ಪ್ರಧಾನ ಮಂತ್ರಿಯವರ ಕಛೇರಿ
2020ರ ಡಿಸೆಂಬರ್ 19ರಂದು ಅಸೋಚೆಮ್ ಸ್ಥಾಪನಾ ಸಪ್ತಾಹದಲ್ಲಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ
Posted On:
17 DEC 2020 8:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನರ್ಫರೆನ್ಸಿಂಗ್ ಮೂಲಕ 2020ರ ಡಿಸೆಂಬರ್ 19ರಂದು ಬೆಳಗ್ಗೆ 10.30ಕ್ಕೆ ಅಸೋಚಮ್ ಸ್ಥಾಪನಾ ಸಪ್ತಾಹ ಉದ್ದೇಶಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಅಸೋಚಮ್ ಶತಮಾನದ ಉದ್ಯಮಿ ಪ್ರಶಸ್ತಿಯನ್ನು ಶ್ರೀ ರತನ್ ಟಾಟಾ ಅವರಿಗೆ ಪ್ರದಾನ ಮಾಡಲಿದ್ದು, ಅವರು ಟಾಟಾ ಸಮೂಹದ ಪರವಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಅಸೋಚಮ್ ಬಗ್ಗೆ
ಅಸೋಚಮ್ ಅನ್ನು ಭಾರತದ ಎಲ್ಲಾ ಪ್ರದೇಶಗಳನ್ನು ಪ್ರತಿನಿಧಿಸುವ ಪ್ರವರ್ತಕ ಸಂಸ್ಥೆಯಾಗಿ 1920 ರಲ್ಲಿ ಸ್ಥಾಪಿಸಲಾಯಿತು. 400 ಸಂಸ್ಥೆಗಳು ಮತ್ತು ವಾಣಿಜ್ಯ ಸಂಘಗಳನ್ನು ಒಳಗೊಂಡಿರುವ ಮತ್ತು ಭಾರತದಾದ್ಯಂತ 4.5 ಲಕ್ಷ ಸದಸ್ಯರಿಗೆ ಸೇವೆ ಸಲ್ಲಿಸುತ್ತಿರುವ ಅಸೋಚಮ್ ಭಾರತೀಯ ಕೈಗಾರಿಕೆಗಳಿಗೆ ಜ್ಞಾನದ ಕಾರಂಜಿ ಆಗಿ ಹೊರಹೊಮ್ಮಿದೆ.
***
(Release ID: 1681681)
Visitor Counter : 112
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam