ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೊರೊನಾ ಸಕ್ರಿಯ ಪ್ರಕರಣಗಳ ಸ್ಥಿರ ಇಳಿಮುಖ ಪ್ರವೃತ್ತಿ ಮುಂದುವರಿಕೆ; 161 ದಿನಗಳ ನಂತರ 3.03 ಲಕ್ಷಕ್ಕೆ ಕುಸಿತ


ಕಳೆದ 24 ದಿನಗಳಿಂದ ಹೊಸ ಪ್ರಕರಣಗಳನ್ನು ಹಿಂದಿಕ್ಕಿದ ದೈನಂದಿನ ಚೇತರಿಕೆ ಪ್ರಕರಣಗಳು

Posted On: 21 DEC 2020 12:03PM by PIB Bengaluru

ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ದಿನೇದಿನೆ ತಗ್ಗುತ್ತಿದ್ದು, ದೇಶಾದ್ಯಂತ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3.03ಕ್ಕೆ ಇಳಿಕೆ ಕಂಡಿದೆ. 161 ದಿನಗಳ ನಂತರ ಅತ್ಯಂತ ಕನಿಷ್ಠ ಪ್ರಮಾಣ ದಾಖಲಾಗಿದೆ. 2020 ಜುಲೈ 13ರಂದು 3,01,609 ಸಕ್ರಿಯ ಪ್ರಕರಣಗಳು ದಾಖಲಾಗಿದ್ದವು.

ಭಾರತದ ಒಟ್ಟು ಪಾಸಿಟಿವ್ ಪ್ರಕರಣಗಳ ಶೇಕಡ 3.02ರಷ್ಟು ಸಕ್ರಿಯ ಪ್ರಕರಣಗಳಿವೆ. ಹೊಸ ಚೇತರಿಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 1,705ರಷ್ಟು ಇಳಿಕೆಯಾಗಿದೆ.

https://static.pib.gov.in/WriteReadData/userfiles/image/image0012K19.jpg

ಕಳೆದ 24 ದಿನಗಳಿಂದ ಹೊಸ ಕೊರೊನಾ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 24,337 ಹೊಸ ಪ್ರಕರಣಗಳು ದಾಖಲಾದರೆ, 25,709 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ.

https://static.pib.gov.in/WriteReadData/userfiles/image/image002YB4E.jpg

ದಿನನಿತ್ಯ ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದರಿಂದ ಚೇತರಿಕೆ ದರ ಇದೀಗ 95.53%ಗೆ ಸುಧಾರಣೆ ಕಂಡಿದೆ.

ತನಕ ದೇಶದಲ್ಲಿ ಗುಣಮುಖರಾದವರ ಸಂಖ್ಯೆ 96,06,111ಕ್ಕೆ ಏರಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಇದು ಅತ್ಯಂತ ಗರಿಷ್ಠ ಪ್ರಮಾಣವಾಗಿದೆ. ಚೇತರಿಕೆ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ತ್ವರಿತವಾಗಿ ಏರಿಕೆ ಕಾಣುತ್ತಿದ್ದು, ಇದೀಗ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 93,02,472 ಇದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 71.61% ಹೊಸ ಚೇತರಿಕೆ ಪ್ರಕರಣಗಳು ದಾಖಲಾಗಿವೆ.

ಕೇರಳ ರಾಜ್ಯವೊಂದರಲ್ಲೇ ಒಂದೇ ದಿನ ಗರಿಷ್ಠ ಅಂದರೆ, 4,471, ಪಶ್ಚಿಮ ಬಂಗಾಳದಲ್ಲಿ 2,627 ಮತ್ತು ಮಹಾರಾಷ್ಟ್ರದಲ್ಲಿ 2,064 ಸೋಕಿತರು ಗುಣಮುಖರಾಗಿದ್ದಾರೆ.

https://static.pib.gov.in/WriteReadData/userfiles/image/image00367A2.jpg

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ 79.20% ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕೇರಳದಲ್ಲಿ ನಿನ್ನೆ ಒಂದೇ ದಿನ 5,711, ಮಹಾರಾಷ್ಟ್ರದಲ್ಲಿ 3,811 ಮತ್ತು ಪಶ್ಚಿಮ ಬಂಗಾಳದಲ್ಲಿ 1,978 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

https://static.pib.gov.in/WriteReadData/userfiles/image/image004Z9IY.jpg

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ ಹೊಸದಾಗಿ 333 ಸಾವುಗಳು ಸಂಭವಿಸಿವೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ 81.38% ಹೊಸ ಸಾವುಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 98, ಪಶ್ಚಿಮ ಬಂಗಾಳದಲ್ಲಿ 40 ಮತ್ತು ಕೇರಳದಲ್ಲಿ 30 ಸಾವುಗಳು ವರದಿಯಾಗಿವೆ.

https://static.pib.gov.in/WriteReadData/userfiles/image/image005DLBY.jpg

                               https://static.pib.gov.in/WriteReadData/userfiles/image/image006ZNLO.jpg

ಜಾಗತಿಕ ಮಟ್ಟದಲ್ಲಿ ಪ್ರತಿ 10 ಲಕ್ಷ ಜನರಲ್ಲಿ ಸಂಭವಿಸುತ್ತಿರುವ ಕೊರೊನಾ ಸಾವುಗಳನ್ನು ಪರಿಗಣಿಸಿದರೆ, ಭಾರತದಲ್ಲಿ ಸಾವಿನ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕನಿಷ್ಠ (105.7).

ಗಂಟಲು ದ್ರವ ಪರೀಕ್ಷೆ, ತ್ವರಿತ ರೋಗ ಪತ್ತೆ, ಸಕಾಲದಲ್ಲಿ ರೋಗಿಗಳನ್ನು ಹೋಮ್ ಕ್ವಾರಂಟೈನ್ಗೆ ಒಳಪಡಿಸುವುದು, ತ್ವರಿತವಾಗಿ ಆಸ್ಪತ್ರೆಗಳಿಗೆ ರೋಗಿಗಳ ದಾಖಲು ಮತ್ತು ಗುಣಮಟ್ಟದ ಚಿಕಿತ್ಸೆ ಮತ್ತಿತರ ಕೇಂದ್ರೀಕೃತ ಕ್ರಮಗಳಿಂದ ಭಾರತದಲ್ಲಿ ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬಂದಿದ್ದು, ಅದೀಗ ದಿನನಿತ್ಯ 400 ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ.

***



(Release ID: 1682379) Visitor Counter : 195