ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ನಿಯಂತ್ರಣದಲ್ಲಿ ಭಾರತ ಮಹತ್ವದ ಮೈಲಿಗಲ್ಲು – 140 ದಿನಗಳ ನಂತರ ಸಕ್ರಿಯ ಪ್ರಕರಣಗಳು 4 ಲಕ್ಷಕ್ಕಿಂತ ಕಡಿಮೆ


 ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೊಸ ಸೋಂಕು ಪ್ರಕರಣ ಮತ್ತು ಮರಣ ಪ್ರಮಾಣ ವಿಶ್ವದಲ್ಲೇ ಅತಿ ಕಡಿಮೆ

157 ದಿನಗಳ ನಂತರ ಪ್ರತಿ ದಿನ ಮರಣ ಪ್ರಮಾಣ 400ಕ್ಕಿಂತ ಕಡಿಮೆ

Posted On: 07 DEC 2020 11:06AM by PIB Bengaluru

ಭಾರತ ಕೋವಿಡ್ ನಿಯಂತ್ರಣದಲ್ಲಿ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭಾರತದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಇಂದು 3,96,729ಕ್ಕೆ ಕುಸಿದಿದೆ. ಶೇಕಡವಾರು ಲೆಕ್ಕಹಾಕಿದರೆ ಪ್ರಮಾಣ ಒಟ್ಟು ಪ್ರಕರಣಗಳಲ್ಲಿ ಶೇಕಡ 4.1ರಷ್ಟು ಮಾತ್ರ. 140 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ ಇಷ್ಟೊಂದು ಕಡಿಮೆಯಾಗಿದೆ. 2020ರ ಜುಲೈ 20ರಂದು ಒಟ್ಟು ಸಕ್ರಿಯ ಪ್ರಕರಣಗಳು 3,90,459 ಇದ್ದವು.  

http://static.pib.gov.in/WriteReadData/userfiles/image/image001ZHQY.jpg

ಕಳೆದ ಹತ್ತು ದಿನಗಳಿಂದೀಚೆಗೆ ಸಕ್ರಿಯ ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಿಗಿಂತ ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳೇ ಅಧಿಕವಾಗಿವೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 32,981 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದರೆ, 39,109 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳು ಮತ್ತು ಹೊಸದಾಗಿ ಗುಣಮುಖರಾಗಿರುವ ಪ್ರಕರಣಗಳ ನಡುವಿನ ವ್ಯತ್ಯಾಸ 6,128 ಇದ್ದು, ಕಳೆದ ಕಳೆದ 24 ಗಂಟೆಗಳಿಂದೀಚೆಗೆ ಒಟ್ಟು ಸಕ್ರಿಯ ಪ್ರಕರಣಗಳ ಪ್ರಮಾಣದಲ್ಲಿ ನಿವ್ವಳ 6,519 ಪ್ರಕರಣ ಇಳಿಕೆಯಾಗಿವೆ.

ಪ್ರತಿ ಮಿಲಿಯನ್ ಜನಸಂಖ್ಯೆಗೆ ಭಾರತದಲ್ಲಿ ದಾಖಲಾಗುತ್ತಿರುವ ಹೊಸ ಪ್ರಕರಣಗಳು ವಿಶ್ವದಲ್ಲೇ ಅತಿ ಕಡಿಮೆಯಾಗಿದ್ದು, ಕಳೆದ ಏಳು ದಿನಗಳಿಂದ ಇದೇ ಪ್ರವೃತ್ತಿ ಮುಂದುವರಿದಿದೆ. ಕಳೆದ ಏಳು ದಿನಗಳಿಂದ ಪ್ರಮಾಣ 182 ಇದೆ.

http://static.pib.gov.in/WriteReadData/userfiles/image/image002M42I.jpg

ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳ ಪ್ರಮಾಣ ಭಾರತದಲ್ಲಿ ಐತಿಹಾಸಿಕವಾಗಿ ಕಡಿಮೆ ಇದೆ. ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 6,988 ಹೊಸ ಪ್ರಕರಣಗಳಿದ್ದರೆ, ವಿಶ್ವದ ಸರಾಸರಿ 8,438 ಇದೆ.

http://static.pib.gov.in/WriteReadData/userfiles/image/image0034KWW.jpg

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳು ಮತ್ತು ಹೊಸ ಸೋಂಕು ಪ್ರಕರಣಗಳ ನಡುವಿನ ವ್ಯತ್ಯಾಸ ಸುಧಾರಣೆಯಾಗಿದ್ದು, ಒಟ್ಟು ಚೇತರಿಕೆಯ ಪ್ರಮಾಣ ಇಂದು ಶೇ. 94.45 ರಷ್ಟಿದೆ.

ಸದ್ಯ ಒಟ್ಟು ಗುಣಮುಖರಾಗಿರುವವರ ಸಂಖ್ಯೆ  91,39,901 ಇದೆ. ಗುಣಮುಖವಾಗಿರುವ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ 87 ಲಕ್ಷ ಇಂದು (87,43,172) ದಾಟಿದೆ.

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ.81.20ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯ ಪ್ರಕರಣಗಳು ಅಂದರೆ ಹೊಸದಾಗಿ  7,486 ಸೋಂಕಿತರು ಗುಣಮುಖರಾಗಿದ್ದಾರೆ. ನಂತರ ಕೇರಳದಲ್ಲಿ 5,217, ದೆಹಲಿಯಲ್ಲಿ  4,622  ಸೋಂಕಿತರು  ಹೊಸದಾಗಿ ಗುಣಮುಖರಾಗಿದ್ದಾರೆ. 

http://static.pib.gov.in/WriteReadData/userfiles/image/image004IJGM.jpg

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.76.20ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಕೇರಳದಲ್ಲಿ ದಿನ ಗರಿಷ್ಠ ಸಂಖ್ಯೆಯ 4,777 ಪ್ರಕರಣ ವರದಿಯಾಗಿವೆ. ಆ ನಂತರ ಮಹಾರಾಷ್ಟ್ರದಲ್ಲಿ 4,757 ಮತ್ತು ಪಶ್ಚಿಮ ಬಂಗಾಳದಲ್ಲಿ 3,143 ಹೊಸ ಪ್ರಕರಣ ವರದಿಯಾಗಿವೆ.

http://static.pib.gov.in/WriteReadData/userfiles/image/image0052MCK.jpg

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 391 ಸೋಂಕಿತರು ಸಾವನ್ನಪ್ಪಿದ್ದಾರೆ.

ಹೊಸದಾಗಿ ಸಾವನ್ನಪ್ಪಿರುವ ಪ್ರಕರಣಗಳಲ್ಲಿ ಶೇ.75.07ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು. ದೆಹಲಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸೋಂಕಿತರ ಸಾವು(69) ಸಂಭವಿಸಿವೆ. ಆನಂತರ ಪಶ್ಚಿಮಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಕ್ರಮವಾಗಿ 46 ಮತ್ತು 40 ಸಾವುಗಳು ಸಂಭವಿಸಿವೆ.

http://static.pib.gov.in/WriteReadData/userfiles/image/image006DZX2.jpg

ಕಳೆದ ಒಂದು ವಾರದಿಂದೀಚೆಗೆ ಪ್ರತಿ ಮಿಲಿಯನ್ ಜನಸಂಖ್ಯೆಗೆ ಸೋಂಕಿತರ ಸಾವು ಪ್ರಮಾಣ ಇಳಿಕೆಯಾಗುತ್ತಿದ್ದು, ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಅಂದರೆ ಮೂರು ಸಾವುಗಳು ಸಂಭವಿಸುತ್ತಿವೆ.

http://static.pib.gov.in/WriteReadData/userfiles/image/image007S5VU.jpg

ಒಟ್ಟಾರೆ ಅಂಕಿ-ಅಂಶಗಳ ಕೋಷ್ಠಕಗಳನ್ನು ಆಧರಿಸಿದರೆ, ವಿಶ್ವದಲ್ಲಿರುವ ಪ್ರತಿ ಮಿಲಿಯನ್ ಜನಸಂಖ್ಯೆಯ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಭಾರತದಲ್ಲಿ ಅತಿ ಕಡಿಮೆ (101) ಇದೆ.

http://static.pib.gov.in/WriteReadData/userfiles/image/image008FIEK.jpg

***



(Release ID: 1678828) Visitor Counter : 217