ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ; 3.32 ಲಕ್ಷಕ್ಕೆ ಕುಸಿತ


ಕಳೆದ 17 ದಿನಗಳಿಂದೀಚೆಗೆ ಪ್ರತಿ ದಿನ 40 ಸಾವಿರಕ್ಕಿಂತ ಕಡಿಮೆ ಪ್ರಕರಣ

ಕಳೆದ 11 ದಿನಗಳಿಂದ ಪ್ರತಿ ದಿನ ಸೋಂಕಿತರ ಸಾವಿನ ಪ್ರಮಾಣ 500 ಕ್ಕೂ ಕಡಿಮೆ   

Posted On: 16 DEC 2020 12:55PM by PIB Bengaluru

ಭಾರತದಲ್ಲಿ ಒಟ್ಟು ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ದೇಶದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,32,002 ಕುಸಿದಿದೆ. ಒಟ್ಟಾರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 3.34ಕ್ಕೆ ಇಳಿದಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 26,382 ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಹೊಸದಾಗಿ 33,813 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ನಿವ್ವಳವಾಗಿ 7,818 ಇಳಿಕೆಯಾಗಿದೆ.

ಭಾರತದಲ್ಲಿ ಕಳೆದ 17 ದಿನಗಳಿಂದೀಚೆಗೆ ಪ್ರತಿ ದಿನ 40,000ಕ್ಕಿಂತ ಕಡಿಮೆ ಹೊಸ ಪ್ರಕರಣ ದಾಖಲಾಗುತ್ತಿದೆ.

ಭಾರತದಲ್ಲಿ ಕಳೆದ 7 ದಿನಗಳಿಂದೀಚೆಗೆ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ ಪ್ರತಿ ಮಿಲಿಯನ್ ಜನಸಂಖ್ಯೆಗೆ ಇಡೀ ವಿಶ್ವದಲ್ಲೇ ಅತಿ ಕಡಿಮೆ (147) ಇದೆ.

ಒಟ್ಟಾರೆ ಗುಣಮುಖರಾದವರ ಸಂಖ್ಯೆ 94.5 ಲಕ್ಷ(9,456,449)  ದಾಟಿದೆ. ಚೇತರಿಕೆಯ ಪ್ರಮಾಣ ಕೂಡ ಹೆಚ್ಚಾಗಿ ಶೇ.95.21 ತಲುಪಿದೆ.

ಹೊಸದಾಗಿ ಗುಣಮುಖವಾಗಿರುವ  ಪ್ರಕರಣಗಳಲ್ಲಿ ಶೇ. 76.43 ರಷ್ಟು ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಕೇರಳದಲ್ಲಿ ಒಂದೇ ದಿನ ಹೊಸದಾಗಿ ಗರಿಷ್ಠ ಸಂಖ್ಯೆಯ 5,066 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 4,395 ಸೋಂಕಿತರು ಗುಣಮುಖರಾದರೆ ಪಶ್ಚಿಮ ಬಂಗಾಳದಲ್ಲಿ 2,965 ಸೋಂಕಿತರು ಗುಣಮುಖರಾಗಿದ್ದಾರೆ.

ಹೊಸ ಪ್ರಕರಣಗಳಲ್ಲಿ ಶೇ.75.84 ರಷ್ಟು ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಕೇರಳದಲ್ಲಿ ಗರಿಷ್ಠ ಸಂಖ್ಯೆಯ 5,218 ಹೊಸ ಪ್ರಕರಣಗಳು ವರದಿಯಾಗಿದ್ದು, ಆನಂತರ ಕ್ರಮವಾಗಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ 3,442 ಮತ್ತು 2,289 ಹೊಸ ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 387 ಸೋಂಕಿತರು ಸಾವನ್ನಪ್ಪಿರುವುದು ವರದಿಯಾಗಿದೆ.

ಹೊಸದಾಗಿ ಸಾವನ್ನಪ್ಪಿರುವ ಪ್ರಕರಣಗಳಲ್ಲಿ ಶೇ.75.19ರಷ್ಟು ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು. ಮಹಾರಾಷ್ಟ್ರದಲ್ಲಿ ಅಧಿಕ ಸಂಖ್ಯೆಯ ಸೋಂಕಿತರ ಸಾವು(70) ಸಂಭವಿಸಿದೆ. ಆನಂತರ ಕ್ರಮವಾಗಿ ಪಶ್ಚಿಮಬಂಗಾಳ ಮತ್ತು ದೆಹಲಿಯಲ್ಲಿ 45 ಮತ್ತು 41 ಸೋಂಕಿತರು ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಪ್ರತಿ ದಿನ ಸೋಂಕಿತರ ಸಾವಿನ ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ 11 ದಿನಗಳಲ್ಲಿ ಪ್ರತಿ ದಿನ 500ಕ್ಕಿಂತ ಕಡಿಮೆ ಸೋಂಕಿತರು ಸಾವನ್ನಪ್ಪಿರುವುದು ವರದಿಯಾಗಿದೆ.

ಕಳೆದ 7 ದಿನಗಳಿಂದ ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೊಸದಾಗಿ ಸಾವನ್ನಪ್ಪುತ್ತಿರುವವರ ಪ್ರಮಾಣ(2) ಇದ್ದು, ಇದು ವಿಶ್ವದಲ್ಲೇ ಅತಿ ಕಡಿಮೆಯಾಗಿದೆ.  

***


(Release ID: 1681076) Visitor Counter : 197