ಪ್ರಧಾನ ಮಂತ್ರಿಯವರ ಕಛೇರಿ

ಭಾರತ - ಬಾಂಗ್ಲಾದೇಶ ವರ್ಚುವಲ್ ಶೃಂಗಸಭೆಯ ಜಂಟಿ ಹೇಳಿಕೆ

Posted On: 17 DEC 2020 4:07PM by PIB Bengaluru

1. ಘನತೆವೆತ್ತ ಶ್ರೀ ನರೇಂದ್ರ ಮೋದಿ, ಪ್ರಧಾನಮಂತ್ರಿಯವರು, ಭಾರತ ಗಣರಾಜ್ಯ ಮತ್ತು ಘನತೆವೆತ್ತ ಶೇಖ್ ಹಸೀನಾ, ಪ್ರಧಾನಮಂತ್ರಿಯವರು, ಬಾಂಗ್ಲಾದೇಶ ಪ್ರಜಾ ಗಣರಾಜ್ಯ ಇವರ ನಡುವೆ 2020 ಡಿಸೆಂಬರ್ 17ರಂದು ವರ್ಚುವಲ್ ಸ್ವರೂಪದ ಶೃಂಗಸಭೆ ನಡೆಯಿತು. ಎರಡೂ ಕಡೆಯವರು ದ್ವಿಪಕ್ಷೀಯ ಬಾಂಧವ್ಯ ಕುರಿತ ಎಲ್ಲ ಅಂಶಗಳ ಕುರಿತಂತೆ ಸಮಗ್ರ ಚರ್ಚೆ ನಡೆಸಿದರು ಮತ್ತು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಕುರಿತಂತೆ ಅಭಿಪ್ರಾಯ ಹಂಚಿಕೊಂಡರು.

ಭಾರತಬಾಂಗ್ಲಾದೇಶ ಪಾಲುದಾರಿಕೆ

2. ಇಬ್ಬರೂ ಪ್ರಧಾನಮಂತ್ರಿಗಳು ಇತಿಹಾಸ, ಸಂಸ್ಕೃತಿ, ಭಾಷೆ ಮತ್ತು ಸಹಯೋಗವನ್ನು ನಿರೂಪಿಸುವ ಇತರ ವಿಶಿಷ್ಟ ಸಾಮ್ಯತೆಗಳ ಹಂಚಿಕೆಯ ಬಂಧಗಳ ಆಧಾರದ ಮೇಲಿನ ಪ್ರಸಕ್ತ ದ್ವಿಪಕ್ಷೀಯ ಬಾಂಧವ್ಯಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಬಾಂಧವ್ಯ ಭ್ರಾತೃತ್ವದ ಸಂಬಂಧಗಳನ್ನು ಆಧರಿಸಿವೆ ಮತ್ತು ಕಾರ್ಯತಂತ್ರದ ಸಹಭಾಗಿತ್ವವನ್ನು ಮೀರಿದ ಸಾರ್ವಭೌಮತ್ವ, ಸಮಾನತೆ, ನಂಬಿಕೆ ಮತ್ತು ತಿಳಿವಳಿಕೆಯ ಆಧಾರದ ಮೇಲೆ ಎಲ್ಲರನ್ನೂ ಒಳಗೊಂಡ ಪಾಲುದಾರಿಕೆಯ ಪ್ರತಿಫಲನಾತ್ಮಕವಾಗಿದೆ ಎಂದು ಅವರು ಒತ್ತಿ ಹೇಳಿದರು. 1971 ರಲ್ಲಿ ಮಾಡಿದ ಮಹತ್ತರ ತ್ಯಾಗಕ್ಕಾಗಿ ಬಾಂಗ್ಲಾದೇಶ ವಿಮೋಚನಾ ಯುದ್ಧದ ಹುತಾತ್ಮರಿಗೆ, ಮುಕ್ತಿ ಜೋಡ್ ಮತ್ತು ಭಾರತೀಯ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು. ಜನರ ಆಶೋತ್ತರಗಳಿಗೆ ಅನುಗುಣವಾಗಿ ಎರಡು ಸ್ನೇಹಪರ ರಾಷ್ಟ್ರಗಳಲ್ಲಿ.ಪಾಲಿಸಬೇಕಾದ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ರಕ್ಷಿಸಲು ಅವರು ಪ್ರತಿಜ್ಞೆ ಮಾಡಿದರು.

3. ಪ್ರಧಾನಮಂತ್ರಿ ಶೇಖ್ ಹಸೀನಾ ಅವರು 2019 ಅಕ್ಟೋಬರ್ ನಲ್ಲಿ ದೆಹಲಿಗೆ ಭೇಟಿ ನೀಡಿದ್ದ ವೇಳೆ ಕೈಗೊಂಡ ವಿವಿಧ ನಿರ್ಧಾರಗಳ ಪ್ರಗತಿಗೆ ಇಬ್ಬರೂ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. 2020 ಸೆಪ್ಟೆಂಬರ್ ನಲ್ಲಿ ನಡೆದ ಆರನೇ ಜಂಟಿ ಸಮಾಲೋಚನಾ ಆಯೋಗದ ಸಭೆಯ ಯಶಸ್ವಿಯಾಗಿ ಆಯೋಜಿಸಿದ್ದನ್ನು ಎರಡೂ ಕಡೆಯವರು ಸ್ಮರಿಸಿದರು.

ಆರೋಗ್ಯ ವಲಯದಲ್ಲಿ ಸಹಕಾರಜಾಗತಿಕ ಸಾರ್ವಜನಿಕ ಆರೋಗ್ಯ ಸವಾಲುಗಳ ನಿವಾರಣೆ

4. ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ಎರಡೂ ಕಡೆಯವರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ನಿರಂತರ ಕಾರ್ಯಕ್ರಮವನ್ನು ಕಾಪಾಡಿಕೊಂಡಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಭಾರತದ ನೆರೆಹೊರೆ ಮೊದಲ ನೀತಿಯಡಿ ಭಾರತ, ಬಾಂಗ್ಲಾದೇಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದಲ್ಲಿ ಲಸಿಕೆ ಉತ್ಪಾದಿಸುವಾಗ ಬಾಂಗ್ಲಾದೇಶಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಪ್ರದೇಶದಲ್ಲಿ ಖಾಸಗಿ ವಲಯದ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ಸಹಯೋಗವನ್ನು ಉಭಯ ನಾಯಕರು ಉಲ್ಲೇಖಿಸಿದರು.

5. ಭಾರತವು ಚಿಕಿತ್ಸೆಯಲ್ಲಿ ಸಹಯೋಗ ಮತ್ತು ಲಸಿಕೆ ಉತ್ಪಾದನೆಯಲ್ಲಿ ಸಹಭಾಗಿತ್ವವನ್ನು ನೀಡುವುದಾಗಿಯೂ ತಿಳಿಸಿತು. ಬಾಂಗ್ಲಾ ಭಾಷೆಯಲ್ಲಿ ವೈದ್ಯಕೀಯ ವೃತ್ತಿಪರರ ಸಾಮರ್ಥ್ಯವರ್ಧನೆಗಾಗಿ ಭಾರತ ನಡೆಸಿರುವ ಕೋರ್ಸ್‌ ಗಳನ್ನು ಬಾಂಗ್ಲಾದೇಶ ಶ್ಲಾಘಿಸಿತು.

ಸಾಂಸ್ಕೃತಿಕ ಸಹಕಾರಐತಿಹಾಸಿಕ ನಂಟಿನ ಜಂಟಿ ಆಚರಣೆ

6. ಪ್ರಸಕ್ತಮುಜೀಬ್ ಬೋರ್ಶೋಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಭಾರತದ ಆತ್ಮೀಯತೆಯನ್ನು ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಬಹುವಾಗಿ ಶ್ಲಾಘಿಸಿದರು. ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಭಾರತ ಸರ್ಕಾರ ಹೊರಡಿಸಿದ ಸ್ಮರಣಾರ್ಥ ಅಂಚೆ ಚೀಟಿಯನ್ನು ಇಬ್ಬರು ಪ್ರಧಾನಮಂತ್ರಿಗಳು ಜಂಟಿಯಾಗಿ ಅನಾವರಣಗೊಳಿಸಿದರು. ಸೆಪ್ಟೆಂಬರ್ 2020 ರಲ್ಲಿ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ಅಂಚೆ ಚೀಟಿ ಹೊರಡಿಸಿದ್ದ ಬಾಂಗ್ಲಾದೇಶ ಸರ್ಕಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದರು.

7. 20 ನೇ ಶತಮಾನದ ಇಬ್ಬರು ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ಬಂಗಬಂಧು ಅವರ ಸ್ಮರಣಾರ್ಥ ಡಿಜಿಟಲ್ ಪ್ರದರ್ಶನದ ಪರಿಚಯಾತ್ಮಕ ವೀಡಿಯೊವನ್ನು ಸಹ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಬಾಂಗ್ಲಾದೇಶ ಮತ್ತು ಭಾರತದ ವಿವಿಧ ನಗರಗಳಲ್ಲಿ ಮತ್ತು ವಿಶ್ವದಾದ್ಯಂತ ಆಯ್ದ ನಗರಗಳಲ್ಲಿ ಹಾಗೂ ವಿಶ್ವಸಂಸ್ಥೆಯಲ್ಲಿಯೂ ಪ್ರದರ್ಶನ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಇಬ್ಬರೂ ನಾಯಕರು, ಪ್ರದರ್ಸನವು ವಿಶೇಷವಾಗಿ ಯುವಕರಲ್ಲಿ ನ್ಯಾಯ, ಸಮಾನತೆ ಮತ್ತು ಅಹಿಂಸೆಯ ಮೌಲ್ಯಗಳನ್ನು ಪ್ರೇರೇಪಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

8. ಭಾರತೀಯ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರ ನಿರ್ದೇಶನದಲ್ಲಿ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜೀವನ ಆಧಾರಿತ ಚಿತ್ರದ ಚಿತ್ರೀಕರಣವು 2021 ಜನವರಿಯಲ್ಲಿ ಪ್ರಾರಂಭವಾಗಲಿದೆ ಎಂದು ಎರಡೂ ಕಡೆಯವರು ಉಲ್ಲೇಖಿಸಿದರು.

9. ಬಾಂಗ್ಲಾದೇಶ ವಿಮೋಚನಾ ಯುದ್ಧದ ಐವತ್ತನೇ ವಾರ್ಷಿಕೋತ್ಸವ ಹಾಗೂ ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯಾಗಿ 2021ಕ್ಕೆ 50 ವರ್ಷವಾಗಲಿದ್ದು, ಭಾರತ ಬಾಂಗ್ಲಾದೇಶದ ದ್ವಿಪಕ್ಷೀಯ ಸಂಬಂಧಗಳಿಗೆ ಐತಿಹಾಸಿಕವಾಗಲಿವೆ ಎಂದು ಹೇಳಿದರು. ಎರಡೂ ಮಹತ್ವದ ಘಟನೆಗಳ ನೆನಪಿಗಾಗಿ ಭಾರತ, ಬಾಂಗ್ಲಾದೇಶ ಮತ್ತು ಮೂರನೇ ರಾಷ್ಟ್ರದಲ್ಲೂ ಜಂಟಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ಸಮ್ಮತಿಸಲಾಯಿತು.

10. ಬಾಂಗ್ಲಾದೇಶದ ಪ್ರಧಾನಮಂತ್ರಿಯವರು ಬಾಂಗ್ಲಾ ವಿಮೋಚನೆ ಯುದ್ಧದ ಸಂದರ್ಭದಲ್ಲಿ ಭಾರತಬಾಂಗ್ಲಾಗೇಶ ಗಡಿಯಲ್ಲಿರುವ ಮುಜಿಬ್ ನಗರದಿಂದ ನೋಯಿಡಾವರೆಗಿನ ರಸ್ತೆಯ ಐತಿಹಾಸಿಕ ಮಹತ್ವದ ಸ್ಮರಣಾರ್ಥ ಅದಕ್ಕೆ "ಶಧಿನೋಟ ಶೋರೋಕ್" ಎಂದು ಹೆಸರಿಡಬೇಕು ಎಂಬ ಬಾಂಗ್ಲಾದೇಶದ ಪ್ರಸ್ತಾಪವನ್ನು ಪರಿಗಣಿಸುವಂತೆ ಭಾರತಕ್ಕೆ ವಿನಂತಿಸಿದರು.

11. ಸಂಸ್ಕೃತಿ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಯುವ ಮತ್ತು ಕ್ರೀಡೆ ಮತ್ತು ಸಮೂಹ ಮಾಧ್ಯಮಗಳನ್ನು ಉತ್ತೇಜಿಸಲು ಗುಂಪುಗಳ ನಿಯಮಿತ ವಿನಿಮಯವನ್ನು ಮುಂದುವರಿಸುವುದಾಗಿ ಎರಡೂ ಕಡೆಯವರು ಪುನರುಚ್ಚರಿಸಿದರು.

ಗಡಿ ನಿರ್ವಹಣೆ ಮತ್ತು ಭದ್ರತೆ ಸಹಕಾರ

12. ನಿಶ್ಚಿತ ಗಡಿ ರೇಖೆ ಗುರುತಿಸುವಿಕೆ ನಿರ್ಧರಣೆಯನ್ನು ಆಖೈರುಗೊಳಿಸಲು ಪ್ರಧಾನ ಸ್ತಂಬ 1 ರಿಂದ ಭೂ ಗಡಿ ಕೊನೆಯವರೆಗೆ ಇಚಾಮತಿ, ಕಾಲಿಂದಿ, ರೈಮಂಗೋಲ್ ಮತ್ತು ಹರಿಯಭಂಗಾ ನದಿಗಳ ಉದ್ದಕ್ಕೂ ಹೊಸ ಪಟ್ಟಿಯ ನಕ್ಷೆಗಳನ್ನು ತಯಾರಿಸಲು ಜಂಟಿ ಗಡಿ ಸಮ್ಮೇಳನದ ಪೂರ್ವಭಾವಿ ಸಭೆ ನಡೆಸಲು ಎರಡೂ ಕಡೆಯವರು ಒಪ್ಪಿದರು. ಕುಹ್ಸಿಯಾರಾ ನದಿಯ ಉದ್ದಕ್ಕೂ ಇರುವ ಅಂತಾರಾಷ್ಟ್ರೀಯ ಗಡಿಯನ್ನು ನಿಗದಿತ ಗಡಿಯಾಗಿ ಪರಿವರ್ತಿಸಲು ಅಗತ್ಯವಾದ ಕಾರ್ಯಗಳನ್ನು ಕೈಗೊಳ್ಳಲೂ ಒಪ್ಪಲಾಯಿತು.

13. ರಾಜ್‌ ಶಾಹಿ ಜಿಲ್ಲೆಯ ಬಳಿಯ ಪದ್ಮಾ ನದಿಯುದ್ದಕ್ಕೂ ನದಿ ಮಾರ್ಗದ ಮೂಲಕ 1.3 ಕಿ.ಮೀ ಮುಗ್ಧ ಮಾರ್ಗದಲ್ಲಿ ಸಾಗುವ ವಿನಂತಿಯನ್ನು ಬಾಂಗ್ಲಾದೇಶ ಕಡೆಯವರು ಪುನರುಚ್ಚರಿಸಿದರು. ವಿನಂತಿಯನ್ನು ಪರಿಗಣಿಸುವುದಾಗಿ ಭಾರತದ ಕಡೆಯವರು ಭರವಸೆ ನೀಡಿದರು.

14. ತ್ರಿಪುರ (ಭಾರತ) ದಿಂದ ಆರಂಭಗೊಂಡು- ಬಾಂಗ್ಲಾದೇಶ ವಲಯದವರೆಗೆ ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಬಾಕಿ ಇರುವ ಎಲ್ಲಾ ವಲಯಗಳಲ್ಲಿ ಗಡಿ ಬೇಲಿ ನಿರ್ಮಾಣ ಪೂರ್ಣಗೊಳಿಸಲು ಇಬ್ಬರೂ ನಾಯಕರು ಸಮ್ಮತಿಸಿದರು. ಗಡಿಯಲ್ಲಿ ನಾಗರಿಕರ ಪ್ರಾಣಹಾನಿ ಕಳವಳಕಾರಿ ಸಂಗತಿಯಾಗಿದೆ ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡರು ಮತ್ತು ಅಂತಹ ಗಡಿ ಘಟನೆಗಳನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಲು ಸಮನ್ವಯ ಕ್ರಮಗಳನ್ನು ಹೆಚ್ಚಿಸಲು ಸಂಬಂಧಪಟ್ಟ ಗಡಿ ಪಡೆಗಳಿಗೆ ನಿರ್ದೇಶನ ನೀಡಿದರು. ಪ್ರಸಕ್ತ ಸಮನ್ವಯ ಗಡಿ ನಿರ್ವಹಣಾ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ನಾಯಕರು ಒತ್ತು ನೀಡಿದರು. ಶಸ್ತ್ರಾಸ್ತ್ರ, ಮಾದಕವಸ್ತು ಮತ್ತು ಖೋಟಾ ನೋಟುಗಳ ಕಳ್ಳಸಾಗಣೆ ಮತ್ತು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ತಡೆಗಟ್ಟಲು ಎರಡೂ ಗಡಿ ಕಾವಲು ಪಡೆಗಳ ಇತ್ತೀಚಿನ ಪ್ರಯತ್ನಗಳ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು.

15. ಬಾಂಗ್ಲಾದೇಶ ಮತ್ತು ಭಾರತವು ಆಗಾಗ್ಗೆ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಿರುವುದನ್ನು ಗಮನಿಸಿದ ಉಭಯ ನಾಯಕರು ವಿಪತ್ತು ನಿರ್ವಹಣಾ ಸಹಕಾರದ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದವನ್ನು ತ್ವರಿತವಾಗಿ ಆಖೈರುಗೊಳಿಸಲು ಎರಡೂ ಕಡೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

16. ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಭೀತಿ ಒಡ್ಡಿದೆ ಎಂಬುದನ್ನು ಗುರುತಿಸಿದ ಎರಡೂ ಕಡೆಯವರು, ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದರು.

17. ಉಭಯ ದೇಶಗಳ ನಡುವೆ ಜನರ ಓಡಾಟವನ್ನು ಸರಳೀಕರಿಸಲು ಎರಡೂ ಕಡೆಯವರು ಒತ್ತು ನೀಡಿದರು. ಅಖೌರಾ (ತ್ರಿಪುರ) ಮತ್ತು ಘೋಜದಂಗ (ಪಶ್ಚಿಮ ಬಂಗಾಳ) ಚೆಕ್‌ ಪೋಸ್ಟ್‌ ಗಳಿಂದ ಮೊದಲ್ಗೊಂಡು, ಹಂತ ಹಂತವಾಗಿ ಸಿಂಧುವಾದ ದಾಖಲೆಗಳೊಂದಿಗೆ ಪ್ರಯಾಣಿಸುವ ಬಾಂಗ್ಲಾದೇಶಿಗಳಿಗೆ ಭಾರತದ ಭೂ ಬಂದರುಗಳಿಂದ ಪ್ರವೇಶ / ನಿರ್ಗಮನದ ಮೇಲಿನ ನಿರ್ಬಂಧಗಳನ್ನು ಹಂತಹಂತವಾಗಿ ತೆಗೆದುಹಾಕುವ ಭಾರತದ ಬದ್ಧತೆಯನ್ನು ಶೀಘ್ರವಾಗಿ ಜಾರಿಗೆ ತರಲು ಬಾಂಗ್ಲಾದೇಶ ಕಡೆಯವರು ವಿನಂತಿಸಿದರು.

ಪ್ರಗತಿಗಾಗಿ ವಾಣಿಜ್ಯ ಪಾಲುದಾರಿಕೆ

18. ಪ್ರಧಾನಮಂತ್ರಿ ಶೇಖ್ ಹಸೀನಾ 2011ರಿಂದ ಎಸ್..ಎಫ್.ಟಿ.. ಅಡಿಯಲ್ಲಿ ಬಾಂಗ್ಲಾದೇಶದ ರಫ್ತುದಾರರಿಗೆ ಭಾರತಕ್ಕೆ ಸುಂಕ ರಹಿತ ಮತ್ತು ಕೋಟಾ ಮುಕ್ತ ಪ್ರವೇಶವನ್ನು ನೀಡಿರುವುದನ್ನು ಸ್ವಾಗತಿಸಿದರು. ಉಭಯ ದೇಶಗಳು ಎಸ್..ಎಫ್.ಟಿ. ನಮ್ಯತೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಬಂದರು ನಿರ್ಬಂಧಗಳು, ಕಾರ್ಯವಿಧಾನದ ಅಡಚಣೆಗಳು ಮತ್ತು ಸಂಪರ್ಕತಡೆ ನಿರ್ಬಂಧಗಳು ಸೇರಿದಂತೆ ಸುಂಕ ಹೊರತಾದ ಅಡೆತಡೆಗಳು ಮತ್ತು ವ್ಯಾಪಾರ ಸೌಲಭ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಒತ್ತು ನೀಡಿದರು. ಭಾರತವು ಬಾಂಗ್ಲಾದೇಶಕ್ಕೆ ಅಗತ್ಯ ಸರಕುಗಳನ್ನು ರಫ್ತು ಮಾಡುವುದು ಅವರ ದೇಶೀಯ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶವಾಗಿರುವುದರಿಂದ, ಭಾರತ ಸರ್ಕಾರದ ರಫ್ತು-ಆಮದು ನೀತಿಯಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಿದಲ್ಲಿ ಮುಂಚಿತವಾಗಿ ತಿಳಿಸಬೇಕು ಎಂದು ಬಾಂಗ್ಲಾದೇಶ ಕಡೆಯವರು ವಿನಂತಿಸಿದರು. ಕೋರಿಕೆಯನ್ನು ಭಾರತದ ಕಡೆಯವರು ಗಮನಿಸಿದರು.

19. ಕೋವಿಡ್-19 ಸಮಯದಲ್ಲಿ ಅಸ್ತಿತ್ವದಲ್ಲಿರುವ ರೈಲು ಮಾರ್ಗಗಳ ಮೂಲಕ ದ್ವಿಪಕ್ಷೀಯ ವ್ಯಾಪಾರಕ್ಕೆ ಅನುಕೂಲವಾಗುವಂತೆ, ಪಕ್ಕದ ಬದಿ ಬಾಗಿಲಿನ ಕಂಟೇನರ್ ಮತ್ತು ಪಾರ್ಸೆಲ್ ರೈಲುಗಳನ್ನು ಬಳಸುವುದೂ ಸೇರಿದಂತೆ ನಿರಂತರ ಪೂರೈಕೆ ಸರಪಳಿಗಳನ್ನು ನಿರ್ವಹಿಸುವಲ್ಲಿ ತೋರಿದ ಸಹಕಾರಕ್ಕಾಗಿ ವಾಣಿಜ್ಯ ಮತ್ತು.ರೈಲ್ವೆ ಅಧಿಕಾರಿಗಳನ್ನು ಇಬ್ಬರೂ ನಾಯಕರು ಶ್ಲಾಘಿಸಿದರು.

20. ದ್ವಿಪಕ್ಷೀಯ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳ ಅಪಾರ ಸಾಮರ್ಥ್ಯವನ್ನು ಗುರುತಿಸಿ, ಉಭಯಪಕ್ಷೀಯ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (ಸಿಇಪಿಎ) ಪ್ರವೇಶಿಸುವ ಸಾಧ್ಯತೆಗಳ ಕುರಿತು ನಡೆಯುತ್ತಿರುವ ಜಂಟಿ ಅಧ್ಯಯನವನ್ನು ತ್ವರಿತವಾಗಿ ತೀರ್ಮಾನಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

21. ವರ್ಷದ ಆರಂಭದಲ್ಲೇ ಭಾರತಬಾಂಗ್ಲಾದೇಶ ಜವಳಿ ಕೈಗಾರಿಕೆ ವೇದಿಕೆಯ ಪ್ರಥಮ ಸಭೆಗೆ ಸ್ವಾಗತಿಸಿದ ನಾಯಕರು ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಸಂಪರ್ಕ ಮತ್ತು ಸಹಯೋಗದ ಮಹತ್ವವನ್ನು ಒತ್ತಿ ಹೇಳಿದ ಅವರು, ಭಾರತ ಸರ್ಕಾರದ ಜವಳಿ ಸಚಿವಾಲಯ ಮತ್ತು ಬಾಂಗ್ಲಾದೇಸದ ಸರ್ಕಾರದ ಜವಳಿ ಮತ್ತು ಸೆಣಬು ಸಚಿವಾಲಯದ ನಡುವಿನ ತಿಳಿವಳಿಕೆ ಒಪ್ಪಂದ ಕುರಿತು ನಡೆಯುತ್ತಿರುವ ಮಾತುಕತೆಗಳನ್ನು ಆಖೈರುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೆಣಬಿನ ಉತ್ಪನ್ನಗಳನ್ನು ರಫ್ತು ಮಾಡಲು ಬಾಂಗ್ಲಾದೇಶದಿಂದ ಭಾರತಕ್ಕೆ ವಿಧಿಸಲಾಗಿದ್ದ ಆಂಟಿ ಡಂಪಿಂಗ್ /ಆಂಟಿ ಸರ್ಕಂವೆಂಷನ್ ಸುಂಕದ ಕುರಿತು ಅವರು ಇತ್ತೀಚೆಗೆ ನಡೆದ ಮಾತುಕತೆಯನ್ನು ಅವರು ಸ್ವಾಗತಿಸಿದರು ಮತ್ತು ಎಡಿಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಗತಿಗಾಗಿ ಸಂಪರ್ಕ

22. ಉಭಯ ರಾಷ್ಟ್ರಗಳ ನಡುವಿನ 1965 ರೈಲ್ವೆ ಸಂಪರ್ಕಗಳ ಪುನಃಸ್ಥಾಪನೆಗೆ ಮುಂದುವರಿದ ಪ್ರಗತಿಯ ಬಗ್ಗೆ ಇಬ್ಬರೂ ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ಹಲ್ಡಿಬಾರಿ (ಭಾರತ) ಮತ್ತು ಚಿಲಹತಿ (ಬಾಂಗ್ಲಾದೇಶ) ನಡುವೆ ಹೊಸದಾಗಿ ಪುನರ್ಸ್ಥಾಪಿಸಲಾದ ರೈಲ್ವೆ ಸಂಪರ್ಕವನ್ನು ಅವರು ಜಂಟಿಯಾಗಿ ಉದ್ಘಾಟಿಸಿದರು ಮತ್ತು ರೈಲು ಸಂಪರ್ಕವು ವ್ಯಾಪಾರ ಮತ್ತು ಜನರ ನಡುವೆ ಎರಡು ಬದಿಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಗುರುತಿಸಿದರು. ಕೋವಿಡ್ ಪರಿಸ್ಥಿತಿ ಸುಧಾರಿಸಿದ ತರುವಾಯ ರೈಲು ಸಂಚಾರಕ್ಕೆ ನಿರ್ಧರಿಸಲಾಯಿತು.

23. ಪ್ರಸಕ್ತ ನಡೆಯುತ್ತಿರುವ ದ್ವಿಪಕ್ಷೀಯ ಸಂಪರ್ಕ ಕ್ರಮಗಳ ಕುರಿತಂತೆ ಅವಲೋಕಿಸಿದ ಉಭಯ ನಾಯಕರು, ಒಳನಾಡು ಜಲ ಸಾರಿಗೆ ಮತ್ತು ವ್ಯಾಪಾರದ ಶಿಷ್ಟಾಚಾರ (ಪಿಐಡಬ್ಲ್ಯುಟಿಟಿ) ಗೆ ಎರಡನೇ ಅನುಬಂಧಕ್ಕೆ ಸಹಿ ಮಾಡುವ ಮೂಲಕ ಪಿಐಡಬ್ಲ್ಯುಟಿಟಿ ಅಡಿಯಲ್ಲಿ ಸೋನಮುರಾ-ದೌಡ್ಕಂಡಿ ಶಿಷ್ಟಾಚಾರ ಮಾರ್ಗದ ಕಾರ್ಯಾಚರಣೆಯನ್ನು ಚಟೋಗ್ರಾಮ್ ಮೂಲಕ ಕೋಲ್ಕತ್ತಾದಿಂದ ಅಗರ್ತಲಾಗೆ ಭಾರತೀಯ ಸರಕುಗಳ ಸಾಗಣೆಯ ಪ್ರಯೋಗಿಕ ಸಂಚಾರವನ್ನು ಆರಂಭಿಸುವುದೂ ಸೇರಿದಂತೆ ಇತ್ತೀಚಿನ ಉಪಕ್ರಮಗಳನ್ನು ಸ್ವಾಗತಿಸಿದರು. ಚಟ್ಟೋಗ್ರಾಮ್ ಮತ್ತು ಮೊಂಗ್ಲಾ ಬಂದರುಗಳ ಮೂಲಕ ಭಾರತೀಯ ಸರಕುಗಳ ಸಾಗಣೆಯನ್ನು ತ್ವರಿತವಾಗಿ ನಿರ್ವಹಿಸಲು ಇಬ್ಬರು ನಾಯಕರು ಸಮ್ಮತಿಸಿದರು.

24. ಎರಡೂ ದೇಶಗಳ ನಡುವೆ ಪ್ರಯಾಣಿಕರು ಮತ್ತು ಸರಕು ಸಾಗಾಟವನ್ನು ಸರಳೀಕರಿಸುವ ಮತ್ತು ಉತ್ತಮ ಸಂಪರ್ಕವನ್ನು ಒದಗಿಸಲು ಸರಕು ಮತ್ತು ಪ್ರಯಾಣಿಕರ ಸಂಚಾರವನ್ನು ಪ್ರಾರಂಭಿಸಲು ಬಾಂಗ್ಲಾದೇಶ, ಭಾರತ ಮತ್ತು ನೇಪಾಳಕ್ಕೆ ಶಕ್ತಗೊಳಿಸುವ ಒಪ್ಪಂದಕ್ಕೆ ಶೀಘ್ರ ಸಹಿ ಹಾಕುವ ಮೂಲಕ,.ಬಿಬಿಐಎನ್ ಮೋಟಾರು ವಾಹನಗಳ ಒಪ್ಪಂದವನ್ನು ಶೀಘ್ರ ಕಾರ್ಯಾಚರಣೆಗೊಳಿಸಲು ಇಬ್ಬರೂ ನಾಯಕರು ಸಮ್ಮತಿಸಿದರು. ನಂತರದ ದಿನಗಳಲ್ಲಿ ಭೂತಾನ್ ಅನ್ನು ಇದಕ್ಕೆ ಸೇರಲು ಅವಕಾಶವಿದೆ

25.ಬಾಂಗ್ಲಾದೇಶದ ಪ್ರಧಾನಮಂತ್ರಿಯವರು ಪ್ರಸಕ್ತ ನಡೆಯುತ್ತಿರುವ ಭಾರತ ಮಯನ್ಮಾರ್ ಥೈಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿ ಯೋಜನೆಯ ಬಗ್ಗೆ ಆಸಕ್ತಿ ತೋರಿಸಿದರು ಮತ್ತು ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ವಲಯಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಯೋಜನೆಯಲ್ಲಿ ಸೇರ್ಪಡೆಯಾಗಲು ಬಾಂಗ್ಲಾದೇಶಕ್ಕೆ ಅವಕಾಶ ನೀಡುವ ಕುರಿತಂತೆ ಭಾರತದ ಬೆಂಬಲವನ್ನು ಕೋರಿದರು. ಇದೇ ಸ್ಫೂರ್ತಿಯೊಂದಿಗೆ ಭಾರತದ ಕಡೆಯವರು ಪಶ್ಚಿಮ ಬಂಗಾಳ (ಹಿಲ್ಲಿ) ಯಿಂದ ಮೇಘಾಲಯ (ಮಹೇಂದ್ರ ಕುಂಜ್)ವರೆಗೆ ಬಾಂಗ್ಲಾದೇಶದ ಮೂಲಕ ಸಂಪರ್ಕಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು.

26. ಅಗರ್ತಲಾ-ಅಖೌರಾದಿಂದ ಪ್ರಾರಂಭವಾಗುವ ಪ್ರತಿ ನೆರೆಯ ರಾಷ್ಟ್ರಗಳಾದ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಕನಿಷ್ಠ ನೇತ್ಯಾತ್ಮಕ ಪಟ್ಟಿಯನ್ನು ಹೊಂದಿರುವ ಕನಿಷ್ಠ ಒಂದು ಭೂ ಬಂದರನ್ನು ಹೊಂದಬೇಕೆಂಬ ತನ್ನ ಮನವಿಯನ್ನು ಭಾರತ ಪುನರುಚ್ಚರಿಸಿತು. ಚಟ್ಟೋಗ್ರಾಮ್ ಬಂದರಿನಿಂದ ಭಾರತದ ಈಶಾನ್ಯಕ್ಕೆ ಸರಕುಗಳನ್ನು ಸಾಗಿಸಲು ಫೆನಿ ಸೇತುವೆ ಒಮ್ಮೆ ಪೂರ್ಣಗೊಂಡ ಬಳಿಕ ಬಾಂಗ್ಲಾದೇಶದ ಟ್ರಕ್‌ ಗಳಿಗೆ ಅದರ ಸೌಲಭ್ಯ ನೀಡಬೇಕೆಂದು ಬಾಂಗ್ಲಾದೇಶ ಕಡೆಯವರು ಪ್ರಸ್ತಾಪಿಸಿದರು.

27. ಉಭಯ ದೇಶಗಳ ನಡುವಿನ ರೋಮಾಂಚಕ ಅಭಿವೃದ್ಧಿ ಸಹಭಾಗಿತ್ವವನ್ನು ದೃಢಪಡಿಸಿದ ಎರಡೂ ಕಡೆಯವರು, ಎಲ್‌..ಸಿ.ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು, ಅವುಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಲು ಬಾಂಗ್ಲಾದೇಶದ ಆರ್ಥಿಕ ಸಂಬಂಧಗಳ ವಿಭಾಗದ ಕಾರ್ಯದರ್ಶಿ ಮತ್ತು ಢಾಕಾದಲ್ಲಿನ ಭಾರತದ ಹೈ ಕಮಿಷನರ್ ನೇತೃತ್ವದಲ್ಲಿ ಇತ್ತೀಚೆಗೆ ರಚಿಸಲಾದ ಉನ್ನತ ಮಟ್ಟದ ನಿಗಾ ಸಮಿತಿಯ ಸಕ್ರಿಯ ಕಾರ್ಯಾಚರಣೆಯ ಬಗ್ಗೆ ಒತ್ತಿ ಹೇಳಿದರು.

28. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಎರಡೂ ಕಡೆ ಪ್ರಯಾಣಿಕರ ತುರ್ತು ಅವಶ್ಯಕತೆಗಳಿಗೆ ಅನುಕೂಲವಾಗುವಂತೆ ಎರಡು ಕಡೆಯಿಂದ ತಾತ್ಕಾಲಿಕ ವಾಯು ಸಂಚಾರ ಬಬಲ್ ಪ್ರಾರಂಭವಾಗಿರುವುದನ್ನು ಎರಡೂ ಕಡೆಯವರು ತೃಪ್ತಿಯಿಂದ ಗಮನಿಸಿದರು. ಭೂ ಬಂದರುಗಳ ಮೂಲಕ ನಿಯಮಿತ ಪ್ರಯಾಣವನ್ನು ಶೀಘ್ರವಾಗಿ ಪುನರಾರಂಭಿಸುವಂತೆ ಬಾಂಗ್ಲಾದೇಶ ಕಡೆಯವರು ಭಾರತದ ಕಡೆಯವರಿಗೆ ಮನವಿ ಮಾಡಿದರು

ಜಲ ಸಂಪನ್ಮೂಲ, ವಿದ್ಯುತ್ ಮತ್ತು ಇಂಧನ ಕ್ಷೇತ್ರದಲ್ಲಿ ಸಹಕಾರ:

29. ಎರಡೂ ಸರ್ಕಾರಗಳು 2011 ರಲ್ಲಿ ಒಪ್ಪಿದಂತೆ ತೀಸ್ತಾ ನೀರನ್ನು ಹಂಚಿಕೊಳ್ಳಲು ಮಧ್ಯಂತರ ಒಪ್ಪಂದಕ್ಕೆ ಶೀಘ್ರ ಸಹಿ ಹಾಕುವ ಅಗತ್ಯವನ್ನು ಪ್ರಧಾನಮಂತ್ರಿ ಶೇಖ್ ಹಸೀನಾ ಒತ್ತಿ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಪ್ರಾಮಾಣಿಕ ಬದ್ಧತೆ ಮತ್ತು ನಿಟ್ಟಿನಲ್ಲಿ ಭಾರತ ಸರ್ಕಾರದ ನಿರಂತರ ಪ್ರಯತ್ನಗಳನ್ನು ಪುನರುಚ್ಚರಿಸಿದರು.

30. ಮನು, ಮುಹುರಿ, ಖೋವಾಯಿ, ಗೌಮತಿ, ಧರ್ಲಾ ಮತ್ತು ದುಧ್‌ ಕುಮಾರ್ ಎಂಬ ಆರು ಜಂಟಿ ನದಿಗಳ ನೀರನ್ನು ಹಂಚಿಕೊಳ್ಳುವ ಕುರಿತು ಮಧ್ಯಂತರ ಒಪ್ಪಂದದ ಚೌಕಟ್ಟಿನ ಆರಂಭಿಕ ತೀರ್ಮಾನದ ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದರು.

31. ಕೌಶಿಯಾರಾ ನದಿ ನೀರನ್ನು ನೀರಾವರಿ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ರಹಿಂಪುರ ಖಲ್‌ ಉಳಿದ ಭಾಗದ ಭೂಮಿ ಅಗೆಯುವ ಕಾಮಗಾರಿ ಮಾಡಲು ಅನುಮತಿ ನೀಡುವಂತೆ ತಮ್ಮ ಸಂಬಂಧಪಟ್ಟ ಗಡಿ ಅಧಿಕಾರಿಗಳಿಗೆ ತಿಳಿಸುವಂತೆ ಬಾಂಗ್ಲಾದೇಶ ಕಡೆಯವರು ಕೋರಿದರು. ಕೌಶಿಯಾರ್ ನದಿ ನೀರನ್ನು ಹಂಚಿಕೊಳ್ಳುವ ಬಗ್ಗೆ ಒಪ್ಪಂದ /ಕರಾರಿಗೆ ಸಹಿ ಬಾಕಿ ಉಳಿದಿದ್ದು, ಕೌಶಿಯಾರಾ ನದಿಯಿಂದ ಎರಡೂ ಕಡೆಯವರು ನೀರನ್ನು ಪಡೆದುಕೊಳ್ಳುವುದರ ಮೇಲ್ವಿಚಾರಣೆ ಮಾಡಲು ಉಭಯ ದೇಶಗಳ ನಡುವೆ ಸಹಿ ಹಾಕಬೇಕಾಗಿರುವ ಉದ್ದೇಶಿತ ತಿಳಿವಳಿಕೆ ಒಪ್ಪಂದಕ್ಕೆ ಶೀಘ್ರ ಒಪ್ಪಿಗೆ ನೀಡುವಂತೆ ಕೋರಲಾಯಿತು. ಉಭಯ ನಾಯಕರು ನದಿಗಳ ಜಂಟಿ ಆಯೋಗದ ಸಕಾರಾತ್ಮಕ ಕೊಡುಗೆಯನ್ನು ನೆನಪಿಸಿಕೊಂಡರು ಮತ್ತು ಮುಂದಿನ ಸುತ್ತಿನ ಕಾರ್ಯದರ್ಶಿಗಳ ಮಟ್ಟದ ಜೆಆರ್‌.ಸಿ ಸಭೆಯನ್ನು ಶೀಘ್ರವಾಗಿ ಎದುರು ನೋಡುತ್ತಿದ್ದಾರೆ.

32. ಖಾಸಗಿ ವಲಯದ ನಡುವೆ ಸೇರಿದಂತೆ ವಿದ್ಯುತ್ ಮತ್ತು ಇಂಧನ ಕ್ಷೇತ್ರದಲ್ಲಿ ದೃಢವಾದ ಸಹಕಾರವನ್ನು ಎರಡೂ ಕಡೆಯವರು ವ್ಯಕ್ತಪಡಿಸಿದರು. ಭಾರತ-ಬಾಂಗ್ಲಾದೇಶ ಸ್ನೇಹದ ಕೊಳವೆ ಮಾರ್ಗ, ಮೈಟ್ರೀ ಸೂಪರ್ ಶಾಖೋತ್ಪನ್ನ ವಿದ್ಯುತ್ ಯೋಜನೆ ಮತ್ತು ಇತರ ಯೋಜನೆಗಳು ಸೇರಿದಂತೆ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಸಮ್ಮತಿಸಲಾಯಿತು. ಹೈಡ್ರೋಕಾರ್ಬನ್ ವಲಯದಲ್ಲಿ ಸಹಕಾರದ ಕುರಿತು ತಿಳಿವಳಿಕೆಯ ಚೌಕಟ್ಟಗೆ ಸಹಿ ಮಾಡುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು, ಇದು ಹೂಡಿಕೆಗಳು, ತಂತ್ರಜ್ಞಾನ ವರ್ಗಾವಣೆ, ಜಂಟಿ ಅಧ್ಯಯನಗಳು, ತರಬೇತಿ ಮತ್ತು ಹೈಡ್ರೋಕಾರ್ಬನ್ ಸಂಪರ್ಕವನ್ನು ಉತ್ತೇಜಿಸುವ ಮೂಲಕ ಇಂಧನ ಸಂಪರ್ಕಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೈವಿಕ ಇಂಧನಗಳನ್ನು ಒಳಗೊಂಡಂತೆ ಇಂಧನ ದಕ್ಷತೆ ಮತ್ತು ಶುದ್ಧ ಇಂಧನ ಸಹಕಾರವನ್ನು ಹೆಚ್ಚಿಸಲು ಸಹ ಒಪ್ಪಲಾಯಿತು. ಹಸಿರು, ಸ್ವಚ್ಛ, ನವೀಕರಿಸಬಹುದಾದ ಇಂಧನ ಮೂಲಗಳತ್ತ ಸಾಗಲು ಎರಡೂ ದೇಶಗಳ ಬದ್ಧತೆಗೆ ಅನುಗುಣವಾಗಿ, ನೇಪಾಳ ಮತ್ತು ಭೂತಾನ್ ಸೇರಿದಂತೆ ಉಪಪ್ರದೇಶದ ಸಹಕಾರವನ್ನು ಬಲಪಡಿಸಲು ಒಪ್ಪಲಾಯಿತು. ವಿದ್ಯುತ್ ಮತ್ತು ಇಂಧನ ಸಂಪರ್ಕ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ಕಡೆಯವರು ಒಪ್ಪಿದರು.


ಮ್ಯಾನ್ಮಾರ್‌ ರಾಖೈನ್ ರಾಜ್ಯದಿಂದ ಬಲವಂತವಾಗಿ ಸ್ಥಳಾಂತರಗೊಂಡ ಜನರು

33.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಯನ್ಮಾರ್ ರಾಖೈನ್ ರಾಜ್ಯದಿಂದ ಬಲವಂತವಾಗಿ ಸ್ಥಳಾಂತರಗೊಂಡ 1.1 ದಶಲಕ್ಷ ಜನರಿಗೆ ಮಾನವೀಯ ನೆರವು ಒದಗಿಸಿ, ಆಶ್ರಯ ನೀಡಿರುವ ಬಾಂಗ್ಲಾದೇಶದ ಔದಾರ್ಯವನ್ನು ಶ್ಲಾಘಿಸಿದರು. ಅವರ ಸುರಕ್ಷಿತ, ತ್ವರಿತ ಮತ್ತು ಸುಸ್ಥಿರ ಮರಳುವಿಕೆಯ ಮಹತ್ವವನ್ನು ಇಬ್ಬರೂ ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯನಾಗಿ ಭಾರತ ಆಯ್ಕೆಯಾಗಿರುವುದಕ್ಕೆ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಅಭಿನಂದನೆ ಸಲ್ಲಿಸಿದರು. ಬಲವಂತವಾಗಿ ಸ್ಥಳಾಂತರಗೊಂಡ ರೋಹಿಂಗ್ಯಾಗಳನ್ನು ಮ್ಯಾನ್ಮಾರ್‌ ಗೆ ವಾಪಸ್ ಕಳುಹಿಸಲು ಭಾರತವು ಸಹಾಯ ಮಾಡುತ್ತದೆ ಎಂಬ ಬಾಂಗ್ಲಾದೇಶದ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.

ವಲಯ ಮತ್ತು ವಿಶ್ವದ ಪಾಲುದಾರರು

34. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾವಣೆಯಲ್ಲಿ ಭಾರತಕ್ಕೆ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಶೇಖ್ ಹಸೀನಾ ಅವರಿಗೆ ಧನ್ಯವಾದ ಅರ್ಪಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆರಂಭಿಕ ಸುಧಾರಣೆಗಳನ್ನು ಸಾಧಿಸಲು, ಹವಾಮಾನ ಬದಲಾವಣೆಯನ್ನು ಎದುರಿಸಲು, ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌.ಡಿ.ಜಿ) ಸಾಧನೆ ಮತ್ತು ವಲಸಿಗರ ಹಕ್ಕುಗಳ ರಕ್ಷಣೆಗೆ ಒಟ್ಟಾಗಿ ಶ್ರಮಿಸಲು ಎರಡೂ ದೇಶಗಳು ಸಮ್ಮತಿಸಿದವು. 2030 ಕಾರ್ಯಕ್ರಮ ಪಟ್ಟಿಯಲ್ಲಿ ಪ್ರತಿಪಾದಿಸಿರುವಂತೆ ಎಸ್‌.ಡಿ.ಜಿ.ಗಳ ಅನುಷ್ಠಾನದ ಸಾಧನಗಳನ್ನು ಖಾತ್ರಿಪಡಿಸಿಕೊಳ್ಳಲು ಜಾಗತಿಕ ಸಹಭಾಗಿತ್ವದ ಅಡಿಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಬದ್ಧತೆಗಳನ್ನು ಪೂರೈಸುವ ಅಗತ್ಯವನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು.

35. ಕೋವಿಡ್- 19 ಪ್ರಾರಂಭವಾದ ನಂತರ ಪ್ರಾದೇಶಿಕ ಮತ್ತು ಜಾಗತಿಕ ಆರ್ಥಿಕ ಸನ್ನಿವೇಶಗಳನ್ನು ಗಮನಿಸಿ, ಪ್ರಾದೇಶಿಕ ಸಂಘಟನೆಗಳಾದ ಸಾರ್ಕ್ ಮತ್ತು ಬಿಮ್‌ ಸ್ಟೆಕ್ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಉಭಯ ನಾಯಕರು ಪ್ರತಿಪಾದಿಸಿದರು. ಕೋವಿಡ್-19 ಏಕಾಏಕಿ 2020 ಮಾರ್ಚ್‌ ನಲ್ಲಿ ಸಾರ್ಕ್ ನಾಯಕರ ವಿಡಿಯೋ ಸಮ್ಮೇಳನವನ್ನು ಕರೆದಿದ್ದಕ್ಕಾಗಿ ಬಾಂಗ್ಲಾದೇಶ ಪ್ರಧಾನಮಂತ್ರಿ ಭಾರತದ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ದಕ್ಷಿಣ ಏಷ್ಯಾ ವಲಯದಲ್ಲಿ ಜಾಗತಿಕ ಸಾಂಕ್ರಾಮಿಕದ ಪರಿಣಾಮಗಳನ್ನು ನಿಗ್ರಹಿಸಲು ಸಾರ್ಕ್ ತುರ್ತು ಸ್ಪಂದನಾ ನಿಧಿ ರೂಪಿಸುವ ಭಾರತದ ಪ್ರಧಾನಮಂತ್ರಿಯರ ಪ್ರಸ್ತಾಪಕ್ಕೆ ಅವರು ಧನ್ಯವಾದ ಅರ್ಪಿಸಿದರು. ಸಾರ್ಕ್ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಬಾಂಗ್ಲಾದೇಶ ಪ್ರಧಾನಮಂತ್ರಿ ಪುನರುಚ್ಚರಿಸಿ, ನಿಟ್ಟಿನಲ್ಲಿ ಬೆಂಬಲ ಕೋರಿದರು. 2021 ರಲ್ಲಿ ಬಾಂಗ್ಲಾದೇಶ ಐಒಆರ್. ಅಧ್ಯಕ್ಷತೆಯನ್ನು ವಹಿಸಲಿದ್ದು ಹೆಚ್ಚಿನ ಸಮುದ್ರ ಸುರಕ್ಷತೆ ಮತ್ತು ಸುರಕ್ಷತೆಗಾಗಿ ಕೆಲಸ ಮಾಡಲು ಭಾರತದ ಬೆಂಬಲವನ್ನು ಕೋರಿದೆ. ಪ್ರಸಕ್ತ ಅಧಿಕಾರಾವಧಿಯಲ್ಲಿ ಹವಾಮಾನ ಸೂಕ್ಷ್ಮ ವೇದಿಕೆಯಲ್ಲಿ ಬಾಂಗ್ಲಾದೇಶದ ಅಧ್ಯಕ್ಷ ಸ್ಥಾನವನ್ನು ಪ್ರಧಾನಮಂತ್ರಿ ಮೋದಿ ಶ್ಲಾಘಿಸಿದರು.

36. ಪ್ರಧಾನಮಂತ್ರಿ ಶೇಖ್ ಹಸೀನಾ ನವ ಅಭಿವೃದ್ಧಿ ಬ್ಯಾಂಕ್ ಕಾರ್ಯವನ್ನು ಶ್ಲಾಘಿಸಿ, ಸಂಸ್ಥೆ ಸೇರಲು ಬಾಂಗ್ಲಾದೇಶಕ್ಕೆ ಆಹ್ವಾನ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದರು.ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಬಹು ವಲಯಗಳಲ್ಲಿ ಬ್ಯಾಂಕ್ ಕಾರ್ಯವನ್ನು ಸ್ವಾಗತಿಸಿದ ಅವರು, ಉಪಕ್ರಮದ ಭಾಗವಾಗುವ ಬಾಂಗ್ಲಾದೇಶದ ಇಂಗಿತವನ್ನೂ ವ್ಯಕ್ತಪಡಿಸಿದರು.

· ದ್ವಿಪಕ್ಷೀಯ ದಸ್ತಾವೇಜುಗಳಿಗೆ ಅಂಕಿತ ಮತ್ತು ಯೋಜನೆಗಳ ಉದ್ಘಾಟನೆ

37. ಸಂದರ್ಭದಲ್ಲಿ ಕೆಳಕಂಡ ದ್ವಿಪಕ್ಷೀಯ ದಸ್ತಾವೇಜುಗಳಿಗೆ ಅಂಕಿತ ಹಾಕಲಾಯಿತು ಮತ್ತು ಭಾರತ ಮತ್ತು ಬಾಂಗ್ಲಾದೇಶದ ಅಧಿಕಾರಿಗಳ ನಡುವೆ ವಿನಿಮಯವೂ ನಡೆಯಿತು:
ಹೈಡ್ರೋಕಾರ್ಬನ್ ವಲಯದಲ್ಲಿನ ಸಹಕಾರ ಕುರಿತು ಚೌಕಟ್ಟು ತಿಳಿವಳಿಕೆ ಒಪ್ಪಂದ (ಎಫ್‌..ಯು);

  • ಮಧ್ಯ-ಗಡಿಯಲ್ಲಿ ಆನೆಗಳ ಸಂರಕ್ಷಣೆ ಕುರಿತ ಶಿಷ್ಟಾಚಾರ;
  • ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸಾರ್ವಜನಿಕ ವಲಯ ಸಂಸ್ಥೆಗಳ ಮೂಲಕ ಹೆಚ್ಚಿನ ಪ್ರಭಾವದ ಸಮುದಾಯ ಅಭಿವೃದ್ಧಿ ಯೋಜನೆಗಳ (ಎಚ್‌..ಸಿ.ಡಿ.ಪಿ) ಅನುಷ್ಠಾನಕ್ಕೆ ಭಾರತೀಯ ಅನುದಾನ ಸಹಾಯದ ಬಗ್ಗೆ ತಿಳಿವಳಿಕೆ ಒಪ್ಪಂದ;
  • ಬ್ಯಾರಿಶಾಲ್ ನಗರ ಪಾಲಿಕೆಗಾಗಿ ಲ್ಯಾಮ್‌ ಚೋರಿ ಪ್ರದೇಶದಲ್ಲಿ ಸಲಕರಣೆಗಳ ಪೂರೈಕೆ ಮತ್ತು ಕಸ / ಘನತ್ಯಾಜ್ಯ ವಿಲೇವಾರಿ ಮೈದಾನದ ಸುಧಾರಣೆ ಕುರಿತು ತಿಳಿವಳಿಕೆ ಒಪ್ಪಂದ;
  • ಭಾರತ-ಬಾಂಗ್ಲಾದೇಶದ ಸಿಇಒಗಳ ವೇದಿಕೆಯ ಉಲ್ಲೇಖದ ನಿಯಮಗಳು;
  • ಬಾಂಗ್ಲಾದೇಶದ ಢಾಕಾದ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಭಾರತದ ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ನಡುವೆ ತಿಳಿವಳಿಕೆ ಒಪ್ಪಂದ; ಮತ್ತು
  • ಕೃಷಿ ಕ್ಷೇತ್ರದಲ್ಲಿ ಸಹಕಾರ ಕುರಿತು ಒಪ್ಪಂದ.

ಸಂದರ್ಭದಲ್ಲಿ ಕೆಳಕಂಡ ದ್ವಿಪಕ್ಷೀಯ ಅಭಿವೃದ್ಧಿ ಪಾಲುದಾರಿಕೆ ಯೋಜನೆಗಳ ಉದ್ಘಾಟನೆಯೂ ನಡೆಯಿತು:

  • ರಾಜ್‌ ಶಾಹಿ ನಗರದಲ್ಲಿ ಸೌಂದರ್ಯೀಕರಣ ಮತ್ತು ನಗರ ಅಭಿವೃದ್ಧಿ ಯೋಜನೆ;
  • ಖುಲ್ನಾದಲ್ಲಿ ಖಲೀಶ್ಪುರ ಕೊಲಿಜಿಯೇಟ್ ಬಾಲಕಿಯರ ಶಾಲೆಯ ನಿರ್ಮಾಣ;
    38.
    ಹೊಸ ಸಾಮಾನ್ಯ ಸ್ಥಿತಿಯ ನಡುವೆಯೂ ವ್ಯವಸ್ಥೆ ಮಾಡಿದ್ದಕ್ಕಾಗಿ ಇಬ್ಬರೂ ಪ್ರಧಾನಮಂತ್ರಿಗಳು ಪರಸ್ಪರ ಧನ್ಯವಾದ ಅರ್ಪಿಸಿದರು.

39. 2021 ಮಾರ್ಚ್ ನಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯದ 50ನೇ ವರ್ಷಗಳ ಭಾರತಬಾಂಗ್ಲಾ ದೇಶದ ಬಾಂಧವ್ಯದ 50 ವರ್ಷಗಳ ಆಚರಣೆಯಲ್ಲಿ ಖುದ್ದು ಪಾಲ್ಗೊಳ್ಳಲು ಬಾಂಗ್ಲಾ ದೇಶಕ್ಕೆ ಭೇಟಿ ನೀಡುವಂತೆ ನೀಡಿದ ಆಹ್ವಾನ ಮನ್ನಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

***


(Release ID: 1681679) Visitor Counter : 368