಅವಧಿಯ ಜೊತೆಗೆ, ಕರ್ಮ ಚಳವಳಿಯೂ ದೇಶದಲ್ಲಿ ನಡೆಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನ ಮಂತ್ರಿಯವರು ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್, ಜಾನ್ಸಿ ಕಿ ರಾಣಿ, ರಾಣಿ ಚೆನ್ನಮ್ಮ, ಭಗವಾನ್ ಬಿರ್ಸಾ ಮುಂಡಾ ಮತ್ತು ಇನ್ನೂ ಅನೇಕರ ಉದಾಹರಣೆಗಳನ್ನು ನೀಡಿದರು. ಭಾರತದ ಜನರು ಗುಲಾಮಗಿರಿ ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತಿದ್ದರು. ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಸಾಮಾನ್ಯ ನಾಗರಿಕರ ದೃಢತೆ ಮತ್ತು ತ್ಯಾಗದ ಕರ್ಮ-ಕಠಿಣ ಅಭ್ಯಾಸವು ಉತ್ತುಂಗದಲ್ಲಿತ್ತು ಮತ್ತು ಇದು ಭವಿಷ್ಯದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟದ ಪ್ರಮುಖ ಪ್ರೇರಣೆಯಾಯಿತು ಎಂದು ಅವರು ಹೇಳಿದರು.

ಭಕ್ತಿ, ಕರ್ಮ ಮತ್ತು ಜ್ಞಾನ ಎಂಬ ಮೂರು ಸ್ವಾತಂತ್ರ್ಯ ಚಳವಳಿಯ ಪ್ರಜ್ಞೆಯನ್ನು ಪೋಷಿಸಿ ಬೆಳೆಸಿತು ಎಂದು ಪ್ರಧಾನಮಂತ್ರಿ ಹೇಳಿದರು. ಜ್ಞಾನದ ಸ್ಥಾಪನೆಯ ಮೇಲೆ ಸ್ವಾತಂತ್ರ್ಯ ಸಂಗ್ರಾಮವನ್ನು ಗೆಲ್ಲಲು ಸೈದ್ಧಾಂತಿಕ ಕ್ರಾಂತಿಯನ್ನು ಸೃಷ್ಟಿಸಿತು ಮತ್ತು ಅದೇ ಸಮಯದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯದ ಸೃಷ್ಟಿಗೆ ನವಪೀಳಿಗೆಯನ್ನು ಸಿದ್ಧಪಡಿಸುವುದು ಕಾಲದ  ಅಗತ್ಯವಾಗಿತ್ತು ಎಂದು ಅವರು ಹೇಳಿದರು. ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಇದರಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದವು, ಶಿಕ್ಷಣ ಸಂಸ್ಥೆಗಳು ಭಾರತದ ಸೈದ್ಧಾಂತಿಕ ಸ್ವಾತಂತ್ರ ಚಳವಳಿಗೆ  ಹೊಸ ಚೈತನ್ಯ, ಹೊಸ ದಿಕ್ಕು ಮತ್ತು ಹೊಸ ಔನ್ನತ್ಯ ನೀಡಿದವು ಎಂದರು.

ನಾವು ಭಕ್ತಿ ಚಳವಳಿಯೊಂದಿಗೆ ಒಂದಾಗಿದ್ದೇವೆ, ಜ್ಞಾನ ಚಳವಳಿ ಬೌದ್ಧಿಕ ಶಕ್ತಿಯನ್ನು ನೀಡಿತು ಮತ್ತು ಕರ್ಮ ಚಳವಳಿ ನಮ್ಮ ಹಕ್ಕುಗಳಿಗಾಗಿ ಹೋರಾಡುವ ಧೈರ್ಯವನ್ನು ನೀಡಿತು ಎಂದು ಪ್ರಧಾನಮಂತ್ರಿ ಹೇಳಿದರು. ನೂರಾರು ವರ್ಷಗಳ ಕಾಲ ನಡೆದ ಸ್ವಾತಂತ್ರ್ಯ ಚಳವಳಿ ತ್ಯಾಗ, ತಪಸ್ಸು ಮತ್ತು ಭಕ್ತಿಗೆ ಒಂದು ವಿಶಿಷ್ಟ ಉದಾಹರಣೆಯಾಗಿದೆ ಎಂದೂ ಅವರು ಹೇಳಿದರು. ಚಳವಳಿಗಳಿಂದ ಪ್ರಭಾವಿತರಾದ ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಲು ಮುಂದಾದರು ಎಂದರು.

ರಾಷ್ಟ್ರೀಯ ಪ್ರಜ್ಞೆಯ ವಾಹಿನಿ ವೇದಗಳಿಂದ ವಿವೇಕಾನಂದವರೆಗೆ ಹರಿಯಿತು, ಇದು ಗುರುದೇವರ ರಾಷ್ಟ್ರೀಯತೆಯ ಧ್ವನಿಯಲ್ಲಿಯೂ ಇತ್ತು ಎಂದು ಪ್ರಧಾನಮಂತ್ರಿ ಹೇಳಿದರು. ವಾಹಿನಿ ಅಂತರ್ಮುಖಿಯಾಗಿಲ್ಲ ಅಥವಾ ಮಡುಗಟ್ಟಲಿಲ್ಲ. ಭಾರತವನ್ನು ಪ್ರಪಂಚದಿಂದ ಪ್ರತ್ಯೇಕವಾಗಿರಿಸುವತ್ತ ಗಮನವಿರಲಿಲ್ಲ. ದೃಷ್ಟಿಕೋನ ವಿಶ್ವವೇ ಭಾರತದ ಅತ್ಯುತ್ತಮವಾದ್ದರಿಂದ ಪ್ರಯೋಜನ ಪಡೆಯಬೇಕು ಎಂಬುದಾಗಿತ್ತು. ಭಾರತವೂ ಇದರಿಂದ ಕಲಿಯಿತು. ‘ವಿಶ್ವ-ಭಾರತಿಎಂಬ ಹೆಸರು ಭಾರತ ಮತ್ತು ಪ್ರಪಂಚದ ನಡುವಿನ ಸಂಬಂಧವನ್ನು ಆವರಿಸುತ್ತದೆ. ವಿಶ್ವ ಭಾರತಿಗೆ ಗುರುದೇವರ ದೃಷ್ಟಿಕೋನ ಸ್ವಾವಲಂಬಿ ಭಾರತದ ಮೂಲತತ್ವವೂ ಆಗಿದೆ. ಸ್ವಾವಲಂಬಿ ಭಾರತ ಅಭಿಯಾನವು ವಿಶ್ವ ಕಲ್ಯಾಣಕ್ಕಾಗಿ ಭಾರತದ ಕಲ್ಯಾಣದ ಹಾದಿಯಾಗಿದೆ. ಅಭಿಯಾನವು ಭಾರತವನ್ನು ಸಬಲೀಕರಣಗೊಳಿಸುವ ಅಭಿಯಾನವಾಗಿದೆ, ಇದು ಭಾರತದ ಸಮೃದ್ಧಿಯಿಂದ ಜಗತ್ತಿಗೆ ಸಮೃದ್ಧಿಯನ್ನು ತರುವ ಅಭಿಯಾನವಾಗಿದೆ ಎಂದು ಶ್ರೀ ಮೋದಿ ಹೇಳಿದರು.

***



(Release ID: 1683328) Visitor Counter : 201