ಪ್ರಧಾನ ಮಂತ್ರಿಯವರ ಕಛೇರಿ

ಭಾರತ - ಅಮೆರಿಕ ಕಾರ್ಯತಂತ್ರ ಪಾಲುದಾರಿಕೆ ಕುರಿತು ಸಹಮತ ಹೆಚ್ಚಳಕ್ಕೆ ಮಾನ್ಯತೆ; ಅಮೆರಿಕದಿಂದ ಲೀಜನ್ ಆಫ್ ಮೆರಿಟ್ ಪ್ರಶಸ್ತಿ ಸ್ವೀಕಾರದ ವೇಳೆ ಪ್ರಧಾನಮಂತ್ರಿ ಅಭಿಮತ

Posted On: 22 DEC 2020 8:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಮೆರಿಕ ಸರ್ಕಾರದಿಂದ ಲೀಜನ್ ಆಫ್ ಮೆರಿಟ್ ಪ್ರಶಸ್ತಿ ದೊರೆತಿರುವುದಕ್ಕೆ ಭಾರಿ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.

ಸರಣಿ ಟ್ವೀಟ್ ಗಳಲ್ಲಿ ಪ್ರಧಾನಮಂತ್ರಿ ಅವರುಡೊನಾಲ್ಡ್ ಟ್ರಂಪ್ @POTUS @realDonaldTrump ನಿಂದ ಲೀಜನ್ ಆಫ್ ಮೆರಿಟ್ ಪ್ರಶಸ್ತಿ ಲಭಿಸುತ್ತಿರುವುದಕ್ಕೆ ನನಗೆ ಭಾರಿ ಹೆಮ್ಮೆಯಾಗುತ್ತಿದೆ. ಇದು ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕಾ ಜನರ ಪ್ರಯತ್ನಗಳನ್ನು ಗುರುತಿಸುತ್ತದೆ, ಮತ್ತು ಅಮೆರಿಕದ ಭಾರತಅಮೆರಿಕ ಕಾರ್ಯತಂತ್ರ ಪಾಲುದಾರಿಕೆಯಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಹಮತವನ್ನು ಪ್ರತಿಬಿಂಬಿಸುತ್ತದೆ.

21ನೇ ಶತಮಾನ ಅನಿರೀಕ್ಷಿತ ಸವಾಲುಗಳನ್ನಷ್ಟೇ ಅಲ್ಲದೆ ಅವಕಾಶ ಎರಡನ್ನೂ ಒದಗಿಸುತ್ತಿದೆ. ಭಾರತಅಮೆರಿಕ ನಡುವಿನ ಸಂಬಂಧದಿಂದ ನಮ್ಮ ಜನರ ವಿಭಿನ್ನ ಸಾಮರ್ಥ್ಯವನ್ನು ಬಳಸಿಕೊಂಡು ಇಡೀ ಮನುಕುಲದ ಒಳಿತಿಗಾಗಿ ಜಾಗತಿಕ ನಾಯಕತ್ವ ಒದಗಿಸುತ್ತದೆ.

ಭಾರತದ 1.3 ಬಿಲಿಯನ್ ಕೋಟಿ ಜನರ ಪರವಾಗಿ ನಾನು ಪುನರುಚ್ಚರಿಸುವುದೇನೆಂದರೆ ನಮ್ಮ ಸರ್ಕಾರ ಅಮೆರಿಕ ಸರ್ಕಾರದೊಂದಿಗೆ ಖಚಿತ ಬದ್ಧತೆ ಹಾಗೂ ದೃಢತೆಯಿಂದ ನಿಶ್ಚಯಿಸಿ ಎರಡೂ ದೇಶಗಳ ಇತರ ಪಾಲುದಾರರೊಡಗೂಡಿ ಭಾರತಅಮೆರಿಕ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಶ್ರಮಿಸಲಿದೆ.” ಎಂದು ಹೇಳಿದ್ದಾರೆ.

***


(Release ID: 1682904) Visitor Counter : 199