ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್ 4ರಂದು ಐಐಟಿ 2020 ಜಾಗತಿಕ ಶೃಂಗಸಭೆ ಉದ್ದೇಶಿಸಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 03 DEC 2020 9:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ಡಿಸೆಂಬರ್ 4ರಂದು ರಾತ್ರಿ 9.30ಕ್ಕೆ ಪ್ಯಾನ್ ಐಐಟಿ ಯುಎಸ್.. ಆಯೋಜಿಸಿರುವ ಐಐಟಿ-2020 ಜಾಗತಿಕ ಶೃಂಗಸಭೆ ಉದ್ದೇಶಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ.

ವರ್ಷದ ಶೃಂಗಸಭೆಯ ಧ್ಯೇಯವಾಕ್ಯಭವಿಷ್ಯ ಈಗಿದೆಎಂಬುದಾಗಿದೆ. ಶೃಂಗಸಭೆ ಜಾಗತಿಕ ಆರ್ಥಿಕತೆ, ನಾವಿನ್ಯತೆ, ಆರೋಗ್ಯ, ಜನವಸತಿಗಳ ಸಂರಕ್ಷಣೆ ಮತ್ತು ಸಾರ್ವತ್ರಿಕ ಶಿಕ್ಷಣದ ಬಗ್ಗೆ ಗಮನ ಹರಿಸಲಿದೆ.

ಪ್ಯಾನ್ಐಐಟಿ, ಯುಎಸ್.., 20 ವರ್ಷಗಳ ಹಳೆಯ ಸಂಸ್ಥೆಯಾಗಿದೆ. 2003ರಿಂದ ಪ್ಯಾನ್ ಐಐಟಿ ಯುಎಸ್ಎ ಸಮಾವೇಶ ಆಯೋಜಿಸುತ್ತಿದ್ದು, ಕೈಗಾರಿಕೆ, ಶೈಕ್ಷಣಿಕ ಮತ್ತು ಸರ್ಕಾರ ಸೇರಿದಂತೆ ವಿವಿಧ ಕ್ಷೇತ್ರಗಳ ವಾಗ್ಮಿಗಳನ್ನು ಆಹ್ವಾನಿಸುತ್ತದೆ. ಪ್ಯಾನ್ಐಐಟಿ ಯುಎಸ್ಎ ಐಐಟಿ ಹಿರಿಯ ವಿದ್ಯಾರ್ಥಿಗಳ ತಂಡದ ಸ್ವಯಂಸೇವಕರಿಂದ ನಡೆಸಲ್ಪಡುತ್ತಿದೆ.

***


(Release ID: 1678216) Visitor Counter : 166