ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಸತತ 44ನೇ ದಿನ ಹೊಸ ಕೊರೊನಾ ಪ್ರಕರಣಗಳಿಗಿಂತ ಗುಣಮುಖವಾಗಿರುವ ಪ್ರಕರಣಗಳು ಹೆಚ್ಚು ದಾಖಲು


4.65 ಲಕ್ಷಕ್ಕಿಂತಲೂ ಕಡಿಮೆ ಸಕ್ರಿಯ ಪ್ರಕರಣಗಳು

Posted On: 16 NOV 2020 11:37AM by PIB Bengaluru

ಭಾರತದಲ್ಲಿ ಸತತ 44ನೇ ದಿನವಾದ ಇಂದೂ ಸಹ ಹೊಸ ಕೊರೊನಾ ಪ್ರಕರಣಗಳಿಗಿಂತ ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳೇ ಹೆಚ್ಚಾಗಿ ದಾಖಲೆ ನಿರ್ಮಾಣವಾಗಿದೆ.

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 43,851 ಕೋವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ  ಮತ್ತು 30,548 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ, ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,303 ಪ್ರಕರಣಗಳು ಇಳಿಕೆಯಾಗಿವೆ, ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 4,65,478 ಇದೆ.

http://static.pib.gov.in/WriteReadData/userfiles/image/image0012TQY.jpg

ಪ್ರತಿದಿನದ ಹೊಸ ಪ್ರಕರಣಗಳು 30,548ಕ್ಕೆ ಇಳಿಕೆಯಾಗಿದ್ದು, ಇದು ಐತಿಹಾಸಿಕ ಕಡಿಮೆಯಾಗಿದೆ. ಇದು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಯುರೋಪ್ ಮತ್ತು ಅಮೆರಿಕಾ ದೇಶಗಳಲ್ಲಿ ಪ್ರತಿದಿನ ಸೋಂಕು ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ.

http://static.pib.gov.in/WriteReadData/userfiles/image/image002TNAL.jpg

ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ ಮತ್ತು ಉನ್ನತ ಮಟ್ಟದ ಸಮಗ್ರ ಪರೀಕ್ಷಾ ಕ್ರಮಗಳ ಪರಿಣಾಮ ಸುಸ್ಥಿರವಾಗಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಮತ್ತು ಪಾಸಿಟಿವಿಟಿ ದರ ಕ್ರಮೇಣ ಇಳಿಕೆಯಾಗುತ್ತಿದೆ.

http://static.pib.gov.in/WriteReadData/userfiles/image/image0030DR4.jpg

ಇಂದು ಚೇತರಿಕೆ ಪ್ರಮಾಣ ಶೇ.93.27ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖವಾಗಿರುವ ಪ್ರಕರಣಗಳ ಸಂಖ್ಯೆ 82, 49,579 ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ವರದಿಯಾಗಿರುವ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ.78.59 ರಷ್ಟು ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ದೆಹಲಿಯಲ್ಲಿ ಅತಿ ಹೆಚ್ಚಿನ ಸಂಖ್ಯೆ 7,606 ಸೋಂಕಿತರು ಗುಣಮುಖರಾಗಿದ್ದಾರೆ. ಅಂತೆಯೇ ಕೇರಳದಲ್ಲಿ 6,648 ಸೋಂಕಿತ ಪ್ರಕರಣಗಳು ಗುಣಮುಖರಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ 4,480 ಸೋಂಕಿತರು ಹೊಸದಾಗಿ ಗುಣಮುಖರಾಗಿರುವುದು ವರದಿಯಾಗಿದೆ.

http://static.pib.gov.in/WriteReadData/userfiles/image/image004EE70.jpg

ಹೊಸ ಪ್ರಕರಣಗಳಲ್ಲಿ ಶೇ.76.63ರಷ್ಟು ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಕೇರಳದಲ್ಲಿ 4,581 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ದಿನಗಳಲ್ಲಿ  ದೆಹಲಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರಿಕಯಾಗುತ್ತಿತ್ತು, ನಿನ್ನೆ 3,325 ಹೊಸ ಪ್ರಕರಣಗಳು ವರದಿಯಾಗಿವೆ.ಆನಂತರ 3,053 ಹೊಸ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿವೆ.

http://static.pib.gov.in/WriteReadData/userfiles/image/image0051YQW.jpg

ಹೊಸದಾಗಿ ಮರಣವನ್ನಪ್ಪಿರುವ 435 ಪ್ರಕರಣಗಳ ಪೈಕಿ ಶೇ.78.85 ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಹೊಸದಾಗಿ ವರದಿಯಾಗಿರುವ ಮರಣ ಪ್ರಕರಣಗಳಲ್ಲಿ ದೆಹಲಿಯಲ್ಲಿ ಶೇ.21.84ರಷ್ಟು ಅಂದರೆ 95 ಪ್ರಕರಣಗಳು ಸೇರಿವೆ. ಮಹಾರಾಷ್ಟ್ರದಲ್ಲಿ ಶೇ.60 ಮಂದಿ ಅಂದರೆ ಶೇ.13.79ರಷ್ಟು ಸಾವು ವರದಿಯಾಗಿವೆ.

http://static.pib.gov.in/WriteReadData/userfiles/image/image006EH9T.jpg

14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ  ಮಿಲಿಯನ್ ಜನಸಂಖ್ಯೆಗೆ ಸಾವು ಪ್ರಮಾಣ ರಾಷ್ಟ್ರಿಯ ಸರಾಸರಿ 94ಕ್ಕಿಂತ ಅಧಿಕವಾಗಿವೆ.

http://static.pib.gov.in/WriteReadData/userfiles/image/image007FWTU.jpg

13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರಣ ಪ್ರಮಾಣ ದರ ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ.

http://static.pib.gov.in/WriteReadData/userfiles/image/image008KYW9.jpg

ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಐಸಿಯುನಲ್ಲಿ ಗಂಭೀರ ರೋಗಿಗಳ ಆರೈಕೆಗೆ ಕ್ಲಿನಿಲ್ ಆರೈಕೆ ನಿರ್ವಹಣೆ ಸುಧಾರಣೆಯಾಗುತ್ತಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಅನ್ವಯವಾಗುವಂತೆ ನಿರ್ದಿಷ್ಟ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಆಸ್ಪತ್ರೆ ಸೇರಿದ ಪ್ರಕರಣಗಳಿಗೆ ಮತ್ತು ಹೋಮ್ ಐಸೋಲೇಷನ್ ಪ್ರಕರಣಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ. ಕೋವಿಡ್ ನಿರ್ವಹಣೆ ಬೆಂಬಲಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಹುಶಿಸ್ತೀಯ ಕೇಂದ್ರ ತಂಡಗಳನ್ನೂ ಸಹ ನಿಯೋಜಿಸಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡಿರುವ ಸಾರ್ವಜನಿಕ ಆರೋಗ್ಯ ರಕ್ಷಣಾ ಕ್ರಮಗಳ ಬಗ್ಗೆ ನಿರಂತರ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಭೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.

***


(Release ID: 1673189) Visitor Counter : 233