ಪ್ರಧಾನ ಮಂತ್ರಿಯವರ ಕಛೇರಿ

ಕುವೈತ್ ನ ಪ್ರಧಾನಮಂತ್ರಿಯಾಗಿ ಮರು ನೇಮಕಗೊಂಡಿರುವ ಶೇಕ್ ಸಬ್ಹಾ ಅಲ್-ಖಾಲೆದ್ ಆಲ್-ಅಹ್ಮದ್ ಅಲ್-ಸಭಾ ಅವರಿಗೆ ಪ್ರಧಾನಿ ಅಭಿನಂದನೆ

Posted On: 08 DEC 2020 10:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್ ರಾಷ್ಟ್ರದ ನೂತನ ಪ್ರಧಾನಮಂತ್ರಿಯಾಗಿ ಮರು ನೇಮಕಗೊಂಡಿರುವ ಗೌರವಾನ್ವಿತ  ಶೇಕ್ ಸಬ್ಹಾ ಅಲ್-ಖಾಲೆದ್ ಆಲ್-ಅಹ್ಮದ್ ಅಲ್-ಸಭಾ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿಡಿಸೆಂಬರ್ 5ರಂದು ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗಳಲ್ಲಿ ಜಯಗಳಿಸಿ ಕುವೈತ್ ರಾಷ್ಟ್ರದ ಪ್ರಧಾನಮಂತ್ರಿಯಾಗಿ ಮರು ನೇಮಕಗೊಂಡಿರುವ ಗೌರವಾನ್ವಿತ  ಶೇಕ್ ಸಬ್ಹಾ ಅಲ್-ಖಾಲೆದ್ ಆಲ್-ಅಹ್ಮದ್ ಅಲ್-ಸಭಾ ಅವರಿಗೆ ಅಭಿನಂದನೆಗಳು.

ಕುವೈತ್ ಅಮೀರರೂ ಆಗಿರುವ ಗೌರವಾನ್ವಿತ  ಶೇಕ್ ಸಬ್ಹಾ ಅಲ್-ಖಾಲೆದ್ ಆಲ್-ಅಹ್ಮದ್ ಅಲ್-ಸಭಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ನಮ್ಮ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ ಮುಂದುವರಿಯಲಿವೆ ಮತ್ತು ಮತ್ತಷ್ಟು ಬಲವರ್ಧನೆಯಾಗಲಿವೆ ಎಂಬ ವಿಶ್ವಾಸ ನನಗಿದೆ.‘’ಎಂದು ಹೇಳಿದ್ದಾರೆ.

***



(Release ID: 1679599) Visitor Counter : 69