ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

132 ದಿನಗಳ ನಂತರ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4.28 ಲಕ್ಷಕ್ಕೆ ಇಳಿಕೆ


ಕಳೆದ ಮೂರು ದಿನಗಳಿಂದ ಸರಿಸುಮಾರು 30 ಸಾವಿರ ಹೊಸ ಕೋವಿಡ್ ಪ್ರಕರಣಗಳು

Posted On: 02 DEC 2020 11:30AM by PIB Bengaluru

ಭಾರತದಲ್ಲಿ ಒಟ್ಟು ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿತು, ಇಂದು 4.28ಲಕ್ಷ (4,28,644) ಕ್ಕಿಂತ ಕೆಳಗೆ ಇಳಿಕೆಯಾಗಿದೆ. ಇದು 132 ದಿನಗಳ ನಂತರ ಅತಿ ಕಡಿಮೆಯಾಗಿದೆ. 2020 ಜುಲೈ 23ರಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,26,167 ಇತ್ತು.

ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಮುಖವಾಗಿದೆ, ಭಾರತದಲ್ಲಿ ಸದ್ಯ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.4.51ರಷ್ಟು ಮಾತ್ರ.

WhatsApp Image 2020-12-02 at 10.32.49 AM.jpeg

ಕಳೆದ ಮೂರು ದಿನಗಳಿಂದ ದೇಶದಲ್ಲಿ ಹೊಸದಾಗಿ ಸೇರ್ಪಡೆಯಾಗುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ಸರಿಸುಮಾರು 30ಸಾವಿರ ಇದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 36,604 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ 43,062 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ ಐದು ದಿನಗಳಿಂದ ಪ್ರತಿದಿನದ ಹೊಸದಾಗಿ ಗುಣಮುಖವಾಗುತ್ತಿರುವ ಪ್ರಕರಣಗಳು ಹೊಸದಾಗಿ ಸೋಂಕು ಕಂಡು ಬರುತ್ತಿರುವವನ್ನು ಹಿಂದಿಕ್ಕಿದೆ.

WhatsApp Image 2020-12-02 at 10.36.03 AM.jpeg

ಹೊಸ ಸೋಂಕು ಪ್ರಕರಣಗಳಿಗಿಂತ ಹೊಸದಾಗಿ ಗುಣಮುಖವಾಗಿರುವವರ ಪ್ರಕರಣಗಳು ಹೆಚ್ಚಿವೆ, ಹಾಗಾಗಿ ಇಂದು ಚೇತರಿಕೆ ಪ್ರಮಾಣ ಶೇ.94.03ಕ್ಕೆ ಏರಿಕೆಯಾಗಿದೆ.


ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 89,32,647. ಗುಣಮುಖವಾಗಿರುವ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಕ್ರಮೇಣ ಏರಿಕೆಯಾಗುತ್ತಿದ್ದು, ಇಂದು ಅದು 85 ಲಕ್ಷ ದಾಟಿದೆ, ಸದ್ಯ ಪ್ರಮಾಣ 85,04,003 ರಲ್ಲಿದೆ.

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ.78.35ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯ 6,290 ಸೋಂಕಿತರು ಗುಣಮುಖವಾಗಿದ್ದರೆ, ನಂತರ ಕೇರಳದಲ್ಲಿ 6,151 ಮತ್ತು ದೆಹಲಿಯಲ್ಲಿ 5,036 ಸೋಂಕಿತರು ಗುಣಮುಖರಾಗಿದ್ದಾರೆ.

WhatsApp Image 2020-12-02 at 10.26.55 AM.jpeg

ಹೊಸದಾಗಿ ದೃಢಪಟ್ಟಿರುವ ಪ್ರಕರಣಗಳಲ್ಲಿ ಶೇ.77.25ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಳಿಡತ ಪ್ರದೇಶಕ್ಕೆ ಸಂಬಂಧಿಸಿದವು.

ಕೇರದಳಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು 5,375 ದೃಢಪಟ್ಟಿವೆ. ಆನಂತರ ಮಹಾರಾಷ್ಟ್ರದಲ್ಲಿ 4,930 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ.

WhatsApp Image 2020-12-02 at 10.26.51 AM.jpeg

ಕಳೆದ 24 ಗಂಟೆಗಳಲ್ಲಿ 501 ಸೊಂಕಿತರು ಹೊಸದಾಗಿ ಸಾವನ್ನಪ್ಪಿದ್ದಾರೆ.

ಹೊಸದಾಗಿ ಸಾವನ್ನಪ್ಪಿರುವ ಶೇ.79.84ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಳಿತ ಪ್ರದೇಶಕ್ಕೆ ಸಂಬಂಧಿಸಿದವು. ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯ ಸಾವು(95) ಸಂಭವಿಸಿವೆ ಮತ್ತು ಆನಂತರ ದೆಹಲಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ  ಕ್ರಮವಾಗಿ 86 ಮತ್ತು 52 ಸೋಂಕಿತರು ಸಾವನ್ನಪ್ಪಿದ್ದಾರೆ.

WhatsApp Image 2020-12-02 at 10.26.54 AM.jpeg

***



(Release ID: 1677672) Visitor Counter : 198