ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ 10 ಕೋಟಿ ದಾಟಿದ ಸೋಂಕು ಪತ್ತೆ ಪರೀಕ್ಷೆ


ಕಳೆದ 9 ದಿನಗಳಲ್ಲಿ ಒಂದು ಕೋಟಿ ಸೋಂಕು ಪರೀಕ್ಷೆ

ಕಳೆದ 24 ಗಂಟೆಗಳಲ್ಲಿ ಸುಮಾರು 14.5 ಲಕ್ಷ ಕೋವಿಡ್ ಪರೀಕ್ಷೆ

Posted On: 23 OCT 2020 12:18PM by PIB Bengaluru

2020 ಜನವರಿಯಿಂದೀಚೆಗೆ ಒಟ್ಟಾರೆ ಕೋವಿಡ್-19 ಸೋಂಕು ಪ್ರಕರಣಗಳು ಭಾರತದಲ್ಲಿ ಗಣನೀಯವಾಗಿ ಏರಿಕೆಯಾಗಿವೆ. ಇಂದು ಒಟ್ಟು ಪರೀಕ್ಷೆಗಳ ಸಂಖ್ಯೆ ದಾಖಲೆಯ 10 ಕೋಟಿ (10,01,13,085) ದಾಟಿದೆ.

ಕಳೆದ 24 ಗಂಟೆಗಳಲ್ಲಿ 14,42,722 ಪರೀಕ್ಷೆಗಳನ್ನು ನಡೆಸುವ ಮೂಲಕ ಮತ್ತೊಂದು ದಾಖಲ ಮಾಡಲಾಗಿದೆ.

ದೇಶಾದ್ಯಂತ ಸುಮಾರು ಎರಡು ಸಾವಿರಕ್ಕೂ ಅಧಿಕ ಪ್ರಯೋಗಾಲಯಗಳನ್ನು ಸ್ಥಾಪಿಸುವುದರೊಂದಿಗೆ ದೇಶದಲ್ಲಿ ಸೋಂಕು ಪತ್ತೆ ಪರೀಕ್ಷೆ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಾಮೂಹಿಕ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ. ಪ್ರತಿ ದಿನ 15 ಲಕ್ಷಕ್ಕೂ ಅಧಿಕ ಸೋಂಕು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ.

http://static.pib.gov.in/WriteReadData/userfiles/image/image001GEH7.jpg

ದೇಶಾದ್ಯಂತ ಪ್ರಗತಿದಾಯಕವಾಗಿ ಪರೀಕ್ಷಾ ಮೂಲಸೌಕರ್ಯ ವಿಸ್ತರಣೆ ಹೆಚ್ಚುತ್ತಿರುವ ಪ್ರಕರಣಗಳ ನಿಯಂತ್ರಣದಲ್ಲಿ ಮಹತ್ವ ಪಾತ್ರವಹಿಸುತ್ತಿದೆ. ದೇಶದಲ್ಲಿ 1989 ಪ್ರಯೋಗಾಲಯಗಳಿದ್ದು, 1122 ಸರ್ಕಾರಿ ಪ್ರಯೋಗಾಲಯಗಳು ಮತ್ತು 867 ಖಾಸಗಿ ಪ್ರಯೋಗಾಲಯಗಳು ಸೇರಿವೆ. ಪ್ರಯೋಗಾಲಯಗಳಿಂದಾಗಿ ಪ್ರತಿ ದಿನದ ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ವೃದ್ಧಿಯಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಸುಸ್ಥಿರ ರೀತಿಯಲ್ಲಿ ಸಮಗ್ರ ಪರೀಕ್ಷಾ ಕ್ರಮಗಳನ್ನು ಕೈಗೊಂಡ ಪರಿಣಾಮ ರಾಷ್ಟ್ರಮಟ್ಟದಲ್ಲಿ ಪಾಸಿಟಿವಿಟಿ ದರ ತಗ್ಗುತ್ತಿದೆ. ಇದು ಸೋಂಕು ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿರುವುದರ ಸಂಕೇತವಾಗಿದೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ ಕುಸಿತವಾಗಿದ್ದರೂ, ಒಟ್ಟು ಪರೀಕ್ಷೆಗಳ ಸಂಖ್ಯೆ 10 ಕೋಟಿ ದಾಟಿದೆ. ರಾಷ್ಟ್ರೀಯ ಪಾಸಿಟಿವಿಟಿ ದರ ಇಂದು ಶೇ7.75ರಷ್ಟಿದೆ.

ಕೇಂದ್ರ ಸರ್ಕಾರದ ಪರೀಕ್ಷೆ, ನಿಗಾ, ಪತ್ತೆ, ಚಿಕಿತ್ಸೆ ಮತ್ತು ತಂತ್ರಜ್ಞಾನ- 5ಟಿ ಕಾರ್ಯತಂತ್ರಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿಯಾಗಿ ಅನುಸರಿಸುತ್ತಿರುವುದರಿಂದ ಫಲಿತಾಂಶ ಕಾಣಬಹುದಾಗಿದೆ.

http://static.pib.gov.in/WriteReadData/userfiles/image/image002K8ND.jpg

ದೇಶಾದ್ಯಂತ ಎಲ್ಲ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ತ್ವರಿತವಾಗಿ ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದ್ದು, ಅವುಗಳ ನಿಖರ ನಿಗಾ, ಪರಿಣಾಮಕಾರಿ ಕಣ್ಗಾವಲು ಮತ್ತು ಪತ್ತೆ ಹಾಗೂ ಸಕಾಲದಲ್ಲಿ ಮನೆಗಳಲ್ಲಿ ಅಥವಾ ಸೌಕರ್ಯಗಳಲ್ಲಿ ಚಿಕಿತ್ಸೆ ಹಾಗೂ ಗಂಭೀರ ಪ್ರಕರಣಗಳಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಒಟ್ಟಾರೆ ಎಲ್ಲಾ ಕ್ರಮಗಳಿಂದಾಗಿ ಸೋಂಕಿತರ ಸಾವಿನ ಪ್ರಮಾಣ ತಗ್ಗಿದೆ.

ಕಳೆದ 9 ದಿನಗಳಲ್ಲಿ ಒಂದು ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

http://static.pib.gov.in/WriteReadData/userfiles/image/image003HU7K.jpg

http://static.pib.gov.in/WriteReadData/userfiles/image/image004XXY9.jpg

ರಾಷ್ಟ್ರೀಯ ಅಂಕಿ-ಅಂಶಗಳಿಗೆ ಹೋಲಿಸಿದರೆ, 15 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಹೆಚ್ಚಿನ ಪಾಸಿಟಿವಿಟಿ ದರ ಕಂಡುಬಂದಿದೆ. ಇದು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಗ್ರ ಪರೀಕ್ಷೆಗಳನ್ನು ನಡೆಸುವ ಅಗತ್ಯತೆಯನ್ನು ಸೂಚಿಸುತ್ತದೆ.

***



(Release ID: 1667061) Visitor Counter : 167